ಮುಂಬೈ: ಬಹುಬಾಷಾ ನಟಿ ರಕುಲ್ ಪ್ರೀತ್ ಸಿಂಗ್ ಹಾಗೂ ಗಾಯಕ ಮಿಕಾ ಸಿಂಗ್ ಮುಂಬೈನಲ್ಲಿ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.
ನಟಿ ರಕುಲ್ ಪ್ರೀತ್ ಮುಂಬೈನಲ್ಲಿ ನಡೆದ ಜಿಮ್ ಸೆಷನ್ ಮುಗಿಸಿ ಬಾಂದ್ರದ ತಮ್ಮ ನಿವಾಸಕ್ಕೆ ಬಂದ ವೇಳೆ ಕಾಣಿಸಿಕೊಂಡರು. ಈ ವೇಳೆ ಕಂಫರ್ಟ್ ಜಿಮ್ ವೇರ್ನಲ್ಲಿದ್ದರು. ಇತ್ತೀಚೆಗೆ ರಕುಲ್, ಅರ್ಜುನ್ ಕಪೂರ್ ಅವರೊಂದಿಗೆ ಸರ್ದಾರ್ ಕಾ ಗ್ರ್ಯಾಂಡ್ ಸನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ನಗರದ ಕಾಫಿ ಶಾಪ್ವೊಂದರ ಹೊರಗೆ ಗಾಯಕ ಮಿಕಾ ಸಿಂಗ್ ಅವರನ್ನು ಪಾಪರಾಜಿಗಳು ಗಮನಸೆಳೆದರು. ಇತ್ತೀಚೆಗೆ ಕೋವಿಡ್ ಬಿಕ್ಕಟ್ಟಿನಲ್ಲಿ ಮಿಕಾ ಅವರು ನಗರದ ನಿರ್ಗತಿಕರಿಗೆ ಸಹಾಯ ಮಾಡಿದ್ದರು.