ETV Bharat / entertainment

ಒಟ್ಟಿಗಿದ್ದು ಒಳಗೊಳಗೇ ಕತ್ತಿ ಮಸೆದಿದ್ಯಾರು? ಕಿಚ್ಚನ ಪಂಚಾಯ್ತಿಯಲ್ಲಿ ಚರ್ಚೆಯಾಗಬೇಕಿರೋ ವಿಷಯಗಳೇನು? - BBK 11 ELIMINATION

''ಒಟ್ಟಿಗಿದ್ದು ಒಳಗೊಳಗೇ ಕತ್ತಿ ಮಸೆದಿದ್ಯಾರು?'' ವಾರದ ಕಥೆ ಕಿಚ್ಚನ ಜೊತೆ ಕ್ಯಾಪ್ಷನ್​ನೊಂದಿಗೆ ಪ್ರೋಮೋ ಅನಾವರಣಗೊಂಡಿದೆ.

BBK 11 Elimination
'ಬಿಗ್​ ಬಾಸ್​​ ಕನ್ನಡ ಸೀಸನ್​​ 11' (Photo: Bigg Boss Poster)
author img

By ETV Bharat Entertainment Team

Published : Nov 16, 2024, 2:00 PM IST

ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್​ ಬಾಸ್​​ ಕನ್ನಡ ಸೀಸನ್​​ 11' ಏಳನೇ ವಾರಾಂತ್ಯದಲ್ಲಿದೆ. ಕಳೆದ ವಾರ ಎಲಿಮಿನೇಷನ್​ ನಡೆದಿಲ್ಲ. ಕೊನೆಗೆ ಟ್ವಿಸ್ಟ್​ ನಡೆದಿದ್ದು, ಭವ್ಯಾ ಬಚಾವ್​ ಅಗಿದ್ದಾರೆ. ಆದ್ರೆ ಈ ವಾರ ಮನೆಯಿಂದ ಓರ್ವರು ಹೊರನಡೆಯೋದು ಬಹುತೇಕ ಪಕ್ಕಾ. ಈ ಬಾರಿ ಯಾರು ಮನೆಯಿಂದ ಹೊರನಡೆಯುತ್ತಾರೆ ಎಂಬ ಕುತೂಹಲ ಸಹಸ್ಪರ್ಧಿಗಳ ಜೊತೆಗೆ ನೋಡುಗರಿಗೂ ಇದೆ. ರಾತ್ರಿ 9 ಗಂಟೆಗೆ ಸಂಪೂರ್ಣ ಸಂಚಿಕೆ ಪ್ರಸಾರ ಆಗಲಿದೆ.

''ಒಟ್ಟಿಗಿದ್ದು ಒಳಗೊಳಗೇ ಕತ್ತಿ ಮಸೆದಿದ್ಯಾರು?'' ವಾರದ ಕಥೆ ಕಿಚ್ಚನ ಜೊತೆ. ಇಂದು ರಾತ್ರಿ 9ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​ನೊಂದಿಗೆ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಂಡಿದೆ. ''ಹತ್ತು ಕಂಟಸ್ಟೆಂಟ್​ಗಳ ಮೇಲೆ ನಾಮಿನೇಷನ್​ ತೂಗುಗತ್ತಿ. ಒಟ್ಟಿಗಿದ್ದು ಒಳಗೊಳಗೇ ಕತ್ತಿ ಮಸೆದವರಾರು?. ಕಿಚ್ಚನ ಪಂಚಾಯಿತಿಯಲ್ಲಿ ಪಾಸಾಗೋದ್ಯಾರು?. ಗೇಟ್​ ಪಾಸ್​ ಯಾರಿಗೆ?. ವಾರದ ಕಥೆ ಕಿಚ್ಚನ ಜೊತೆಗೆ. ಇಂದು ರಾತ್ರಿ 8 ಗಂಟೆಗೆ'' ಎಂಬ ಪ್ರೋಮೋದ ಹಿನ್ನೆಲೆ ದನಿ ನೋಡುಗರ ಕುತೂಹಲ ಕೆರಳಿಸಿದೆ. ಸಂಪೂರ್ಣ ಸಂಚಿಕೆ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ.

''ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ ಯಾವೆಲ್ಲಾ ವಿಷ್ಯ ಚರ್ಚೆ ಮಾಡ್ಬೇಕು?'' ಎಂಬ ಕ್ಯಾಪ್ಷನ್​ನೊಂದಿಗೆ ಕಳೆದ ದಿನ ಪೋಸ್ಟರ್ ಅನಾವರಣಗೊಳಿಸಲಾಗಿತ್ತು. ಇಲ್ಲಿನ ಪ್ರತೀ ಸ್ಪರ್ಧಿಗಳು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆ ಪ್ರಕಾರ, ಸೋಷಿಯಲ್​ ಮೀಡಿಯಾದಲ್ಲಿ ಪ್ರತಿಯೊಬ್ಬರ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ. ಇಂದಿನ ಸಂಚಿಕೆಯಲ್ಲಿ ಯಾವ ವಿಷಯ ಹೈಲೆಟ್​ ಆಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: 'ಭೈರತಿ ರಣಗಲ್​​' ಅತ್ಯುತ್ತಮ ಪ್ರದರ್ಶನ: ಮೊದಲ ದಿನ ಬಾಕ್ಸ್​​ ಆಫೀಸ್​ನಲ್ಲಿ ಗಳಿಸಿದ್ದಿಷ್ಟು

ಬಿಗ್​ ಬಾಸ್​​ ಕಾರ್ಯಕ್ರಮದ ಹೈಲೆಟ್​ ಅಭಿನಯ ಚಕ್ರವರ್ತಿ ಅಂತಲೇ ಹೇಳಬಹುದು. ವಾರಾಂತ್ಯದ ಕಾರ್ಯಕ್ರಮಗಳನ್ನು ವೀಕ್ಷಿಸುವ ಸಪರೇಟ್​ ಫ್ಯಾನ್​​ ಬೇಸ್ ಇದೆ. ಕಿಚ್ಚನ ನಿರೂಪಣಾ ಶೈಲಿ, ಟಾಕಿಂಗ್​ ಸ್ಟೈಲ್​, ಡೆಸ್ಸಿಂಗ್​ ಸ್ಟೈಲ್​, ಬಾಡಿ ಲ್ಯಾಂಗ್ವೇಜ್​ ​, ತಪ್ಪುಗಳನ್ನು ತಿದ್ದಿತೀಡುವ ರೀತಿ, ನಾಜೂಕಾಗೇ ಚಾಟಿ ಬೀಸುವ ರೀತಿ, ಪ್ರಬುದ್ಧತೆಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ವಾರದ ದಿನಗಳಲ್ಲಿ ನಡೆದ ವಿಷಯಗಳನ್ನು ಅವಲೋಕಿಸಿ ವಾರಾಂತ್ಯ ಸರಿಪಡಿಸುವ ಕೆಲಸ ನಡೆಯುತ್ತದೆ. ಇಂದಿನ ಎಪಿಸೋಡ್​ ಗಾಂಭೀರ್ಯದಿಂದ ಕೂಡಿದ್ದರೆ, ನಾಳೆಯ ಸಂಚಿಕೆ ಮೋಜು ಮಸ್ತಿಯಿಂದ ಇರಲಿದೆ. ಸದ್ಯ ಇಂದು ರಾತ್ರಿ ಪ್ರಸಾರ ಆಗಲಿರುವ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್​​ ವೀಕ್ಷಿಸಲು ಅಪಾರ ಸಂಖ್ಯೆಯ ಕನ್ನಡಿಗರು ಕಾತರರಾಗಿದ್ದಾರೆ.

ಇದನ್ನೂ ಓದಿ: ''ಅಹಂಕಾರಿ, ಕಳಪೆ ಮೋಕ್ಷಿತಾ'': ದನಿ ಎತ್ತಿದ ಧನರಾಜ್​​; ಬಿಗ್ ಬಾಸ್​ ಸ್ಪರ್ಧಿಗಳಿಗೆ ಆಶ್ಚರ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.