ETV Bharat / technology

ಅಂಡರ್​ವಾಟರ್​ ಫೋಟೋಗ್ರಾಫಿ ಮೋಡ್ ಸೇರಿ ಅನೇಕ ವೈಶಿಷ್ಟ್ಯ ಹೊಂದಿದೆ ಈ ರಿಯಲ್​ಮಿ ಹೊಸ ಮಾಡೆಲ್​ - REALME GT 7 PRO SMARTPHONE

Realme GT 7 Pro Smartphone: ಇನ್ನು ಕೆಲವೇ ದಿನಗಳಲ್ಲಿ Realme GT 7 Pro ಸ್ಮಾರ್ಟ್‌ಫೋನ್‌ನ ಪೂರ್ವ ಬುಕಿಂಗ್ ಆರಂಭಗೊಳ್ಳಲಿದೆ. ಇದರ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳೋಣಾ ಬನ್ನಿ..

REALME GT 7 PRO  REALME GT 7 PRO SMARTPHONE BOOKING  REALME GT 7 PRO FEATURES  REALME GT 7 PRO SMARTPHONE
ರಿಯಲ್​ಮಿ ಹೊಸ ಮಾಡೆಲ್​ (realme)
author img

By ETV Bharat Tech Team

Published : Nov 16, 2024, 2:23 PM IST

Realme GT 7 Pro Smartphone: Realme GT 7 Pro ಸ್ಮಾರ್ಟ್‌ಫೋನ್‌ನ ಪೂರ್ವ ಬುಕಿಂಗ್ ನವೆಂಬರ್ 18 ರಿಂದ ಪ್ರಾರಂಭವಾಗಲಿದೆ. ನೀವು ಈ ಸ್ಮಾರ್ಟ್‌ಫೋನ್ ತೆಗೆದುಕೊಳ್ಳಲು ಬಯಸಿದ್ರೆ Realme.com ನಲ್ಲಿ ಮಧ್ಯಾಹ್ನ 1 ಗಂಟೆಗೆ ಮುಂಗಡವಾಗಿ ಬುಕ್ ಮಾಡಬಹುದಾಗಿದೆ. ನೀವು ಅಮೆಜಾನ್​ ಸೇರಿದಂತೆ ಇತರ ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿ ಫೋನ್ ಅನ್ನು ಆರ್ಡರ್ ಮಾಡಬಹುದು. ಈ ಫೋನ್‌ನ ವೈಶಿಷ್ಟ್ಯಗಳು, ಬ್ಯಾಂಕ್ ಆಫರ್​ ಮತ್ತು ಇಎಂಐ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..

Realme GT 7 Pro ಪ್ರಿ-ಬುಕಿಂಗ್: ರಿಯಲ್​ಮಿ ತನ್ನ ಹೊಸ ಸ್ಮಾರ್ಟ್‌ಫೋನ್ ರಿಯಲ್​ಮಿ ಜಿಟಿ 7 ಪ್ರೋ ಮುಂಗಡ ಬುಕಿಂಗ್ ಅನ್ನು 18 ನವೆಂಬರ್ 2024 ರಿಂದ ಪ್ರಾರಂಭಿಸಲಿದೆ. ಗ್ರಾಹಕರು Amazon.in, Realmeನ ಅಧಿಕೃತ ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳಿಂದ ಫೋನ್ ಅನ್ನು ಮೊದಲೇ ಬುಕ್ ಮಾಡಬಹುದು. Realme GT 7 Pro ಬಿಡುಗಡೆಯಾದ ನಂತರವೇ ನವೆಂಬರ್ 26 ರಂದು ಮಧ್ಯಾಹ್ನ 1 ಗಂಟೆಯಿಂದ realme.com ನಲ್ಲಿ ಖರೀದಿಗೆ ಲಭ್ಯವಿರುತ್ತದೆ.

ಈ ಫೋನ್​ನ ವೈಶಿಷ್ಟ್ಯಗಳು: ರಿಯಲ್​ಮಿ ತನ್ನ ಹೊಸ ಮಾಡೆಲ್​ನ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. Realme GT 7 Pro ನ ಕ್ಯಾಮೆರಾ ಸೆಟಪ್ ತುಂಬಾ ವಿಶೇಷವಾಗಿದೆ. ಇದು 3x ಆಪ್ಟಿಕಲ್ ಜೂಮ್ ಮತ್ತು 120x ಡಿಜಿಟಲ್ ಜೂಮ್ ಅನ್ನು ಬೆಂಬಲಿಸುವ 50MP ಸೋನಿ IMX882 ಟೆಲಿಫೋಟೋ ಲೆನ್ಸ್ ಅನ್ನು ಹೊಂದಿರುತ್ತದೆ. ಇದಲ್ಲದೆ, ಇದು 50MP ಸೋನಿ IMX906 ಪ್ರಾಥಮಿಕ ಕ್ಯಾಮೆರಾ ಮತ್ತು 8MP ವೈಡ್-ಆಂಗಲ್ ಲೆನ್ಸ್ ಅನ್ನು ಸಹ ಹೊಂದಿರುತ್ತದೆ.

