ETV Bharat / sitara

ಗೃಹಿಣಿಯರು ಕಂಠಪಾಠ ಮಾಡಿರುವ ಜೊತೆಜೊತೆಯಲಿ ಟೈಟಲ್​ ಟ್ರ್ಯಾಕ್​ ಬರೆದವರು ಯಾರು ಗೊತ್ತೇ? - ಸಂಗೀತ ನಿರ್ದೇಶನ ಸುನಾದ್ ಗೌತಮ್

ಕಿರುತೆರೆಯ ನಂಬರ್ ಒನ್ ಸ್ಥಾನ ಪಡೆದಿರುವ ಜೊತೆಜೊತೆಯಲಿ ಧಾರಾವಾಹಿಯ 'ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು' ಹಾಡಿನದ್ದೇ ಕಾರುಬಾರು!

jote joteyali serial
ಜೊತೆಜೊತೆಯಲಿ ಧಾರಾವಾಹಿ
author img

By

Published : Jan 6, 2020, 10:14 PM IST

ಟಿಆರ್​ಪಿಯಲ್ಲಿ ನಂ.1 ಸ್ಥಾನ ಪಡೆದಿರುವ ಜೊತೆ ಜೊತೆಯಲಿ ಧಾರಾವಾಹಿಯ ಟೈಟಲ್​ ಟ್ರ್ಯಾಕ್​ ಯಾರಿಗೆ ತಾನೆ ಗೊತ್ತಿಲ್ಲ. ನಿತ್ಯ ನೋಡುವ ಗೃಹಿಣಿಯರಿಗೆ ಬಾಯಿಪಾಠವಾಗಿರುವ ಈ ಹಾಡನ್ನು ಯಾರಪ್ಪಾ ಬರೆದೋರು ಅನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಸಂಪೂರ್ಣ ಮಾಹಿತಿ.

'ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು' ಹಾಡು

ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು ಎಂಬ ಫಿಮೇಲ್ ವರ್ಶನ್ ಹಾಡಿರುವುದು ಸುನಾದ್ ಗೌತಮ್ ಅವರ ತಂಗಿ ನಿನಾದ ನಾಯಕ್ ಅವರು. ನಿನಾದ ಅವರಿಗೆ ಜೊತೆಯಾಗಿರುವುದು ಬೇರಾರೂ ಅಲ್ಲ, ನಿಹಾಲ್ ತಾವ್ರೋ ಮತ್ತು ರಜತ್ ಹೆಗಡೆ. ಎಲ್ಲಾ ಕಡೆ ಸದ್ದು ಮಾಡುತ್ತಿರುವ ಈ ಬೊಂಬಾಟ್ ಹಾಡಿನ ಹಿಂದಿರುವ ಮಾಂತ್ರಿಕ ಶಕ್ತಿ ಇವರುಗಳೇ.

Intro:Body:ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು, ಎಲ್ಲ ಇಲ್ಲಿ ಮೀರಿದಾಗಲೂ ಪಯಣ ನಿಲ್ಲದು, ಜರಿವಾ ಜನರೆದುರಿನಲ್ಲಿ ನಿನ್ನ ನೆರಳಾಗಿ ನಿಲ್ಲುವೆ… ಎಲ್ಲಿ ಹೋದರು ಇದೀಗ ಕಿರುತೆರೆಯ ನಂಬರ್ ಒನ್ ಸ್ಥಾನ ಪಡೆದಿರುವ ಜೊತೆಜೊತೆಯಲಿ ಧಾರಾವಾಹಿಯ ಹಾಡಿನದ್ದೇ ಕಾರುಬಾರು!

