ETV Bharat / state

ಕೃಷಿಮೇಳ: ಸಮುದ್ರದಲ್ಲಿ ಮಾತ್ರವಲ್ಲ- ನಿಮ್ಮ ಮನೆಯ ತೊಟ್ಟಿಯಲ್ಲಿ ಮುತ್ತು ಉತ್ಪಾದಿಸಿ, ಲಾಭ ಗಳಿಸಿ - BENGALURU AGRICULTURE FAIR

ಸಮುದ್ರದಲ್ಲಿ ಮಾತ್ರವಲ್ಲ..‌ ನಿಮ್ಮ ಮನೆಯ ತೊಟ್ಟಿಯಲ್ಲಿಯೂ 'ಮುತ್ತು' ಉತ್ಪಾದಿಸಿ ಲಾಭ ಪಡೆಯಬಹುದಾಗಿದೆ. ಈ ಕುರಿತು ಈಟಿವಿ ಭಾರತ ಕನ್ನಡ ಪ್ರತಿನಿಧಿ ಭರತ್​ ರಾವ್​ ಮಾಡಿರುವ ವಿಶೇಷ ವರದಿ ಇಲ್ಲಿದೆ..

PEARLS BUSINESS  EARN PROFIT  FRESHWATER PEARL FARMING  BENGALURU
ಮನೆಯ ತೊಟ್ಟಿಯಲ್ಲಿ ಮುತ್ತು ಉತ್ಪಾದಿಸಿ, ಲಾಭ ಗಳಿಸಿ (ETV Bharat)
author img

By ETV Bharat Karnataka Team

Published : Nov 16, 2024, 2:09 PM IST

ಬೆಂಗಳೂರು: ಮಾತು ಆಡಿದರೆ ಹೋಯ್ತು.. ಮುತ್ತು ಒಡೆದರೆ ಹೋಯಿತು ಎಂಬ ಗಾದೆ ಮಾತಿದೆ.. 'ಮುತ್ತು' ಎಂಬುದು ಇಲ್ಲಿ ಎಷ್ಟು ಶೇಷ್ಠ ಎಂಬುದನ್ನು ತೋರಿಸುತ್ತದೆ.‌ ಮುತ್ತು ಎಂದರೆ ಬರೀ ಸಮುದ್ರದಲ್ಲಿ ಮಾತ್ರ ಸಿಗುವುದಿಲ್ಲ.. ಬಯಸಿದರೆ ನಿಮ್ಮ ಮನೆಯ ಕೊಳದಲ್ಲಿಯೂ ಮುತ್ತು ಕೃಷಿ ಮಾಡಬಹುದಾಗಿದೆ.

ಸಿಹಿ ನೀರಿನಿಂದ ಕಪ್ಪೆಚಿಪ್ಪು ಬಳಸಿ ಮುತ್ತು ತಯಾರಿಸುವ ಕೃಷಿಯನ್ನ ಮಾಡಬಹುದಾಗಿದೆ. ಹೆಬ್ಬಾಳದ ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿಮೇಳದಲ್ಲಿ ಮುತ್ತಿನ ಕೃಷಿ ನೋಡುಗರ ಗಮನ ಸೆಳೆಯುತ್ತಿದೆ.

ಮನೆಯ ತೊಟ್ಟಿಯಲ್ಲಿ ಮುತ್ತು ಉತ್ಪಾದಿಸಿ, ಲಾಭ ಗಳಿಸಿ (ETV Bharat)

ಒಳನಾಡು ಮೀನುಗಾರಿಕೆ ಘಟಕವು ಸಿಹಿನೀರು ಮುತ್ತು ಕೃಷಿ ಬಗ್ಗೆ ಸಾರ್ವಜನಿಕರಿಗೆ‌ ಮೇಳದಲ್ಲಿ ಮಾಹಿತಿ ನೀಡಲಾಗುತ್ತಿದೆ. ಮನೆಯ ತಾರಸಿ ಮುಂದೆಯೂ ಅಥವಾ ಬಯಲಿನಲ್ಲಿ ಸಿಹಿ ನೀರಿನಿಂದ ಕಪ್ಪೆ ಚಿಪ್ಪು ಬಳಸಿ ಮುತ್ತು ಕೃಷಿ ಮಾಡಬಹುದಾಗಿದೆ. ಮುತ್ತು ಕೃಷಿ ಸರಳ ಸೂತ್ರ ಅನುಸರಿಸಿದರೆ ಹೆಚ್ಚು ಲಾಭ ಗಳಿಸಬಹುದಾಗಿದೆ.

