ETV Bharat / sitara

ಕುರುಕ್ಷೇತ್ರ ರಿಲೀಸ್​​​​​ ದಿನದಂದೇ ಕೋಟೆ ನಾಡಿನಲ್ಲಿ ಪೈಲ್ವಾನ್​​​​ ಗಾನಾಬಜಾನಾ - ವರಮಹಾಲಕ್ಷ್ಮೀ ಹಬ್ಬ

ಆಗಸ್ಟ್​ 9 ವರಮಹಾಲಕ್ಷ್ಮೀ ಹಬ್ಬದಂದು ಕೋಟೆ ನಗರಿ ಚಿತ್ರದುರ್ಗದಲ್ಲಿ ಅದ್ಧೂರಿಯಾಗಿ ಪೈಲ್ವಾನ್​​​ನ ಧ್ವನಿಸುರಳಿ ಬಿಡುಗಡೆಯಾಗಲಿದೆ.

ಪೈಲ್ವಾನ್
author img

By

Published : Aug 2, 2019, 5:01 PM IST

ವರಮಹಾಲಕ್ಷ್ಮೀ ಹಬ್ಬಕ್ಕೆ ಸುದೀಪ್ ಅವರ 'ಪೈಲ್ವಾನ್'​ ಹಾಗೂ ದರ್ಶನ್ ಅವರ 'ಕುರುಕ್ಷೇತ್ರ' ಸಿನಿಮಾಗಳು ತೆರೆಯ ಮೇಲೆ ಮುಖಾಮುಖಿಯಾಗಲಿವೆ ಅಂತಾ ಹೇಳಲಾಗಿತ್ತು. ಆದರೆ, ಇದೀಗ‌ ಈ ಎರಡು ಚಿತ್ರಗಳು ದೊಡ್ಡ ಅಂತರದಲ್ಲಿಯೇ ರಿಲೀಸ್‌ ಆಗುತ್ತಿವೆ. ಸದ್ಯ ಹೊಸ ವಿಷಯ ಏನಂದ್ರೆ ಕುರುಕ್ಷೇತ್ರ ಚಿತ್ರ ಬಿಡುಗಡೆ ದಿನವೇ ಪೈಲ್ವಾನ್‌ ಹವಾ ಸೃಷ್ಟಿಸೋಕೆ ಬರ್ತಿದ್ದಾನೆ.

kurukshetra movie
ಕುರುಕ್ಷೇತ್ರ ರಿಲೀಸ್ ಡೇಟ್​

ಚಾಲೆಂಜಿಂಗ್ ಸ್ಟಾರ್​ ದರ್ಶನ್ ನಟಿಸಿರುವ ಪೌರಾಣಿಕ ಸಿನಿಮಾ ಕುರುಕ್ಷೇತ್ರ ಇದೇ 9ರಂದು ಬಿಡುಗಡೆಯಾಗುತ್ತಿದೆ. ಅಂದೇ ಜಗಜಟ್ಟಿ ಮಲ್ಲನಾಗಿ ಸುದೀಪ್ ಅಭಿನಯಿಸಿರುವ ಪೈಲ್ವಾನ್​​ ಸಿನಿಮಾ ಆಡಿಯೋ ರಿಲೀಸ್ ಆಗಲಿದೆ. ಅಂದು ಕೋಟೆ ನಗರಿ ಚಿತ್ರದುರ್ಗದಲ್ಲಿ ಅದ್ಧೂರಿಯಾಗಿ ಪೈಲ್ವಾನ್​​​ನ ಗಾನಾಬಜಾನಾ ಅನಾವರಣಗೊಳ್ಳಲಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ ಕಿಚ್ಚ ಸುದೀಪ್, ನಿಮ್ಮೆಲ್ಲರ ನಿರೀಕ್ಷೆಯ ಪೈಲ್ವಾನ್ ಆಡಿಯೋ ಚಿತ್ರದುರ್ಗದಲ್ಲಿ ಆಗಸ್ಟ್ 9ಕ್ಕೆ ರಿಲೀಸ್​ ಆಗ್ತಿದೆ ಎಂದಿದ್ದಾರೆ.

ಇನ್ನು ಪ್ಯಾನ್ ಇಂಡಿಯಾ ಪೈಲ್ವಾನ್ ಸಿನಿಮಾದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಹಾಡುಗಳು ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿವೆ. ಸೆಪ್ಟೆಂಬರ್ 12ರಂದು ಸಿನಿಮಾ ರಿಲೀಸ್​ ಆಗಲಿದೆ.

