ಟೆಕ್ಸಾಸ್ (ಅಮೆರಿಕ): ಮೈಕ್ ಟೈಸನ್ ಮತ್ತು ಜೇಕ್ ಪೌಲ್ ನಡುವಿನ ಬಾಕ್ಸಿಂಗ್ ಪಂದ್ಯಕ್ಕೂ ಮುನ್ನ ಭಾರತದ ನೀರಜ್ ಗೋಯತ್ ಅದೇ ವೇದಿಕೆಯಲ್ಲಿ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಈವೆಂಟ್ನಲ್ಲಿ ನಡೆದ ಬಾಕ್ಸಿಂಗ್ ಪಂದ್ಯದಲ್ಲಿ ನೀರಜ್ ಬ್ರೆಜಿಲ್ ಬಾಕ್ಸರ್ನನ್ನು ಬಗ್ಗುಬಡಿದಿದ್ದಾರೆ.
ಜೇಕ್ಸ್ ಪೌಲ್ ಮತ್ತು ಮೈಕ್ ಟೈಸನ್ ನಡುವಿನ ಮೆಗಾ ಫೈಟ್ಗೂ ಮೊದಲು 3 ಅಂಡರ್ ಕಾರ್ಡ್ ಪಂದ್ಯಗಳು ನಡೆದಿದ್ದವು. ಇವುಗಳಲ್ಲಿ 33 ವರ್ಷದ ಭಾರತೀಯ ಬಾಕ್ಸರ್ ನೀರಜ್ ಗೋಯತ್ 6 ಸುತ್ತಿನ ಸೂಪರ್ ಮಿಡಲ್‌ವೇಟ್-ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಪಂದ್ಯದಲ್ಲಿ ಬ್ರೆಜಿಲಿಯನ್ ಯೂಟ್ಯೂಬರ್ ಮತ್ತು ಹಾಸ್ಯನಟ ವಿಂಡರ್ಸನ್ ನ್ಯೂನ್ಸ್ ಅವರನ್ನು ಸೋಲಿಸುವ ಮೂಲಕ ದಾಖಲೆ ಬರೆದಿದ್ದಾರೆ. 6 ಸುತ್ತುಗಳ ಕಠಿಣ ಸ್ಪರ್ಧೆಯಲ್ಲಿ ಭಾರತೀಯ ಬಾಕ್ಸರ್ 60-54 ಅಂತರದಿಂದ ಗೆಲುವು ಸಾಧಿಸಿದ್ದಾರೆ.
History has been created 🇮🇳
— Neeraj Goyat 🚀 (@GoyatNeeraj) November 16, 2024
This is a New gateway for young indian boxers to the world of Boxing .This event had a Full House of 90,000 People . it can’t get Bigger. We Made it 🇮🇳🙏#neerajgoyat pic.twitter.com/1clcGpTRpJ
ಯಾರು ಈ ನೀರಜ್ ಗೋಯತ್: ನೀರಜ್ ಗೋಯತ್ ಹರಿಯಾಣ ಮೂಲದವರಾಗಿದ್ದು, ಭಾರತೀಯ ಬಾಕ್ಸರ್ ಆಗಿ ಹಲವು ದಾಖಲೆ ಬರೆದಿದ್ದಾರೆ. ಹರಿಯಾಣದ ಬೇಗಂಪುರದಲ್ಲಿ ಜನಿಸಿದ ಇವರು 2006ರಲ್ಲಿ 10ನೇ ತರಗತಿಯಲ್ಲಿದ್ದಾಗಲೇ ಬಾಕ್ಸಿಂಗ್ ಪ್ರಾರಂಭಿಸಿದ್ದರು. ಅವರು ಮಾಜಿ ವಿಶ್ವ ಹೆವಿವೇಯ್ಟ್ ಚಾಂಪಿಯನ್ ಮೈಕ್ ಟೈಸನ್ ಅವರನ್ನು ತಮ್ಮ ಆರಾಧ್ಯ ದೈವವೆಂದು ಪರಿಗಣಿಸಿ ಬಾಕ್ಸಿಂಗ್ ಆರಂಭಿಸಿದ್ದರು.