ಹಾಕಿದ ಬಂಡವಾಳಕ್ಕೆ ನಿವ್ವಳ ಲಾಭವಾಗಿ 50 ಸಾವಿರ ರೂಪಾಯಿ ಸಂಪಾದಿಸಬಹುದಾಗಿದೆ. ಕೃಷಿ ವಿವಿಯ ಒಳನಾಡು ಮೀನುಗಾರಿಕಾ ಘಟಕದಿಂದ ಈವರೆಗೆ 500 ಮಂದಿ ತರಬೇತಿ ಪಡೆದಿದ್ದಾರೆ. ಮೂರು ದಿನಗಳ ಈ ತರಬೇತಿಗೆ 5500 ರೂಪಾಯಿ ನೀಡಿ ತರಬೇತಿ ಪಡೆದು ಮುತ್ತು ಕೃಷಿ ಮಾಡಬಹುದಾಗಿದೆ ಎಂದು ಘಟಕದ ಸಹಾಯಕ ಪ್ರಾಧ್ಯಾಪಕ ಡಾ. ವೆಂಕಟಪ್ಪ ತಿಳಿಸಿದ್ದಾರೆ‌.

ಸಿಹಿನೀರು ಮುತ್ತು ಕೃಷಿಯಲ್ಲಿ ಎಷ್ಟು ಪ್ರಬೇಧಗಳಿವೆ. ಸಂತ್ಪಾನೋತ್ಪತಿ, ಆಹಾರಾಭ್ಯಾಸ, ಕೃತಕವಾಗಿ ಮುತ್ತು ಬಳಕೆ ಹೇಗೆ ಮಾಡಬೇಕು ಎಂಬ ವಿಧಾನಗಳ ಬಗ್ಗೆ ತರಬೇತಿಯಲ್ಲಿ ಹೇಳಿಕೊಡಲಾಗುತ್ತದೆ. 3 ಸಾವಿರ ಲೀಟರ್​ನ ತೊಟ್ಟಿಯಲ್ಲಿ 300 ರಷ್ಟು ಕಪ್ಪೆಚಿಪ್ಪು ಇರಿಸಿ ಬೆಳೆಸಬಹುದು. ಶೇ.50 ರಷ್ಟಾದರೂ ಮುತ್ತನ್ನು ತಯಾರಿಸಬಹುದಾಗಿದೆ. 9 ರಿಂದ 11 ತಿಂಗಳ ಅವಧಿಯಲ್ಲಿ ಮುತ್ತು ಉತ್ಪಾದಿಸಬಹುದು. ಆಸಕ್ತರು ಈ ಸಂಖ್ಯೆಗೆ ಕರೆ ಮಾಡಬಹದಾಗಿದೆ. ಡಾ. ವೆಂಕಟಪ್ಪ ಅವರ ಮೊಬೈಲ್​ ಸಂಖ್ಯೆ ಇದಾಗಿದೆ 9480162803.

ಓದಿ: ಬೆಂಗಳೂರಿಗೆ ಟ್ರಾಲಿ ಬ್ಯಾಗ್​ಗಳಲ್ಲಿ ಕಳ್ಳಸಾಗಣೆ ಯತ್ನ: ಏರ್​ಪೋರ್ಟ್​ನಲ್ಲಿ 40 ವನ್ಯಜೀವಿಗಳ ರಕ್ಷಿಸಿದ ಕಸ್ಟಮ್ಸ್ ಅಧಿಕಾರಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.