Intro:ವರಮಹಾಲಕ್ಷ್ಮಿ ಹಬ್ಬಕ್ಕೆ ಮುಖಾ ಮುಖಿಯಾಗಲಿರೋ ಸುದೀಪ್ ದರ್ಶನ್ !!

ಈ ವರ್ಷದ ವರ ಮಹಾಲಕ್ಷ್ಮಿ ಹಬ್ಬಕ್ಕೆ, ಸ್ಯಾಂಡಲ್ ವುಡ್ ನಲ್ಲಿ ಕಿಚ್ಚ ಸುದೀಪ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳ ಮಧ್ಯೆ ,ಬಾಕ್ಸ್ ಆಫೀಸ್‌ನಲ್ಲಿ ಬಿಗ್ ಫೈಟ್
ಆಗುತ್ತೆ ಅಂತಾ ಹೇಳಲಾಗಿತ್ತು..ಇನ್ನು ಎರಡು ಸಿನಿಮಾಗಳು ಅದ್ಧೂರಿ ಮೇಕಿಂಗ್ ಹಾಗೂ ತಾರಾಗಣದಿಂದಾಗಿ ಸಿಕ್ಕಾಪಟ್ಟೇ ಕ್ರೇಜ್ ಕ್ರಿಯೇಟ್ ಮಾಡಿವೆ.ಇದೀಗ‌ಎರಡು ಚಿತ್ರಗಳು ದೊಡ್ಡ ಅಂತರದಲ್ಲಿಯೇ ರಿಲೀಸ್‌ ಆಗೋದು ಈಗ ಪಕ್ಕಾ ಆಗಿದೆ. ಹೊಸ ವಿಷ್ಯ ಏನಂದ್ರೆ, ಕುರುಕ್ಷೇತ್ರ ಚಿತ್ರ ಬಿಡುಗಡೆ ದಿನವೂ ಪೈಲ್ವಾನ್‌ ಹವಾ ಸೃಷ್ಟಿಸೋಕೆ ಬರ್ತಿದ್ದಾನೆ..ದರ್ಶನ್ ನಟನೆಯ ಪೌರಾಣಿಕ ಸಿನಿಮಾ ಕುರುಕ್ಷೇತ್ರ ಒಂದೆಡೆಯಾದ್ರೆ, ಇನ್ನೊಂದೆಡೆ ಕುಸ್ತಿ ಜಗಜಟ್ಟಿ ಮಲ್ಲನಾಗಿರೋ ಸುದೀಪ್ ಅಭಿನಯದ ಪೈಲ್ವಾನ್​​ ಸಿನಿಮಾ ಕೂಡ ಅಷ್ಟೇ ಫೀವರ್ ಜಾಸ್ತಿ ಮಾಡಿದೆ. Body:ಇದೀಗ ಕುರುಕ್ಷೇತ್ರ ಚಿತ್ರ ಇದೇ ಆಗಸ್ಟ್​ 9ಕ್ಕೆ ರಿಲೀಸ್ ಆದ್ರೆ, ಅದೇ ದಿನವೇ ಪೈಲ್ವಾನ್​ ಆಡಿಯೋ ಲಾಂಚ್ ಕೂಡ ಆಗಲಿದೆ. ಈ ಬಗ್ಗೆ ಕಿಚ್ಚ ಸುದೀಪ್ ಕೂಡ ಟ್ವೀಟ್ ಮಾಡಿದ್ದಾರೆ.ನಿಮ್ಮೆಲ್ಲರ ನಿರೀಕ್ಷೆಯ ಪೈಲ್ವಾನ್ ಆಡಿಯೋ ಚಿತ್ರದುರ್ಗದಲ್ಲಿ ಆಗಸ್ಟ್ 9ಕ್ಕೆ ರಿಲೀಸ್​ ಆಗ್ತಿದ್ದು, ಮತ್ತೊಮ್ಮೆ ಸ್ಟಾರ್​​ಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದೇವೆ ಅಂತಾ ಹೇಳಿದ್ದಾರೆ. ಈ ಹಿಂದೆ ಆಡಿಯೋ ಲಾಂಚ್ ಬಗ್ಗೆ, ನಿರ್ದೇಶಕ ಕೃಷ್ಣ ಅಧಿಕೃತ ದಿನಾಂಕ ಹೇಳೋದಾಗಿ ಹೇಳಿದ್ರು ಅದರಂತೆ ವರಮಹಾಲಕ್ಷ್ಮಿ ಹಬ್ಬಕ್ಕೆ ಪೈಲ್ವಾನ್ ಆಡಿಯೋ ಲಾಂಚ್ ಮಾಡಿ ಧಮಾಕ ಸೃಷ್ಟಿಸೋಕೆ ರೆಡಿಯಾಗಿದೆ.Conclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.