ETV Bharat / sitara

ಶರ್ಮಿಳಾ ಮಾಂಡ್ರೆ ನಿರ್ಮಿಸುತ್ತಿರುವ ಸಿನಿಮಾ ಶೀರ್ಷಿಕೆ ಬದಲು - Vaitarani Title changed

ಶರ್ಮಿಳಾ ಮಾಂಡ್ರೆ ನಿರ್ದೇಶನದಲ್ಲಿ ಅರವಿಂದ್ ಶಾಸ್ತ್ರಿ ನಿರ್ದೇಶಿಸುತ್ತಿರುವ 'ವೈತರಣಿ' ಸಿನಿಮಾ ಹೆಸರನ್ನು 'ದಸರಾ' ಎಂದು ಬದಲಿಸಲಾಗಿದೆ. ಈಗಾಗಲೇ ಲಂಡನ್​​​ನಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು ಶೀಘ್ರದಲ್ಲೇ 2 ನೇ ಹಂತದ ಶೂಟಿಂಗ್ ಆರಂಭವಾಗಲಿದೆ.

Sharmiela mandre
ಶರ್ಮಿಳಾ ಮಾಂಡ್ರೆ
author img

By

Published : Sep 4, 2020, 1:08 PM IST

ಮುಹೂರ್ತದ ದಿನ ನಿರ್ಧರಿಸಿದ್ದ ಬಹಳಷ್ಟು ಸಿನಿಮಾ ಶೀರ್ಷಿಕೆಗಳು ನಂತರ ಕಾರಣಾಂತರಗಳಿಂದ ಬದಲಾಗಿವೆ. ಇತ್ತೀಚೆಗೆ ಮುಹೂರ್ತ ಆಚರಿಸಿಕೊಂಡ ದಿನೇಶ್ ಬಾಬು ನಿರ್ದೇಶನದಲ್ಲಿ ರಚಿತಾ ರಾಮ್ ಅಭಿನಯಿಸುತ್ತಿರುವ 'ಕಸ್ತೂರಿ ನಿವಾಸ' ಸಿನಿಮಾ ಈಗ ಕಸ್ತೂರಿ ಎಂದು ಬದಲಾಗಿದೆ.

Sharmiela mandre
ಸತೀಶ್ ನೀನಾಸಂ

ಇದೀಗ ಶರ್ಮಿಳಾ ಮಾಂಡ್ರೆ ನಿರ್ಮಾಣದ 'ವೈತರಣಿ' ಶೀರ್ಷಿಕೆ ಬದಲಾಗಿದ್ದು 'ದಸರಾ' ಎಂದು ಫೈನಲ್ ಮಾಡಲಾಗಿದೆ. ಕಹಿ, ಅಳಿದು ಉಳಿದವರು ಸಿನಿಮಾಗಳಿಂದ ಹೆಸರಾದ ಅರವಿಂದ್ ಶಾಸ್ತ್ರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ, ಸತೀಶ್ ನೀನಾಸಂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ಭಜರಂಗಿ' ಚಿತ್ರದಲ್ಲಿ ಕೃಷ್ಣೆ ಪಾತ್ರದಲ್ಲಿ ನಟಿಸಿದ್ದ ನೃತ್ಯ ಕಲಾವಿದೆ ರುಕ್ಮಿಣಿ ಕುಮಾರ್​​ ಕೂಡಾ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Sharmiela mandre
ನೃತ್ಯ ಕಲಾವಿದೆ ರುಕ್ಮಿಣಿ

ದಸರಾ ಚಿತ್ರಕ್ಕೆ ಈಗಾಗಲೇ ಲಂಡನ್​​​ನಲ್ಲಿ 12 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಶರ್ಮಿಳಾ ಮಾಂಡ್ರೆ ಮೊದಲ ಸಿನಿಮಾ 'ಸಜನಿ' ಕೂಡಾ 2007 ರಲ್ಲಿ ಲಂಡನ್​​ನಲ್ಲಿ ಚಿತ್ರೀಕರಣವಾಗಿತ್ತು. ಎರಡನೇ ಹಂತದ ಚಿತ್ರೀಕರಣವನ್ನು ಕರ್ನಾಟಕದ ಹೊನ್ನಾವರ, ಕಾರವಾರ, ಬಾದಾಮಿ ಹಾಗೂ ಇನ್ನಿತರ ಕಡೆಗಳಲ್ಲಿ ನಡೆಸಲು ಅರವಿಂದ್ ಶಾಸ್ತ್ರಿ ನಿರ್ಧರಿಸಿದ್ದಾರೆ.

Sharmiela mandre
ನಿರ್ದೇಶಕ ಅರವಿಂದ್ ಶಾಸ್ತ್ರಿ

'ವೈತರಣಿ' ಎಂಬ ಪದ ಉಚ್ಛಾರಣೆ ಕಷ್ಟ ಎಂಬ ಉದ್ದೇಶದಿಂದ 'ದಸರಾ' ಎಂಬ ಹೆಸರನ್ನು ಫೈನಲ್ ಮಾಡಲಾಗಿದೆ. ಥ್ರಿಲ್ಲರ್​​​​​​​ ಕಥಾವಸ್ತು ಹೊಂದಿರುವ ಚಿತ್ರದಲ್ಲಿ ಸತೀಶ್ ನೀನಾಸಂ ತನಿಖಾಧಿಕಾರಿಯಾಗಿ ನಟಿಸುತ್ತಿದ್ದಾರೆ. ಲಂಡನ್ ಹಿನ್ನೆಲೆಯಲ್ಲಿ ಕಥೆ ಸಾಗುವುದರಿಂದ ಅಲ್ಲಿ ಚಿತ್ರೀಕರಣ ಮಾಡುವುದು ಅವಶ್ಯಕವಾಗಿತ್ತು ಎನ್ನುತ್ತಾರೆ ಅರವಿಂದ್ ಶಾಸ್ತ್ರಿ.

Sharmiela mandre
ಶರ್ಮಿಳಾ ಮಾಂಡ್ರೆ

ಚಿತ್ರೀಕರಣಕ್ಕೆ ಸರ್ಕಾರದಿಂದ ಅನುಮತಿ ದೊರೆತಿದೆ. ಅರವಿಂದ್ ಶಾಸ್ತ್ರಿ ಕೂಡಾ ಚಿತ್ರೀಕರಣ ಮುಂದುವರೆಸಲು ಪ್ಲ್ಯಾನ್ ಮಾಡಿದ್ದಾರೆ. ಆದರೆ ಶರ್ಮಿಳಾ ಮಾಂಡ್ರೆ ಬ್ಯುಸಿ ಇರುವುದರಿಂದ ಶೂಟಿಂಗ್​​​​​​​​​​ ಆರಂಭವಾಗಲು ಇನ್ನೂ ತಡವಾಗುವ ಸಾಧ್ಯತೆ ಇದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.