ಹೊಸ ಪ್ರತಿಭೆ ಪ್ರಸಿದ್ಧ್ ನಿರ್ದೇಶನದ 'ರತ್ನಮಂಜರಿ' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು ಸತ್ಯ ಘಟನೆಯನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಲಾಗಿದೆ.
ಚಿತ್ರದಲ್ಲಿ ರಾಜ್ಚರಣ್ ನಾಯಕನಾಗಿ ಅಭಿನಯಿಸಿದ್ದು ಮೂವರು ನಾಯಕಿಯರಿದ್ದಾರೆ. ಅಖಿಲ ಪ್ರಕಾಶ್, ಪಲ್ಲವಿ ರಾಜ್ ಹಾಗೂ ಮುಂಬೈನ ಹುಡುಗಿ ಶ್ರದ್ಧಾ ಶಾಲಿನಿ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಕರ್ನಾಟಕದಲ್ಲಿ ಹುಟ್ಟಿ ಅಮೆರಿಕದಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ಜೀವನ ಕಟ್ಟಿಕೊಂಡಿರುವ ನಾಯಕ ಅನಿವಾರ್ಯ ಕಾರಣಗಳಿಂದ ಮಡಿಕೇರಿಗೆ ಬರುತ್ತಾನೆ. ನಾಯಕ ಭಾರತಕ್ಕೆ ವಾಪಸ್ ಬರಲು ಕಾರಣವೇನು. ಇಲ್ಲಿಗೆ ಬಂದ ನಂತರ ಏನೇನು ನಡೆಯುತ್ತದೆ ಎಂಬುದೇ ಚಿತ್ರಕಥೆಯಾಗಿದೆ.
- " class="align-text-top noRightClick twitterSection" data="">
ಚಿತ್ರದಲ್ಲಿ ಒಟ್ಟು 7 ಹಾಡುಗಳಿದ್ದು ಹರ್ಷವರ್ಧನ್ ರಾಜ್ ಸಂಗೀತ ನೀಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ವಿಜಯ ಪ್ರಕಾಶ್ ಹಾಗೂ ಟಿಪ್ಪು ಕೂಡಾ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಮುಂದಿನ ತಿಂಗಳು ಆಡಿಯೋ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಎಸ್ಎನ್ಎಸ್ ಹಾಗೂ ಶರಾವತಿ ಫಿಲಮ್ಸ್ ಲಾಂಛನದಲ್ಲಿ ಅನಿವಾಸಿ ಭಾರತಿಯರಾದ ಸಂದೀಪ್ ಕುಮಾರ್, ನಟರಾಜ್ ಹಳೇಬೀಡು ಹಾಗೂ ಡಾ.ನವೀನ್ ಕೃಷ್ಣ ಚಿತ್ರವನ್ನು ನಿರ್ಮಿಸಿದ್ದು ಮೇ ತಿಂಗಳಿನಲ್ಲಿ ತೆರೆಗೆ ಬರಲಿದೆ.