‘ಜೊತೆ ಜೊತೆಯಲಿ’ ಇದೀಗ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ನಿಂತಿದೆ. ಧಾರಾವಾಹಿ ತಿರುವು ಪಡೆದುಕೊಳ್ಳುತ್ತಿದ್ದು, ನಟಿ ಸುಧಾರಾಣಿ ಹಾಗೂ ನಟ ವಿಜಯ್ ಸೂರ್ಯ ಪ್ರವೇಶಿಸಿದ್ದಾರೆ.


ವಿಶಿಷ್ಟ ಕಥೆಯುಳ್ಳ ಈ ಧಾರಾವಾಹಿ ಹೆಚ್ಚು ಟಿಆರ್ಪಿ ಪಡೆದು ಮೂರನೇ ಸ್ಥಾನದಲ್ಲಿದೆ. 45 ವರ್ಷದ ಯಶಸ್ವಿ ಉದ್ಯಮಿ, ಶ್ರೀಮಂತ ಆರ್ಯವರ್ಧನ್ 20 ವರ್ಷದ ಅನು ಸಿರಿಮನೆಯನ್ನು ಪ್ರೀತಿಸುತ್ತಾನೆ. ಆರ್ಯವರ್ಧನ್ ಪ್ರವೇಶದಿಂದ ಅನು ಜೀವನ ಬದಲಾಗುತ್ತದೆ. ಆರ್ಯವರ್ಧನ್ ಆಕೆಯನ್ನು ವಿವಾಹವಾಗಲು ಬಯಸಿದ್ದರೂ ವಿಧಿಯ ಆಟ ಬೇರೆಯೇ ಇರುತ್ತದೆ.
- " class="align-text-top noRightClick twitterSection" data="
">
ಅನು ಜೀವನದಲ್ಲಿ ವಿಜಯ್ ಸೂರ್ಯ ಪ್ರವೇಶ ಪಡೆದಿದ್ದಾನೆ. ಆತ ಫಾರಿನ್ ರಿಟರ್ನ್ಡ್. ಆತನ ಅಮ್ಮ ಸುಧಾರಾಣಿ. ಆಕೆ ನಿವೃತ್ತ ಶಿಕ್ಷಕಿ. ಶಸ್ತ್ರಚಿಕಿತ್ಸೆಯಾದ ತಾಯಿಯ ಆರೈಕೆ ಮಾಡಲೆಂದು ವಿಜಯ್ ಸೂರ್ಯ ವಿದೇಶದಿಂದ ಹೇಳದೆ ಬರುತ್ತಾನೆ.
ಸುಬ್ಬುವಿಗೆ ಸೂರ್ಯನನ್ನು ನೋಡಿದಾಗಲೆಲ್ಲ ತನ್ನ ಮಗಳಿಗೆ ಒಳ್ಳೆಯ ವರ ಎನ್ನಿಸಲು ಪ್ರಾರಂಭವಾಗುತ್ತದೆ. ಇನ್ನೊಂದು ಕಡೆ ಆರ್ಯವರ್ಧನ್, ಸೂರ್ಯನನ್ನು ಭೇಟಿಯಾಗುತ್ತಾನೆ. ಅವರಿಬ್ಬರ ನಡುವೆ ಸ್ನೇಹ ಬೆಳೆಯುತ್ತದೆ. ಅನು ಯಾರನ್ನು ವಿವಾಹವಾಗುತ್ತಾಳೆ ಎನ್ನುವ ಸಸ್ಪೆನ್ಸ್ ಧಾರಾವಾಹಿ ನೋಡಿಯೇ ತಿಳಿಯಬೇಕು.