ETV Bharat / sitara

ಇಂಡಸ್ಟ್ರಿಗೆ ಬರುವ ಮುನ್ನ ನಾನು-ಧನ್ಯಾಕುಮಾರ್​ ಆ್ಯಕ್ಟಿಂಗ್ ಪ್ರಾಕ್ಟೀಸ್ ಮಾಡ್ತಿದ್ವಿ : ವಿಕ್ರಮ್ ರವಿಚಂದ್ರನ್ - ನಿನ್ನ ಸನಿಹಕೆ

ತಂಗಿ ನಟನೆ, ಎಕ್ಸ್‌ಪ್ರೆಶನ್ ನೋಡಿ ಫಿದಾ ಆಗಿದ್ದಾರೆ. ಯಾರ ಸಿನಿಮಾ ಮೊದಲು ಬಿಡುಗಡೆ ಆಗುತ್ತೆ ಅಂತಾ ನನ್ನ ಮತ್ತು ನನ್ನ ತಂಗಿ ನಡುವೆ ಪೈಪೋಟಿ ಇರುತ್ತಿತ್ತು. ಫೈನಲಿ ನನ್ನ ತಂಗಿ ಅಭಿನಯದ ಸಿನಿಮಾ ಫಸ್ಟ್ ರಿಲೀಸ್ ಆಗಿದೆ. ಭವಿಷ್ಯದಲ್ಲಿ ನನ್ನ ತಂಗಿ ಒಳ್ಳೆಯ ನಟಿಯಾಗುವ ಎಲ್ಲಾ ಲಕ್ಷಣಗಳಿವೆ..

ವಿಕ್ರಮ್ ರವಿಚಂದ್ರನ್
ವಿಕ್ರಮ್ ರವಿಚಂದ್ರನ್
author img

By

Published : Oct 8, 2021, 6:14 PM IST

ಡಾ.ರಾಜಕುಮಾರ್ ಮೊಮ್ಮಗಳು ಧನ್ಯಾರಾಮ್ ಕುಮಾರ್ ಹಾಗೂ ಸೂರಜ್ ಗೌಡ ನಟಿಸಿ, ನಿರ್ದೇಶನ ಮಾಡಿರೋ ಸಿನಿಮಾ ನಿನ್ನ ಸನಿಹಕೆ.. ಈ ಚಿತ್ರದ ಟ್ರೈಲರ್ ಹಾಗೂ ಹಾಡುಗಳಿಂದಲೇ ಸಿಕ್ಕಾಪಟ್ಟೇ ಸದ್ದು ಮಾಡ್ತಿದೆ. ಚಿತ್ರತಂಡ ಕನ್ನಡ ಚಿತ್ರರಂಗದ ಸ್ನೇಹಿತರಿಗೆ, ಬೆಂಗಳೂರಿನ ಮಾಲ್​ವೊಂದರಲ್ಲಿ ಸ್ಪೆಷಲ್ ಶೋ ಹಮ್ಮಿಕೊಂಡಿತ್ತು.

ಡಾ.ರಾಜಕುಮಾರ್ ಮಕ್ಕಳಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್, ಯುವ ನಟ ವಿಕ್ರಮ್ ರವಿಚಂದ್ರನ್, ಶ್ರೀನಗರ ಕಿಟ್ಟಿ, ಧೀರನ್ ರಾಮ್ ಕುಮಾರ್ ಸೇರಿದಂತೆ ಚಿತ್ರರಂಗದ ಸ್ನೇಹಿತರು ನಿನ್ನ ಸನಿಹಕೆ ಸಿನಿಮಾ ನೋಡಿ ಮೆಚ್ಚಿದರು.

ಈ ಸಿನಿಮಾ ನೋಡಿದ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಮಾತನಾಡಿ, ಧನ್ಯಾರಾಮ್ ಕುಮಾರ್ ಅಭಿನಯದ ಬಗ್ಗೆ ಕೊಂಡಾಡಿದರು. ಇನ್ನು, ಸಿನಿಮಾ ಇಂಡಸ್ಟ್ರಿಗೆ ಬರುವುದಕ್ಕಿಂತ ಮುಂಚೆ ಅಭಿನಯ ತರಂಗದಲ್ಲಿ ನಾನು, ಧನ್ಯಾಕುಮಾರ್​ ಆ್ಯಕ್ಟಿಂಗ್ ಪ್ರಾಕ್ಟೀಸ್ ಮಾಡ್ತಿದ್ವಿ ಎಂದ್ರು.

ಧನ್ಯಾರಾಮ್ ಕುಮಾರ್ ಸಹೋದರ ಧೀರೇನ್ ಕುಮಾರ್ ಕೂಡ, ತಂಗಿ ನಟನೆ, ಎಕ್ಸ್ ಪ್ರೆಶನ್ ನೋಡಿ ಫಿದಾ ಆಗಿದ್ದಾರೆ. ಯಾರ ಸಿನಿಮಾ ಮೊದಲು ಬಿಡುಗಡೆ ಆಗುತ್ತೆ ಅಂತಾ ನನ್ನ ಮತ್ತು ನನ್ನ ತಂಗಿ ನಡುವೆ ಪೈಪೋಟಿ ಇರುತ್ತಿತ್ತು. ಫೈನಲಿ ನನ್ನ ತಂಗಿ ಅಭಿನಯದ ಸಿನಿಮಾ ಫಸ್ಟ್ ರಿಲೀಸ್ ಆಗಿದೆ. ಭವಿಷ್ಯದಲ್ಲಿ ನನ್ನ ತಂಗಿ ಒಳ್ಳೆಯ ನಟಿಯಾಗುವ ಎಲ್ಲಾ ಲಕ್ಷಣಗಳಿವೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ರು.

ಇದನ್ನೂ ಓದಿ: 'ನಿನ್ನ ಸನಿಹಕೆ' ಸಿನಿಮಾ ನೋಡಿ ಅಣ್ಣಾವ್ರ ಮಕ್ಕಳು ಹೇಳಿದ್ದೇನು?

ಇದರ ಜೊತೆಗೆ ಶ್ರೀನಗರ ಕಿಟ್ಟಿ ಕೂಡ ನಿನ್ನ ಸನಿಹಕೆ ಸಿನಿಮಾ ನೋಡಿ ಮೆಚ್ಚಿಕೊಂಡರು. ಧನ್ಯಾಗೆ ಇದು ಮೊದಲ ಸಿನಿಮಾ ಅನಿಸೋದಿಲ್ಲ. ಹಾಗೇ ಸೂರಜ್ ಗೌಡ ಡೈರೆಕ್ಷನ್ ಕೂಡ ಮೊದಲು ಅನಿಸೋದಿಲ್ಲ. ಒಂದು ನವಿರಾದ ಪ್ರೇಮ ಕಥೆಯಿರುವ ಸಿನಿಮಾ ಇದು. ಇವರಿಬ್ಬರಿಗೂ ಒಳ್ಳೆಯದಾಗಲಿ ಅಂತಾ ಶ್ರೀನಗರ ಕಿಟ್ಟಿ ಈ ಜೋಡಿಗೆ ಗುಡ್ ಲಕ್ ಹೇಳಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.