ಅಂಡರ್​ವಾಟರ್​ ಫೋಟೋಗ್ರಾಫಿ ಮೋಡ್: ಈ ಹೊಸ ಸ್ಮಾರ್ಟ್​ಫೋನ್​ ಅಂಡರ್​ವಾಟರ್ ಫೋಟೋಗ್ರಫಿ ಮೋಡ್ ಅನ್ನು ಸಹ ಹೊಂದಿದೆ. ಇದು ಬಳಕೆದಾರರಿಗೆ ನೀರಿನಲ್ಲಿ ಚಿತ್ರಗಳನ್ನು ತೆಗೆದುಕೊಳ್ಳಬಹುದಾಗಿದೆ. IP69 ರೇಟೆಡ್ ಫೋನ್ ಅನ್ನು 2 ಮೀಟರ್ ಆಳದ ನೀರಿನಲ್ಲಿ 30 ನಿಮಿಷಗಳ ಕಾಲ ಮುಳುಗಿಸಬಹುದು. ಈ ರಿಯಲ್​ಮಿ ಫೋನ್ 6.78-ಇಂಚಿನ LTPO Eco OLED ಡಿಸ್​ಪ್ಲೇ, 120Hz ರಿಫ್ರೆಶ್ ರೇಟ್​ ಮತ್ತು 6000 nits ಗರಿಷ್ಠ ಬ್ರೈಟ್​ನೆಸ್​ ಹೊಂದಿದೆ. ಇದಲ್ಲದೆ, 6500mAh ಬ್ಯಾಟರಿ ಮತ್ತು 120W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಸಹ ಒದಗಿಸಲಾಗಿದೆ.

ಫುಲ್​ ವಾಟರ್​ಪ್ರೂಫ್​​: Realme GT 7 Pro ಭಾರತದಲ್ಲಿ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್‌ನೊಂದಿಗೆ ಬರುವ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಈ ಫೋನ್‌ನ ಸುಂದರವಾದ ಮಾರ್ಸ್ ವಿನ್ಯಾಸವು ಪ್ರೀಮಿಯಂ ನೋಟವನ್ನು ನೀಡುತ್ತದೆ. ಅಲ್ಲದೆ, ಕ್ರಿಸ್ಟಲ್ ಆರ್ಮರ್ ಗ್ಲಾಸ್ ತನ್ನ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಫೋನ್ IP69 ರೇಟಿಂಗ್‌ನೊಂದಿಗೆ ಬರುತ್ತದೆ. ಇದು ಡಸ್ಟ್​ ಮತ್ತು ವಾಟರ್​ನಿಂದ ಸಂಪೂರ್ಣವಾಗಿ ಸುರಕ್ಷಿತವಾಗಿದೆ.

Realme GT 7 Pro ಬಿಡುಗಡೆ ದಿನಾಂಕ, ಬೆಲೆ: Realme GT 7 Pro ಅನ್ನು ನವೆಂಬರ್ 26, 2024 ರಂದು ಮಧ್ಯಾಹ್ನ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಬಿಡುಗಡೆಯ ಸಮಯದಲ್ಲಿ ಫೋನ್‌ನ ಬೆಲೆಯನ್ನು ಘೋಷಿಸಲಾಗುವುದು. ಆದರೆ ರಿಯಲ್‌ಮಿ ಪ್ರಕಾರ, ಇದು ಪ್ರೀಮಿಯಂ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಆಗಿರುತ್ತದೆ.

Realme GT 7 Pro ನಲ್ಲಿ ಏನಿದೆ ಆಫರ್: Realme GT 7 Pro ಫೋನ್ ಅನ್ನು ಮುಂಗಡವಾಗಿ ಬುಕಿಂಗ್ ಮಾಡುವಾಗ ನೀವು 3 ಸಾವಿರ ರೂಪಾಯಿ ಬ್ಯಾಂಕ್ ರಿಯಾಯಿತಿ, 12 ತಿಂಗಳ ನೋ-ಕಾಸ್ಟ್ ಇಎಂಐ, 1 ವರ್ಷದ ಸ್ಕ್ರೀನ್ ಡ್ಯಾಮೇಜ್​ ಇನ್ಸುರೆನ್ಸ್​ ಮತ್ತು 1 ವರ್ಷದ ಎಕ್ಸ್ಟೆಂಡೆಡ್​ ವಾರಂಟಿ ಇದೆ.

ಓದಿ: ಕವಾಸಕಿ ಲವರ್ಸ್​ಗೆ ಗುಡ್​ ನ್ಯೂಸ್​: ದೇಶದ ಮಾರುಕಟ್ಟೆಗೆ ಹೊಸ ಬೈಕ್​ ಪರಿಚಯಿಸಿದ ಕಂಪನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.