ETV Bharat / health

ಕೂದಲು ಉದ್ದವಾಗಿ ಬೆಳೆಯಬೇಕಾ? ಈ ರೀತಿ ತುಳಸಿ ಎಲೆಗಳನ್ನ ಉಪಯೋಗಿಸಿ ನೋಡಿ - TULASI BENEFITS FOR HAIR AND SKIN

Tulasi Benefits for Hair and Skin: ತುಳಸಿಯಲ್ಲಿ ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಅದರಲ್ಲೂ ಕೂದಲು ಹಾಗೂ ಚರ್ಮಕ್ಕೆ ತುಂಬಾ ಒಳ್ಳೆಯದು ಎಂದು ಆಯುರ್ವೇದ ತಜ್ಞರು ತಿಳಿಸುತ್ತಾರೆ.

BEAUTY BENEFITS OF TULASI  BEEFITS OF TULSI FOR SKIN  TULSI OIL BENEFITS  HOW TO USE TULSI LEAVES FOR HAIR
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Nov 16, 2024, 2:21 PM IST

Tulasi Benefits for Hair and Skin: ಪ್ರತಿಯೊಬ್ಬರೂ ಕೂಡ ಸುಂದರವಾಗಿ ಕಾಣಲು ಬಯಸುತ್ತಾರೆ. ಹಲವರು ತಮ್ಮ ಕೂದಲು ಮತ್ತು ಚರ್ಮದ ಅಂದವನ್ನು ಹೆಚ್ಚಿಸಿಕೊಳ್ಳಲು ಮಾರುಕಟ್ಟೆಯಲ್ಲಿ ದೊರೆಯುವ ವಿವಿಧ ಬಗೆಯ ಸೌಂದರ್ಯವರ್ಧಕಗಳನ್ನು ಬಳಕೆ ಮಾಡುತ್ತಾರೆ. ಪ್ರತಿಯೊಬ್ಬರ ಮನೆಯಲ್ಲೂ ಸುಲಭವಾಗಿ ಬೆಳೆಸಲಾಗುವ ತುಳಸಿ ಗಿಡವು ತುಂಬಾ ಉಪಯುಕ್ತವಾಗಿದೆ. ತುಳಸಿ ಎಲೆಗಳು ಕೂದಲು ಹಾಗೂ ಹಲ್ಲಿನ ಆರೈಕೆಗೆ ಒಳ್ಳೆಯದು ಎಂದು ಆಯುರ್ವೇದ ತಜ್ಞರು ತಿಳಿಸುತ್ತಾರೆ. ತುಳಸಿ ಎಲೆಗಳನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿಯೋಣ.

ಕೂದಲಿನ ಆರೋಗ್ಯ ಒಳ್ಳೆಯದು: ತುಳಸಿ ಎಲೆಯಲ್ಲಿನ ಔಷಧೀಯ ಗುಣಗಳು ಕೂದಲಿನ ಸೌಂದರ್ಯ ಹಾಗೂ ಆರೋಗ್ಯ ಸುಧಾರಿಸಲು ಬಹುಉಪಯುಕ್ತವಾಗಿದೆ. ಕೆಲವರು ತಲೆಹೊಟ್ಟು, ತುರಿಕೆ ಹಾಗೂ ನೆತ್ತಿಯ ಮೇಲೆ ಸಣ್ಣ ಹುಣ್ಣುಗಳಂತಹ ತೊಂದರೆಗಳಿಂದ ಬಳಲುತ್ತಿದ್ದಾರೆ. ತುಳಸಿ ಎಣ್ಣೆಯು ಇವೆಲ್ಲಾ ಸಮಸ್ಯೆಗಳನ್ನು ಪರಿಶೀಲಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಇದಕ್ಕಾಗಿ ತುಳಸಿ ಎಲೆಗಳನ್ನು ಪುಡಿ ಮಾಡಿ, (ಸುಮಾರು ಹತ್ತು ಟೀಸ್ಪೂನ್​ ಪುಡಿ) ಪುಡಿಯನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಬಿಸಿ ಮಾಡಬೇಕು. ಎಣ್ಣೆ ಬಿಸಿಯಾಗಲು ಪ್ರಾರಂಭಿಸಿದ ನಂತರ, ಅದರಲ್ಲಿ ಸ್ವಲ್ಪ ಮೆಂತ್ಯ ಕಾಳುಗಳನ್ನು ಹಾಕಬೇಕಾಗುತ್ತದೆ.

