ETV Bharat / sitara

'ಕಸ್ತೂರಿ ಮಹಲ್​​​​​' ಶಾನ್ವಿ ಶ್ರೀವಾತ್ಸವ್​​ ಫಸ್ಟ್ ಲುಕ್​ ಬಿಡುಗಡೆ - Shanvi shrivatsav new film

'ಕಸ್ತೂರಿ ಮಹಲ್' ಚಿತ್ರದ ಫಸ್ಟ್​​ ಲುಕ್ ನಿನ್ನೆ ಬಿಡುಗಡೆಯಾಗಿದೆ. ಚಿತ್ರವನ್ನು ದಿನೇಶ್ ಬಾಬು ನಿರ್ದೇಶಿಸುತ್ತಿದ್ದು ಇದು ಅವರ 50 ನೇ ಚಿತ್ರವಾಗಿದೆ. ಅಕ್ಟೋಬರ್ 5 ರಿಂದ ಚಿತ್ರೀಕರಣ ಆರಂಭವಾಗಲಿದೆ.

Shanvi shrivatsav first look
'ಕಸ್ತೂರಿ ಮಹಲ್'
author img

By

Published : Sep 29, 2020, 9:11 AM IST

ಹಿರಿಯ ನಿರ್ದೇಶಕ ದಿನೇಶ್​ ಬಾಬು ಅವರ 50ನೇ ಚಿತ್ರಕ್ಕೆ ಕಸ್ತೂರಿ ಆಗಿ ಶಾನ್ವಿ ಶ್ರೀವಾತ್ಸವ್ ಬಂದಿದ್ದು ನಿನ್ನೆ ಚಿತ್ರದ ಫಸ್ಟ್​​​ಲುಕ್ ಕೂಡಾ ಬಿಡುಡೆಯಾಗಿದೆ. ಈ ಮೊದಲು ರಚಿತಾ ರಾಮ್ ಈ ಚಿತ್ರಕ್ಕೆ ಆಯ್ಕೆಯಾಗಿದ್ದರು. ಚಿತ್ರದಿಂದ ಅವರು ಹೊರಹೋದ ನಂತರ ಹರಿಪ್ರಿಯಾ ಆ ಜಾಗಕ್ಕೆ ಬರುತ್ತಾರೆ ಎನ್ನಲಾಗಿತ್ತು. ಆದರೆ ಕೊನೆಗೆ ಶಾನ್ವಿ ಶ್ರೀವಾತ್ಸವ್ ಚಿತ್ರದ ನಾಯಕಿಯಾಗಿ ಬಂದಿದ್ದಾರೆ.

Shanvi shrivatsav first look
'ಕಸ್ತೂರಿ ಮಹಲ್​​​​​' ಶಾನ್ವಿ ಶ್ರೀವಾತ್ಸವ್​​ ಫಸ್ಟ್ ಲುಕ್​

ಚಿತ್ರದ ಕಥೆ ಬಹಳ ಇಷ್ಟವಾಯ್ತು ಆದ್ದರಿಂದ ಒಪ್ಪಿಕೊಂಡೆ ಎಂದು ಶಾನ್ವಿ ಹೇಳಿದ್ದಾರೆ. ಈ ಚಿತ್ರದ ಮುಹೂರ್ತದ ಸಮಯದಲ್ಲಿ 'ಕಸ್ತೂರಿ ನಿವಾಸ' ಎಂದು ಹೆಸರಿಡಲಾಗಿತ್ತು. ನಂತರ 'ಕಸ್ತೂರಿ' ಎಂದು ಬದಲಾಯಿಸಲಾಯಿತು. ಕೊನೆಗೆ 'ಕಸ್ತೂರಿ ಮಹಲ್' ಎಂದು ನಾಮಕರಣ ಮಾಡಲಾಯ್ತು. ಅಕ್ಟೋಬರ್ 5 ರಿಂದ ಚಿತ್ರೀಕರಣ ಆರಂಭವಾಗಲಿದೆ. ಸದ್ಯಕ್ಕೆ ಚಿತ್ರಕ್ಕೆ ಸಂಗೀತ ಕೆಲಸಗಳು ನಡೆಯುತ್ತಿವೆ ಎಂದು ಸಂಗೀತ ನಿರ್ದೇಶಕ ಗೌತಮ್ ಶ್ರೀವಾತ್ಸವ್ ಹೇಳಿದ್ದಾರೆ. ಚಿತ್ರಕ್ಕೆ ಪಿ.ಕೆ.ಹೆಚ್. ದಾಸ್ ಛಾಯಾಗ್ರಹಣವಿದೆ.

ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ದಿನೇಶ್ ಬಾಬು ಅವರೇ ಬರೆದಿದ್ದಾರೆ. ರವೀಶ್ ಆರ್​​​​​​.ಸಿ ಚಿತ್ರದ ನಿರ್ಮಾಪಕರು. ಅಕ್ಷಯ್ ಸಿ.ಎಸ್​​​ ಹಾಗೂ ನವೀನ್​​​ ಆರ್​.ಸಿ ಸಹ ನಿರ್ಮಾಣದಲ್ಲಿ ಚಿತ್ರ ತಯಾರಾಗುತ್ತಿದೆ. 'ಕಸ್ತೂರಿ ಮಹಲ್'​​​​ ಶೀರ್ಷಿಕೆ ಕೆಳಗೆ 'ಎ ಫ್ರೇಗ್ನೆನ್ಸ್ ಫ್ರಮ್ ದಿ ಪಾಸ್ಟ್' ಎಂದು ಬರೆಯಲಾಗಿತ್ತು. ಒಟ್ಟಿನಲ್ಲಿ ಇದು ದಿನೇಶ್ ಬಾಬು ನಿರ್ದೇಶನದ 50ನೇ ಚಿತ್ರವಾಗಿರುವುದರಿಂದ ಚಿತ್ರದ ಮೇಲೆ ಭರವಸೆ ಹೆಚ್ಚಾಗಿದೆ ಎಂದೇ ಹೇಳಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.