ಮೆಗಾಸ್ಟಾರ್ ಚಿರಂಜೀವಿ ಹಾಗೂ ಕಿಚ್ಚ ಸುದೀಪ್ ಅಭಿನಯದ ಸೈರಾ ನರಸಿಂಹ ರೆಡ್ಡಿ ಸಿನಿಮಾ ಅಕ್ಟೋಬರ್ 2 ರಂದು ತೆರೆಗೆ ಅಪ್ಪಳಿಸುತ್ತಿದೆ. ವಿಶ್ವದಾದ್ಯಂತ ಏಕಾಕಾಲದಲ್ಲಿ ಐದು ಭಾಷೆಗಳಲ್ಲಿ ಸೈರಾ ನರಸಿಂಹ ರೆಡ್ಡಿ ರಿಲೀಸ್ ಆಗ್ತಿದೆ.
ಸಿನಿಮಾದಲ್ಲಿ ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿರೋದ್ರಿಂದ ಸೈರಾ ನರಸಿಂಹ ರೆಡ್ಡಿ ಹವಾ ರಾಜ್ಯದಲ್ಲೂ ಜೋರಾಗಿದೆ. ಬೆಂಗಳೂರಿನಲ್ಲಿ ಬೆಳಗ್ಗೆ ಮೂರು ಗಂಟೆಗೆ ಸೈರಾ ರಿಲೀಸ್ ಆಗ್ತಿದೆ.
ಜೆಸಿ ರಸ್ತೆಯ ಊರ್ವಶಿ ಹಾಗೂ ಎಂಜಿ ರಸ್ತೆಯ ಶಂಕರ್ ನಾಗ್ ಚಿತ್ರಮಂದಿರದಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಅಭಿಮಾನಿಗಳ ಒತ್ತಾಯದ ಮೆರೆಗೆ ಮೂರು ಗಂಟೆಗೇ ಶೋಗೆ ಅವಕಾಶ ಮಾಡಿಕೊಟ್ಟಿರುವ ವಿತರಕ ಧೀರಜ್, ಬುಕಿಂಗ್ ಓಪನ್ ಮಾಡಿದ 30 ನಿಮಿಷದಲ್ಲೇ ಟಿಕೆಟ್ ಸೋಲ್ಡ್ ಔಟ್ ಆಗಿದೆ ಎಂದು ಈ ಟಿವಿ ಭಾರತ್ ಗೆ ತಿಳಿಸಿದ್ರು.
ಇನ್ನೂ ಸೈರಾ ನರಸಿಂಹ ರೆಡ್ಡಿ ಚಿತ್ರವನ್ನು ಕರ್ನಾಟಕದಲ್ಲಿ ಧೀರಜ್ ಎಂಟರ್ ಪ್ರೈಸಸ್ ವಿತರಣೆ ಹಕ್ಕು ಪಡೆದಿದ್ದು, ಧೀರಜ್ ಎಂಟರ್ ಪ್ರೈಸಸ್ ನಲ್ಲಿ ಈ ಹಿಂದೆ ಯಜಮಾನ, ನಟಸಾರ್ವಭೌಮ, ಐ ಲವ್ ಯೂ ಚಿತ್ರಗಳನ್ನು ರಿಲೀಸ್ ಮಾಡಿದೆ. ಈ ಎಲ್ಲಾ ಚಿತ್ರಗಳು ಬಾಕ್ಸ್ ಆಫೀಸ್ ಲೂಟಿ ಮಾಡಿದ್ದು, ಈಗ ಸೈರಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡ್ತಾನ ಕಾದು ನೋಡ ಬೇಕಿದೆ.