ಅವುಗಳನ್ನು ಎಣ್ಣೆಯಲ್ಲಿ ಬೇಯಿಸಿದ ಬಳಿಕ, ಸ್ಟೌವ್ ಆಫ್ ಮಾಡಿ ಹಾಗೂ ಎಣ್ಣೆಯನ್ನು ತಣ್ಣಗಾಗಲು ಬಿಡಬೇಕು. ಅದರ ನಂತರ ಮಿಶ್ರಣವನ್ನು ಒಣ ಬಾಟಲಿಯಲ್ಲಿ ಶೇಖರಿಸಿ ವಾರಕ್ಕೆ ಎರಡು ಸಲ ಮಸಾಜ್ ಮಾಡಿ, ಒಂದು ಗಂಟೆಯ ನಂತರ ಸ್ನಾನ ಮಾಡಿದರೆ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸುಲಭವಾಗಿ ಪರಿಹಾರ ಮಾಡುತ್ತದೆ. ಈ ಎಣ್ಣೆಯಲ್ಲಿ ಮೆಂತ್ಯ ಹಾಗೂ ತುಳಸಿ ಇರುವುದರಿಂದ ಕೂದಲು ಆರೋಗ್ಯಕ್ಕೆ ಸಹಕಾರಿಯಾಗುತ್ತೆ ಎಂದು ತಜ್ಞರು ಹೇಳುತ್ತಾರೆ.

ಹಲ್ಲಿನ ಆರೈಕೆಗೆ ಉತ್ತಮ: ಕೆಲವು ತುಳಸಿ ಎಲೆಗಳನ್ನು ಒಣಗಿಸಬೇಕು. ಮತ್ತು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ ಇಡಬೇಕಾಗುತ್ತದೆ. ಈ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಹಾಗೂ ಪ್ರತಿದಿನ ರಾತ್ರಿ ಮಲಗುವ ಮೊದಲು 10 ನಿಮಿಷಗಳ ಕಾಲ ಹಲ್ಲುಗಳ ಮೇಲೆ ಉಜ್ಜಿಕೊಳ್ಳಬೇಕು. ಇದನ್ನು ನಿಯಮಿತವಾಗಿ ಮಾಡುವುದರಿಂದ ಹಲ್ಲಿನ ಆರೈಕೆಗೆ ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದು ಆಯುರ್ವೇದ ಹೇಳಲಾಗುತ್ತದೆ.

ವಿವಿಧ ಪ್ರಯೋಜನಗಳು:

  • ತುಳಸಿ ಎಲೆಗಳು ಹಾಗೂ ಮೊಟ್ಟೆಯ ಬಿಳಿಭಾಗವನ್ನು ಬೆರೆಸಿ ಪೇಸ್ಟ್ ತಯಾರಿಸಬೇಕು. ನಂತರ ಇದನ್ನು ಮುಖಕ್ಕೆ ಹಚ್ಚಿ 20 ನಿಮಿಷಗಳ ಕಾಲ ಬಿಟ್ಟು ನಂತರ ತೊಳೆದುಕೊಳ್ಳಬೇಕಾಗುತ್ತದೆ. ವಾರಕ್ಕೊಮ್ಮೆ ಹೀಗೆ ಮಾಡಿದರೆ ತ್ವಚೆಯು ಹೊಳೆಯುತ್ತದೆ ಮತ್ತು ಮುಖವು ಕಾಂತಿಯುತವಾಗುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
  • ಜೊತೆಗೆ ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ತಣ್ಣಗಾಗಿಸಿದ ದ್ರಾವಣವನ್ನು ಟೋನರ್ ಆಗಿ ಕೂಡ ಬಳಕೆ ಮಾಡಬಹುದು. ಇದರಿಂದ ಮೊಡವೆಗಳು ಕಡಿಮೆಯಾಗುವುದಲ್ಲದೆ ಮುಖವು ಕಾಂತಿಯುತವಾಗುತ್ತದೆ.
  • ಪ್ರತಿನಿತ್ಯ ತುಳಸಿ ಎಲೆಗಳನ್ನು ಅಗಿಯುವುದರಿಂದ ಶೀತದಂತಹ ತೊಂದರೆಗಳಿಂದ ಮುಕ್ತಿ ಪಡೆಯಬಹುದಾಗಿದೆ.
  • ಇದರೊಂದಿಗೆ ತುಳಸಿ ರಸವನ್ನು ಕುಡಿಯುವುದರಿಂದ ಚರ್ಮ ಹಾಗೂ ಮೆದುಳು ಮತ್ತು ಹಲ್ಲುಗಳಿಗೆ ತುಂಬಾ ಒಳ್ಳೆಯ ಔಷಧವಾಗಿದೆ. ದೇಹದ ರೋಗನಿರೋಧಕ ಶಕ್ತಿಯು ಕೂಡ ಹೆಚ್ಚುತ್ತದೆ ಎಂದು ಆಯುರ್ವೇದ ತಜ್ಞರು ಸಲಹೆಗಳನ್ನು ನೀಡುತ್ತಾರೆ.
  • ಪ್ರಮುಖ ವಿಷಯ ಗಮನಿಸಿ: ತುಳಸಿ ಎಲೆಗಳನ್ನು ಬಳಸುವ ಮುನ್ನ ಧೂಳು ಇಲ್ಲದಂತೆ ಸ್ವಚ್ಛವಾಗಿ ತೊಳೆದು ಇಟ್ಟುಕೊಳ್ಳಬೇಕು.

ಓದುಗರಿಗೆ ಮುಖ್ಯ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಹಾಗೂ ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

ಇವುಗಳನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.