Neeraj Goyat wins the first match of #PaulTyson in a unanimous decision. pic.twitter.com/1mI90Zqo8y
— Netflix (@netflix) November 16, 2024
ಹವ್ಯಾಸಿ ಬಾಕ್ಸರ್ ಆಗಿ, ಗೋಯತ್ ವೆನೆಜುವೆಲಾದಲ್ಲಿ 2016ರಲ್ಲಿ ನಡೆದ ಒಲಿಂಪಿಕ್ ಅರ್ಹತಾ ಪಂದ್ಯ ಆಡಿದ್ದರು. ಆದರೆ ಅಂತಿಮವಾಗಿ ಸ್ವಲ್ಪ ಅಂತರದಿಂದ ತಪ್ಪಿಸಿಕೊಂಡರು. ಇದಕ್ಕೂ ಮುನ್ನ 2008 ಯೂತ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಆದಾಗ್ಯೂ, ವೃತ್ತಿಪರ ಬಾಕ್ಸರ್ ಆಗಿ, ಗೋಯತ್ WBC (ವರ್ಲ್ಡ್ ಬಾಕ್ಸಿಂಗ್ ಕೌನ್ಸಿಲ್) ನಿಂದ ಶ್ರೇಯಾಂಕ ಪಡೆದ ಮೊದಲ ಭಾರತೀಯ ಬಾಕ್ಸರ್ ಎನಿಸಿಕೊಂಡಿದ್ದಾರೆ.
ಅವರು 2015 ರಿಂದ 2017ರ ವರೆಗೆ ಸತತ 3 ವರ್ಷಗಳ ಕಾಲ WBC ಏಷ್ಯನ್ ಚಾಂಪಿಯನ್ ಆಗಿದ್ದಾರೆ. ಗೋಯತ್ ಇದುವರೆಗೂ 24 ಪಂದ್ಯಗಳನ್ನು ಆಡಿದ್ದು ಇದರಲ್ಲಿ 18 ಗೆಲುವು, 4 ಸೋಲು ಮತ್ತು 2 ಡ್ರಾ ಮಾಡಿಕೊಂಡಿದ್ದಾರೆ.
भरोटा सा भर दिया ब्राज़ीलियाँ का 💥
— Randeep Hooda (@RandeepHooda) November 16, 2024
Congratulations Neeraj Goyat .. a super victory .. great skill and showmanship 👊🏽👊🏽 @GoyatNeeraj #TysonPaul pic.twitter.com/4kAySLZHNn
ಟೈಸನ್ vs ಜೇಕ್ ಪೌಲ್: ಈ ಪಂದ್ಯ ಬಳಿಕ ನಡೆದ ಹೆವಿವೇಟ್ ಪಂದ್ಯದಲ್ಲಿ 58 ವರ್ಷದ ಲೆಜೆಂಡರಿ ಬಾಕ್ಸರ್ ಮೈಕ್ ಟೈಸನ್ ಸೋಲನುಭವಿಸಿದರು. 19 ವರ್ಷಗಳ ನಂತರ ಬಾಕ್ಸಿಂಗ್ಗೆ ಪ್ರವೇಶಿಸಿ ಅವರು ಜೇಕ್ ಪಾಲ್ ವಿರುದ್ಧ ಸೋಲನ್ನು ಕಂಡರು. ಮೈಕ್ ಟೈಸನ್ ಅವರನ್ನು 74-78 ಅಂತರದಿಂದ ಜೇಕ್ ಪೌಲ್ ಸೋಲಿಸಿದರು.
ಇದನ್ನೂ ಓದಿ: ದಿಗ್ಗಜ ಬಾಕ್ಸರ್ Mike Tyson ಸೋಲಿಸಿದ ಯೂಟ್ಯೂಬರ್ Jake Paul: ಪಂದ್ಯವಾಡಲು ಇಬ್ಬರು ಪಡೆದ ಹಣ ಎಷ್ಟು ಗೊತ್ತಾ?