ಬೆಂಗಳೂರು: ಸ್ಯಾಂಡಲ್ವುಡ್ ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಚಿತ್ರರಂಗದ ಪರವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಪುನೀತ ನಮನ’ (Puneetha Namana) ಕಾರ್ಯಕ್ರಮ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ತಮಿಳು ನಟ ವಿಶಾಲ್, ಸಹೋದರ ಪುನೀತ್ಗೆ ನೀಡಿರುವ ಮಾತು ಉಳಿಸಿಕೊಳ್ಳುತ್ತೇನೆ ಎಂಬ ಭರವಸೆ ನೀಡಿದರು.
ಯಾವುದೇ ರೀತಿಯ ಪ್ರಚಾರ ಅಥವಾ ಹಣಕ್ಕೋಸ್ಕರ ನಾನು ಈ ಕೆಲಸ ಮಾಡ್ತಿಲ್ಲ. ಇಲ್ಲಿಯವರೆಗೆ ಇರಲು ನನಗೆ ಸ್ವಂತಃ ಮನೆ ಇಲ್ಲ. ಪರವಾಗಿಲ್ಲ ಮುಂದಿನ ವರ್ಷ ನಾನು ಅದನ್ನು ಖರೀದಿ ಮಾಡ್ತೀನಿ. ಆದರೆ ಪುನೀತ್ ರಾಜ್‌ಕುಮಾರ್ ಅವರ ಸಮಾಜಮುಖಿ ಸೇವೆಗಳನ್ನು ಮುಂದುವರೆಸುತ್ತೇನೆ ಎಂದರು. ಪುನೀತ್ ರಾಜ್‌ಕುಮಾರ್ ಅವರು ಹೊತ್ತಿದ್ದ ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ನಾನು ಹೊರುತ್ತೇನೆಂದು ಈಗಾಗಲೇ ಹೇಳಿರುವೆ. ಈ ಮಾತನ್ನು ಉಳಿಸಿಕೊಳ್ಳುತ್ತೇನೆ. ನಾನು ಯಾವುದೇ ರೀತಿಯ ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿಲ್ಲ ಎಂದು ನಟ ವಿಶಾಲ್ ಹೇಳಿದರು.
ಪುನೀತ್ ರಾಜ್‌ಕುಮಾರ್ ಅವರ ಓದಿಸುತ್ತಿರುವ 1800 ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಈಗಾಗಲೇ ನಟ ವಿಶಾಲ್ ಹೇಳಿಕೆ ನೀಡಿದ್ದು, ಇನ್ಮುಂದೆ ಮಕ್ಕಳ ಶಿಕ್ಷಣದ ಜವಾಬ್ದಾರಿ ನನ್ನದು ಎಂದು ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೂ ಮುಂಚಿತವಾಗಿ ಮಾತನಾಡಿದ ಕಾಲಿವುಡ್ ನಟ ವಿಶಾಲ್ (Actor Vishal) ಪುನೀತ್ ರಾಜ್‌ಕುಮಾರ್ ನನ್ನ ಒಳ್ಳೆಯ ಸ್ನೇಹಿತ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಸಹೋದರನಾಗಿ ಪುನೀತ್ಗೆ ಪ್ರಾಮಿಸ್ ಮಾಡುತ್ತಿದ್ದೇನೆ. ಅವರಿಗೆ ಈಗಾಗಲೇ ಹೇಳಿರುವ ಮಾತು ನಡೆಸಿಕೊಡುತ್ತೇನೆ. ಬದುಕಿದ್ದ ವೇಳೆ ಪುನೀತ್ ಅವರು ಮಾಡಿರುವ ಸಮಾಜಮುಖಿ ಸೇವೆಗಳ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಅವುಗಳ ಬಗ್ಗೆ ಇದೀಗ ಇಡೀ ದೇಶಕ್ಕೆ ಗೊತ್ತಾಗಿವೆ. ನೀವು ಮಾಡುತ್ತಿದ್ದ ಕಾರ್ಯ ನಾನು ಮುಂದುವರೆಸುತ್ತೇನೆ ಎಂದರು.
ಇದನ್ನೂ ಓದಿರಿ: ಸ್ಯಾಂಡಲ್ವುಡ್ ಯುವರತ್ನ ಪುನೀತ್ಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಣೆ
ಪುನೀತ್ ನಮ್ಮಣ್ಣ, ಅವನ ಮುಖ ಇನ್ನು ನನ್ನ ಮುಂದೆ ಕಾಣುತ್ತಿದೆ. ಅಪ್ಪು ಇಲ್ಲದ ನೋವು ಎಲ್ಲರಲ್ಲಿಯೂ ಕಾಣಿಸುತ್ತಿದೆ. ಅಪ್ಪು ನಿಧನ ಅರಗಿಸಿಕೊಳ್ಳಲು ಈಗಲೂ ಸಾಧ್ಯವಾಗುತ್ತಿಲ್ಲ. ಒಳ್ಳೆಯದು ಮಾಡಬೇಕೆಂದು ಎಲ್ಲರಿಗೂ ಅನಿಸುವುದಿಲ್ಲ. ನನ್ನ ಹುಟ್ಟುಹಬ್ಬದಂದೇ ಪುನೀತ್ ನಿಧನರಾದರು. ಅವರ ಜನಪರ ಕಾರ್ಯಗಳನ್ನು ಮುಂದುವರೆಸಬೇಕಿದೆ. ಪುನೀತ್ ರಾಜ್‌ಕುಮಾರ್ ಓದಿಸುತ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರುವೆ ಎಂದರು.