'ಶಂಭೋ ಶಿವ ಶಂಕರ್' ಟೈಟಲ್ನಿಂದ ಗಮನ ಸೆಳೆಯುತ್ತಿರುವ ಸಿನಿಮಾ. ಈ ಹೆಸರು ಸಿನಿಮಾದಲ್ಲಿ ಬರುವ ಮೂವರು ನಾಯಕ ಪಾತ್ರಗಳ ಹೆಸರಾಗಿದ್ದು, ಅಭಯ್ ಪುನೀತ್, ರೋಹಿತ್ ಹಾಗೂ ರಕ್ಷಕ್ ಈ ಮೂರು ಪಾತ್ರಗಳಲ್ಲಿ ಕಾಣಿಸಿಕೊಳುತ್ತಿದ್ದಾರೆ. ಸುಪ್ರಿಂ ಹೀರೋ ಶಶಿಕುಮಾರ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ.
![Shambho shivashankara](https://etvbharatimages.akamaized.net/etvbharat/prod-images/kn-bng-03-shambo-shiva-shankar-movie-song-shooting-7204735_01022021145752_0102f_1612171672_832.jpg)
ಬಹುತೇಕ ಚಿತ್ರೀಕರಣ ಮುಗಿಸಿರುವ 'ಶಂಭೋ ಶಿವ ಶಂಕರ' ಚಿತ್ರದ ವಿಶೇಷ ಹಾಡನ್ನು ಇತ್ತೀಚೆಗೆ ಚಿತ್ರೀಕರಣ ಮಾಡಲಾಯಿತು. ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ರಾಜಸ್ಥಾನ ಬೆಡಗಿ ಕಿರಣ್ ಜೊತೆ, ನಾಯಕರಾದ ಅಭಯ್ ಪುನೀತ್, ರೋಹಿತ್ ಹಾಗೂ ರಕ್ಷಕ್ ಹೆಜ್ಜೆ ಹಾಕಿದ್ದಾರೆ. ಗೀರ ರಚನೆಕಾರ ಗೌಸ್ಫೀರ್ ಬರೆದಿರುವ 'ನಾಟಿಕೋಳಿ ನಳ್ಳಿ ಮೂಳೆ ಸರಕನೇ ಎಳಿತ್ತಾಳೆ.. ಎಂಬ ಹಾಡಿಗೆ ರಾಜಸ್ಥಾನ ಬೆಡಗಿ ಕಿರಣ್ ಸೊಂಟ ಬಳುಕಿಸಿದ್ದಾರೆ. ಡ್ಯಾನ್ಸ್ ಮಾಸ್ಟರ್ ಕಲೈ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಮೂವರು ನಾಯಕರು ಮಾತ್ರವಲ್ಲದೆ ಸೋನಾಲ್ ಮಾಂಟೆರೊ, ಜೋಗಿ ನಾಗರಾಜ್, ಪ್ರದೀಪ್ ತಿಪಟೂರು, ಆಶಾ ಸುಜಯ್, ಪ್ರೇಮ, ರೋಹಿಣಿ, ಸಂಗಮೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
![Shambho shivashankara](https://etvbharatimages.akamaized.net/etvbharat/prod-images/kn-bng-03-shambo-shiva-shankar-movie-song-shooting-7204735_01022021145752_0102f_1612171672_716.jpg)
ಇದನ್ನೂ ಓದಿ: ಬಿಗ್ ಬಿಗೆ 4 ಕೋಟಿಯ ಕಾರು ಗಿಫ್ಟ್ ಕೊಟ್ಟ ವಿಚಾರ ಬಾಯ್ಬಿಟ್ಟ ನಿರ್ದೇಶಕ!
ಶಂಕರ್ ಕೋನಮಾನಹಳ್ಳಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಗೌಸ್ ಫೀರ್ ಹಾಗೂ ಹಿತನ್ ಹಾಸನ್ ಹಾಡುಗಳನ್ನು ಬರೆದಿದ್ದು, ಹಿತನ್ ಹಾಸನ್ ಅವರೇ ಸಂಗೀತ ನೀಡುತ್ತಿದ್ದಾರೆ. ನಟರಾಜ್ ಮುದ್ದಾಲ ಛಾಯಾಗ್ರಹಣ, ಕಲೈ ನೃತ್ಯ ನಿರ್ದೇಶನ ಹಾಗೂ ವೆಂಕಟೇಶ್ ಯುಡಿವಿ ಅವರ ಸಂಕಲನ ಈ ಚಿತ್ರಕ್ಕಿದೆ. ಈ ಹಾಡು ನಾಯಕರನ್ನು ಪರಿಚಯಿಸುವ ಗೀತೆ ಆಗಿದ್ದು, ಇನ್ನೆರಡು ಸಾಹಸ ಸನ್ನಿವೇಶಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಅಘನ್ಯ ಪಿಕ್ಚರ್ಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ.
![Shambho shivashankara](https://etvbharatimages.akamaized.net/etvbharat/prod-images/kn-bng-03-shambo-shiva-shankar-movie-song-shooting-7204735_01022021145752_0102f_1612171672_38.jpg)