ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲು ಸಿದ್ದತೆ ನಡೆಸುತ್ತಿರುವ ಹಾಡು ಕರ್ನಾಟಕ ತಂಡಕ್ಕೆ ಕಿಚ್ಚ ಸುದೀಪ್ ಶುಭಾಶಯ ತಿಳಿಸಿದ್ದಾರೆ. ವಿಶೇಷ ಏನಂದ್ರೆ ಹಾಡು ಕರ್ನಾಟಕ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಕೋಟಿಗೊಬ್ಬ 3 ಸಿನಿಮಾದ ಹಾಡೊಂದರ ಸಾಲುಗಳನ್ನು ಹೇಳಿ ವಿಶ್ ಮಾಡಿದ್ದಾರೆ.
-
ಕೋಟಿಗೊಬ್ಬ 3 ಸಿನೆಮಾ ಹಾಡಿನ ಝಲಕ್ ಕೊಡುತ್ತಾ ಹಾಡು ಕರ್ನಾಟಕಕ್ಕೆ ಕಿಚ್ಚನ ಈ ಸ್ವರಾರ್ಪಣೆ! @KicchaSudeep #HaaduKarnataka pic.twitter.com/8sEdkoXp9Y
— Colors Kannada (@ColorsKannada) January 28, 2020 " class="align-text-top noRightClick twitterSection" data="
">ಕೋಟಿಗೊಬ್ಬ 3 ಸಿನೆಮಾ ಹಾಡಿನ ಝಲಕ್ ಕೊಡುತ್ತಾ ಹಾಡು ಕರ್ನಾಟಕಕ್ಕೆ ಕಿಚ್ಚನ ಈ ಸ್ವರಾರ್ಪಣೆ! @KicchaSudeep #HaaduKarnataka pic.twitter.com/8sEdkoXp9Y
— Colors Kannada (@ColorsKannada) January 28, 2020ಕೋಟಿಗೊಬ್ಬ 3 ಸಿನೆಮಾ ಹಾಡಿನ ಝಲಕ್ ಕೊಡುತ್ತಾ ಹಾಡು ಕರ್ನಾಟಕಕ್ಕೆ ಕಿಚ್ಚನ ಈ ಸ್ವರಾರ್ಪಣೆ! @KicchaSudeep #HaaduKarnataka pic.twitter.com/8sEdkoXp9Y
— Colors Kannada (@ColorsKannada) January 28, 2020
'ಹಲ್ಲೋ ಹಲ್ಲೋ ಮಿಟಕ್ಲಾಡಿ, ಮಿಡುಕುತೈತೆ ನಿನ್ನ ಬಾಡಿ, ಟಚ್ಚಾಗೋದ್ರೆ ಬಯ್ಕೋಬೇಡಿ ಸಾರಿ' ಎಂಬ ಹಾಡಿನ ಸಾಲುಗಳನ್ನು ಕಿಚ್ಚ ಹೇಳಿದ್ದಾರೆ. ಈ ಮೂಲಕ ಕೋಟಿಗೊಬ್ಬ 3 ಸಿನಿಮಾಕ್ಕಾಗಿ ಕಾಯುತ್ತಿದ್ದವರಿಗೆ ಈ ಹಾಡು ಕೊಂಚ ಕುತೂಹಲವನ್ನು ತಣಿಸಿದೆ.
ಹಾಡು ಕರ್ನಾಟಕ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಖ್ಯಾತಿಯ ಚಂದನಾ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅಲ್ಲದೇ ಸಾಧು ಕೋಕಿಲಾ, ಹರಿಕೃಷ್ಣ, ರಘುದಿಕ್ಷಿತ್ ಜಡ್ಜ್ಗಳಾಗಿ ಕಾಣಿಸಿಕೊಳ್ಳಲಿದ್ದಾರೆ.