ETV Bharat / sitara

ಇಂದಿನಿಂದ ಭಜರಂಗಿ-2 ಅಬ್ಬರ ಶುರು... ರಿಲೀಸ್​ಗೂ ಮೊದಲೇ ಹೆಚ್ಚಿದ ಕ್ರೇಜ್​! - ಶಿವರಾಜ್ ಕುಮಾರ್ ಭಜರಂಗಿ

ನಟ ಶಿವರಾಜ್​ಕುಮಾರ್​ ಅವರ ನಟನೆಯ ಬಹುನಿರೀಕ್ಷಿತ ಭಜರಂಗಿ-2 ಚಿತ್ರ ಇಂದು ತೆರೆ ಕಾಣಲಿದ್ದು, ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

Sandalwood actor Shivarajkumar
Sandalwood actor Shivarajkumar
author img

By

Published : Oct 29, 2021, 1:06 AM IST

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್​ ನಟನೆಯ ಭಜರಂಗಿ-2 ಚಿತ್ರ ಇಂದು ಅದ್ಧೂರಿಯಾಗಿ ರಿಲೀಸ್​ ಆಗುತ್ತಿದ್ದು, ಶಿವಣ್ಣನ ಅಭಿಮಾನಿಗಳಲ್ಲಿ ಇನ್ನಿಲ್ಲದ ನಿರೀಕ್ಷೆ ಹುಟ್ಟಿಕೊಂಡಿದೆ. ಈಗಾಗಲೇ ಟ್ರೇಲರ್​​ ಸಿಕ್ಕಾಪಟ್ಟೆ ಹವಾ ಎಬ್ಬಿಸಿರುವ ಕಾರಣ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿದೆ.

2013ರಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿರುವ ಭಜರಂಗಿ ಚಿತ್ರಕ್ಕೆ ಎಲ್ಲರೂ ಫಿದಾ ಆಗಿದ್ದರು. ಇದೀಗ ಹ್ಯಾಟ್ರಿಕ್​ ಹೀರೋ ಶಿವಣ್ಣ ಹಾಗೂ ನಿರ್ದೇಶಕ ಎ. ಹರ್ಷ ಕಾಂಬಿನೇಷನ್​​ನಲ್ಲಿ ಭಜರಂಗಿ-2 ಚಿತ್ರ ರಿಲೀಸ್​ ಆಗ್ತಿದ್ದು ಸಿಕ್ಕಾಪಟ್ಟೆ ನಿರೀಕ್ಷೆ ಇದೆ.

ಚಿತ್ರದಲ್ಲಿ ಶಿವರಾಜ್ ಕುಮಾರ್​ ಎರಡು ಶೇಡ್​ನಲ್ಲಿ ಕಾಣಿಸಿಕೊಂಡಿದ್ದು, ಮಾಸ್ ಎಲಿಮೆಂಟ್ಸ್​ನಿಂದ ಕೂಡಿರುವ ಈ ಟ್ರೇಲರ್​ನಲ್ಲಿ ಶಿವರಾಜಕುಮಾರ್ ಎಂಟ್ರಿಯಿಂದ ಹಿಡಿದು ಚಿತ್ರದಲ್ಲಿ ಬರುವ ಪ್ರತಿ ಪಾತ್ರಗಳು ನೋಡುಗರನ್ನು ಇಂಪ್ರೆಸ್ ಮಾಡುತ್ತಿವೆ. ಭಜರಂಗಿ ಲೋಕಿ, ಭಾವನಾ ಮೆನನ್, ಶೃತಿ ಕ್ಯಾರೆಕ್ಟರ್​ಗಳು ಇಂಟ್ರಸ್ಟಿಂಗ್ ಆಗಿವೆ. ಡೈಲಾಗ್ ಇಲ್ಲದೇ ಇರುವ ಭಜರಂಗಿ-2 ಚಿತ್ರದ ಟ್ರೇಲರ್ ಇದಾಗಿದೆ.

ರಾಜ್ಯಾದ್ಯಂತ 300 ಚಿತ್ರಮಂದಿರಗಲ್ಲಿ ಸಿನಿಮಾ ತೆರೆಗೆ ಬರಲಿದ್ದು, ಭಜರಂಗಿ-2ಗಾಗಿ ವಿಶೇಷ ಫ್ಯಾನ್ಸ್​ ಶೋ ಆಯೋಜನೆ ಮಾಡಲಾಗಿದೆ. ಬೆಂಗಳೂರಿನ ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರ ಹಾಗೂ ಗೌಡನ ಪಾಳ್ಯದ ಶ್ರೀನಿವಾಸ ಥಿಯೇಟರ್​​ನಲ್ಲಿ ಮುಂಜಾನೆ 5 ಗಂಟೆಗೆ ಸಿನಿಮಾ ಪ್ರದರ್ಶನವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.