ETV Bharat / sitara

’’ಬದುಕಿದ್ದಾಗ ಅವರ ಬಗ್ಗೆ ಮಾತನಾಡುವುದು ಗಂಡಸ್ತನ’’: ತೆಲುಗು ನಟನಿಗೆ ಕಿಚ್ಚ ವಾರ್ನ್​​​​

ಯಾರಾದರೂ ಬದುಕಿದ್ದಾಗ ಅವರ ಬಗ್ಗೆ ಮಾತನಾಡಿದರೆ ಗಂಡಸ್ತನ ಇರತ್ತೆ ಎಂಬ ನಂಬಿಕೆ ಇದೆ. ಅವರು ನಿಧನರಾದ ಮೇಲೆ ಕೆಟ್ಟದಾಗಿ ಮಾತನಾಡುವುದು ಸರಿಯಲ್ಲ. ನಿಮ್ಮ ಮಾತನ್ನು ವಾಪಸ್​​ ತಗೊಳ್ಳಿ. ವಾರ್ನಿಂಗ್​ ಕೊಡೊ ಮಟ್ಟಕ್ಕೆ ಹೋಗಬೇಡಿ ಎಂದು ತೆಲುಗು ನಟನ ಮೇಲೆ ಕಿಚ್ಚ ಗರಂ ಆಗಿದ್ದಾರೆ.

Sudeep warns to Telegu actor rangaraju
ಬದುಕಿದ್ದಾಗ ಅವರ ಬಗ್ಗೆ ಮಾತನಾವುದು ಗಂಡಸ್ತನ : ತೆಲುಗು ನಟನಿಗೆ ಕಿಚ್ಚ ವಾರ್ನ್​​​​
author img

By

Published : Dec 12, 2020, 4:45 PM IST

ಸಾಹಸಸಿಂಹ ವಿಷ್ಣುವರ್ಧನ್ ಕುರಿತಂತೆ ತೆಲುಗು ನಟ ವಿಜಯ್ ರಂಗರಾಜು ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದೀಗ ಸ್ಯಾಂಡಲ್​​​​ವುಡ್​​ನಲ್ಲಿ ವಿಷ್ಣುವರ್ಧನ್ ಅಭಿಮಾನಿಗಳಿಗೆ ಹಾಗೂ ಕನ್ನಡದ ಸ್ಟಾರ್ ನಟರ ಕೆಂಗಣ್ಣಿಗೆ ಗುರಿಯಾಗಿದೆ.

ಸುದೀಪ್​​

ಈ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದು, ಭಾರತದ ಎಲ್ಲ ಚಿತ್ರರಂಗವರೂ ಒಟ್ಟಿಗೆ ಚೆನ್ನಾಗಿರಬೇಕಾದ್ರೆ ನೀವು ವಿಷ್ಣು ಸರ್​​ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದು ಸರಿಯಲ್ಲ. ಯಾರಾದ್ರು ಬದುಕಿದ್ದಾಗ ಅವರ ಬಗ್ಗೆ ಮಾತನಾಡಿದ್ರೆ ಗಂಡಸ್ತನ ಇರತ್ತೆ ಎಂಬ ನಂಬಿಕೆ ಇದೆ. ಅವರು ನಿಧನರಾದ ಮೇಲೆ ಕೆಟ್ಟದಾಗಿ ಮಾತನಾಡುವುದು ಸರಿಯಲ್ಲ. ನಿಮ್ಮ ಮಾತನ್ನು ವಾಪಸ್​​ ತಗೊಳ್ಳಿ. ವಾರ್ನಿಂಗ್​ ಕೊಡೊ ಮಟ್ಟಕ್ಕೆ ಹೋಗಬೇಡಿ. ಅವರಿಲ್ಲದೇ ಇರಬಹುದು ಕೋಟ್ಯಾಂತರ ಮಕ್ಕಳನ್ನು ಬಿಟ್ಟು ಹೋಗಿದ್ದಾರೆ ಎಂದು ತೆಲುಗು ನಟನ ಮೇಲೆ ಕಿಚ್ಚ ಗರಂ ಆಗಿದ್ದಾರೆ.

ಇದನ್ನೂ ಓದಿ : ಡಾ. ವಿಷ್ಣುವರ್ಧನ್ ಅವರನ್ನು ನಿಂದಿಸಿದ್ದ ತೆಲುಗು ನಟನ ಮೇಲೆ ಕ್ರಮ ಕೈಗೊಳ್ಳುವಂತೆ ಅನಿರುದ್ಧ್ ಮನವಿ

ಇನ್ನು ಪುನೀತ್​ ಟ್ವೀಟ್​ ಮೂಲಕ ಕಿಡಿಕಾರಿದ್ದು, ನಮ್ಮ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆ ಕಲಾವಿದ ಕ್ಷಮೆ ಕೇಳಿ ತನ್ನ ಮಾತುಗಳನ್ನ ಹಿಂಪಡಿಯಬೇಕು ಭಾರತೀಯ ಚಿತ್ರರಂಗ ನಮ್ಮ ಮನೆ ಎಲ್ಲ ಕಲಾವಿದರು ಒಂದು ಕುಟುಂಬ ಇದ್ದ ಹಾಗೆ, ಕಲೆಗೆ ಕಲಾವಿದರಿಗೆ ಗೌರವಿಸೋದು ನಮ್ಮ ಕರ್ತವ್ಯ “ಮೊದಲು ಮಾನವನಾಗು” ಒಬ್ಬ ಕಲಾವಿದನಾಗಬೇಕಾದರೆ ಅವನಿಗಿರಬೇಕಾದ ಮೊದಲ ಅರ್ಹತೆ ತನ್ನ ಸಹದ್ಯೋಗಿ ಕಲಾವಿದರ ಬಗ್ಗೆ ಗೌರವ ಹಾಗೂ ಪ್ರೀತಿಯನ್ನು ತೋರುವುದು ಯಾವುದೇ ಭಾಷೆಯ ನಟರಾದರು ಗೌರವ ಮೊದಲು ಎಂದು ಪುನೀತ್​​ ಟ್ವೀಟ್​ ಮಾಡಿದ್ದಾರೆ.

Sudeep warns to Telegu actor rangaraju
ಪುನೀತ್​​ ಟ್ವೀಟ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.