ಕಿರುತೆರೆ ಮೂಲಕ ನಟನಾ ಪಯಣ ಆರಂಭಿಸಿದ ಚೆಂದುಳ್ಳಿ ಚೆಲುವೆ ಶ್ವೇತಾ ಪ್ರಸಾದ್, 'ಶ್ರೀರಸ್ತು ಶುಭಮಸ್ತು'ವಿನ ಜಾಹ್ನವಿಯಾಗಿ ಬಣ್ಣದ ಯಾನ ಶುರು ಮಾಡಿದವರು. ರಾಧಾ ರಮಣ ಧಾರಾವಾಹಿಯಲ್ಲಿ ನಾಯಕಿ ಆರಾಧನಳಾಗಿಯೂ ಅಭಿನಯಿಸಿದ್ದಾರೆ. ಅಲ್ಲದೆ 'ಕಳ್ಬೆಟ್ಟದ ದರೋಡೆಕೋರರು' ಸಿನಿಮಾದಲ್ಲಿಯೂ ಮಿಂಚಿದ್ದಾರೆ.
ಧಾರಾವಾಹಿಯಿಂದ ಹೊರ ಬಂದ ಬಳಿಕ ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿರುವ ಶ್ವೇತಾ, ಹೊಸ ಹೊಸ ಶೈಲಿಯ ಫೋಟೋ ಶೂಟ್ ಮಾಡಿಸುತ್ತಾ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿ ಮಾಡಿದ್ದಾರೆ.
ಇದೀಗ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಶ್ವೇತಾ ಹುಟ್ಟುಹಬ್ಬಕ್ಕೆ ನಟಿ ಸುಜಾತಾ ಅಕ್ಷಯ, ನಟ ಹೊನ್ನೇಶ್ ಗೌಡ, ಕಿಸ್ ಸಿನಿಮಾ ಖ್ಯಾತಿಯ ವಿರಾಟ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಒಟ್ಟಿನಲ್ಲಿ ತಮ್ಮ ಹುಟ್ಟುಹಬ್ಬವನ್ನು ಸಖತ್ ಗ್ರ್ಯಾಂಡ್ ಆಗಿ ಆಚರಿಸಿಕೊಂಡಿರುವ ಶ್ವೌತಾ, ಇದೀಗ ಖುಷಿಯಲ್ಲಿ ತೇಲುತ್ತಿದ್ದಾರೆ.