ಕಾಲರ್ ಟ್ಯೂನ್, ಕಾಲೇಜು ಡೇ, ಟೂರು ಪಿಕ್ ನಿಕ್ ಹೋದಾಗ ಹೀಗೆ ಎಲ್ಲಾ ಕಡೆ ಕೇಳಿಬರುವ ಈ ಸುಮಧುರ ಹಾಡು ಕೇಳಿಯೇ ಕೇಳುತ್ತದೆ. ಮಾತ್ರವಲ್ಲ ಗೃಹಿಣಿಯರು ಅಷ್ಟೇ! ಈ ಹಾಡನ್ನು ದಿನಕ್ಕೆ ಒಮ್ಮೆಯಾದರೂ ಗುನುಗುನಿಸದೇ ಇರಲಾರರು. ಧಾರಾವಾಹಿಯ ಜೊತೆಜೊತೆಗೆ ಹಾಡು ಕೂಡಾ ಸೂಪರ್ ಹಿಟ್ ಆಗುತ್ತಿರುವುದು ಇದೇ ಮೊದಲ ಬಾರಿ.

ಕನ್ನಡ ಕಿರುತೆರೆಯಲ್ಲೇ ಹೊಸ ಹವಾ ಸೃಷ್ಟಿ ಮಾಡಿರುವಂತಹ ಜೊತೆಜೊತೆಯಲಿ ಧಾರಾವಾಹಿಯು ತೆಲುಗು ಭಾಷೆಗೆ ರಿಮೇಕ್ ಆಗುತ್ತಿರುವುದು ವೀಕ್ಷಕರಿಗೆಲ್ಲಾ ತಿಳಿದೇ ಇದೆ. ಧಾರಾವಾಹಿಯ ಜೊತೆಗೆ ನೂರು ಜನ್ಮ ಹಾಡು ಕೂಡಾ ತೆಲುಗು ಭಾಷೆಗೆ ರಿಮೇಕ್ ಆಗುತ್ತಿದೆ.

ಜನರ ಮನಸೂರೆಗೊಂಡ ಈ ಸುಂದರ ಸಾಲಿನ ಹಾಡನ್ನು ಬರೆದವರು ಝೀ ಕನ್ನಡ ವಾಹಿನಿಯ ಫಿಕ್ಷನ್ ಹೆಡ್ ಹರ್ಷಪ್ರಿಯ. ಅರ್ಥಗರ್ಬಿತವಾದ ಈ ಹಾಡನ್ನು ಒಮ್ಮೆ ಕೇಳಿದರೆ ಮಗದೊಮ್ಮೆ ಮತ್ತೊಮ್ಮೆ ಕೇಳಬೇಕು ಎನ್ನುವುದು ನಿಜ. ಅಂತಹ ಅದ್ಭುತ ಶಕ್ತಿ ಇರುವಂತಹ ಈ ಹಾಡನ್ನು ಕಂಪೋಸ್ ಮಾಡಿರುವುದು ಸುನಾದ್ ಗೌತಮ್. ವಿನಯ್ ರಾಜ್ ಕುಮಾರ್ ಅಭಿನಯದ ಅನಂತ್ ವರ್ಸಸ್ ನುಸ್ರತ್ ಸಿನಿಮಾದ ಸಂಗೀತ ನಿರ್ದೇಶಕರಾಗಿ ಕಾಣಿಸಿಕೊಂಡ ಸುನಾದ್ ಗೌತಮ್ ಈ ಹಾಡನ್ನು ನಿರ್ದೇಶನ ಮಾಡಿದ್ದಾರೆ.

ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು ಎಂಬ ಫಿಮೇಲ್ ವರ್ಶನ್ ಹಾಡಿರುವುದು ಸುನಾದ್ ಗೌತಮ್ ಅವರ ತಂಗಿ ನಿನಾದ ನಾಯಕ್ ಅವರು. ನಿನಾದ ಅವರಿಗೆ ಜೊತೆಯಾಗಿರುವುದು ಬೇರಾರೂ ಅಲ್ಲ, ನಿಹಾಲ್ ತಾವ್ರೋ ಮತ್ತು ರಜತ್ ಹೆಗಡೆ.
ಎಲ್ಲಾ ಕಡೆ ಸದ್ದು ಮಾಡುತ್ತಿರುವ ಈ ಬೊಂಬಾಟ್ ಹಾಡಿನ ಹಿಂದಿರುವ ಮಾಂತ್ರಿಕ ಶಕ್ತಿ ಇವರುಗಳೇ!Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.