ಕೋಟಿಗೊಬ್ಬ 3 ಸಿನಿಮಾ ನೋಡಲು ಕಿಚ್ಚನ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಇಷ್ಟೊತ್ತಿಗಾಗಲೇ ಸಿನಿಮಾ ರಿಲೀಸ್ ಆಗಬೇಕಿತ್ತು. ಆದ್ರೆ ಕೊರೊನಾ ಲಾಕ್ಡೌನ್ನಿಂದ ಸಿನಿಮಾ ಕಾರ್ಯಗಳು ತಡವಾಗಿ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿದೆ.

ಕೋಟಿಗೊಬ್ಬ 3 ಸಿನಿಮಾದ ಚಿತ್ರೀಕಣರ ಸಂಪೂರ್ಣವಾಗಿ ಮುಗಿದಿದ್ದು, ಸಿನಿಮಾ ಮಂದಿರಗಳು ಯಥಾ ಸ್ಥಿತಿಗೆ ಬಂದ ಮೇಲೆ ಚಿತ್ರವನ್ನು ತೆರೆಮೇಲೆ ತರುವ ನಿರ್ಧಾರ ಮಾಡಲಾಗಿದೆ.

ಆದ್ರೆ ಕೋಟಿಗೊಬ್ಬ 3 ನಿರೀಕ್ಷೆಯಲ್ಲಿರುವ ಅಭಿಮಾನಿಗಳಿಗೆ ದೀಪಾವಳಿದ ಉಡುಗೊರೆ ಕೊಡೋದಿಕ್ಕೆ ಚಿತ್ರತಂಡ ಪ್ಲಾನ್ ಮಾಡಿದೆ. ಇದೇ ನವೆಂಬರ್ 15 ರಂದು ಚಿತ್ರದ 'ಪಟಾಕಿ ಪೋರಿಯೋ' ಎಂಬ ಹಾಡನ್ನು ರಿಲೀಸ್ ಮಾಡಲಾಗುತ್ತಿದೆ. ಈ ಹಾಡಿನಲ್ಲಿ ಕಿಚ್ಚನ ಜೊತೆ ಚುಟುಚುಟು ಬೆಡಗಿ ಆಶಿಕಾ ರಂಗನಾಥ್ ಹೆಜ್ಜೆ ಹಾಕಿದ್ದಾರೆ.

ಈ ಹಾಡಿನ ಬಗ್ಗೆ ಮೆಚ್ಚುಗೆ ಟ್ವೀಟ್ ಮಾಡಿರುವ ಸುದೀಪ್, ಈ ಹಾಡನ್ನು ಚಿತ್ರೀಕರಿಸಿದ್ದು ಅದ್ಭುತವಾಗಿತ್ತು. ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಅನೂಪ್ ಭಂಡಾರಿ ಸಾಹಿತ್ಯ ಬರೆದಿದ್ದಾರೆ. ಇದು ನನಗೆ ಇಷ್ಟವಾಯಿತು. ಅಲ್ಲದೆ ಆಶಿಕಾ ರಂಗನಾಥ್ ಲುಕ್ ಸಖತ್ತಾಗಿದೆ ಎಂದು ಹೇಳಿ ಚಿತ್ರತಂಡಕ್ಕೆ ಶುಭ ತಿಳಿಸಿದ್ದಾರೆ.

ಕೋಟಿಗೊಬ್ಬ 3 ಸಿನಿಮಾಕ್ಕೆ ಶಿವಕಾರ್ತಿಕ್ ಆಕ್ಷನ್ ಕಟ್ ಹೇಳಿದ್ದು, ಸೂರಪ್ಪ ಬಾಬು ನಿರ್ಮಾಣ ಮಾಡಿದ್ದಾರೆ.
-
Had an amazing time shooting for this song. Loved @ArjunJanyaMusic 's composition and @anupsbhandari 's lyrics. @AshikaRanganath looks stunning.
— Kichcha Sudeepa (@KicchaSudeep) November 11, 2020 " class="align-text-top noRightClick twitterSection" data="
BST WSHS TO THE ENTIRE TEAM OF #K3 .
🤗🥂 pic.twitter.com/qRfKbaccy7
">Had an amazing time shooting for this song. Loved @ArjunJanyaMusic 's composition and @anupsbhandari 's lyrics. @AshikaRanganath looks stunning.
— Kichcha Sudeepa (@KicchaSudeep) November 11, 2020
BST WSHS TO THE ENTIRE TEAM OF #K3 .
🤗🥂 pic.twitter.com/qRfKbaccy7Had an amazing time shooting for this song. Loved @ArjunJanyaMusic 's composition and @anupsbhandari 's lyrics. @AshikaRanganath looks stunning.
— Kichcha Sudeepa (@KicchaSudeep) November 11, 2020
BST WSHS TO THE ENTIRE TEAM OF #K3 .
🤗🥂 pic.twitter.com/qRfKbaccy7