ETV Bharat / sitara

ಕೊರೊನಾಗೆ ಸ್ಯಾಂಡಲ್​​ವುಡ್​ನ ಮತ್ತೋರ್ವ ಹಿರಿಯ ನಟ ಬಲಿ - ರಾಜಾ ರಾಮ್

ರಂಗಭೂಮಿ ಹಾಗೂ ಸಿನಿಮಾ ರಂಗದಲ್ಲಿ ತನ್ನದೇ ಛಾಪು ಮೂಡಿಸಿದ ಹಿರಿಯ, ನಟ ಆರ್.ಎಸ್.ರಾಜಾರಾಮ್‌ ಕೊರೊನಾದಿಂದ ಮೃತಪಟ್ಟಿದ್ದಾರೆ.

Sandalwood actor Raja Rama died due to corona

author img

By

Published : May 10, 2021, 6:02 PM IST

Updated : May 10, 2021, 8:28 PM IST

ಬೆಂಗಳೂರು : ಕೊರೊನಾಗೆ ಮತ್ತೋರ್ವ ಸ್ಯಾಂಡಲ್​​ವುಡ್ ಹಿರಿಯ ಕಲಾವಿದ ಬಲಿಯಾಗಿದ್ದಾರೆ. ಹಿರಿಯ ನಟ ರಾಜಾ ರಾಮ್ ಇಂದು ಕೋವಿಡ್​ನಿಂದ ಮೃತಪಟ್ಟಿದ್ದಾರೆ.

ಕಳೆದ ಎರಡು ದಿನದ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದ ರಾಜಾರಾಮ್ ಇಂದು ಮಧ್ಯಾಹ್ನ 1 ಗಂಟೆ ಹೊತ್ತಿಗೆ ಉಸಿರಾಟದ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ. 84 ವರ್ಷದವಾರಗಿದ್ದ ರಾಜಾರಾಮ್, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ರಂಗಭೂಮಿಯಲ್ಲಿ ಖ್ಯಾತ ಕಲಾವಿದರಾದ ರಾಜಾರಾಮ್‌ ಕೋಲಾರ ಜಿಲ್ಲೆಯ ಕೆ.ಜಿ.ಎಫ್​​ನಲ್ಲಿ 1938ರ ಜುಲೈ 10ರಂದು ಜನಿಸಿದರು. ತಂದೆ ಜಿ.ಎಸ್‌. ರಘುನಾಥರಾವ್‌. ತಾಯಿ ಶಾರದಾಬಾಯಿ. ರಾಜಾರಾಮ್‌ ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಉದ್ಯೋಗಕ್ಕೆ ಸೇರಿ ಅಧೀನ ಕಾರ್ಯದರ್ಶಿ ಹುದ್ದೆಗೇರಿ ನಿವೃತ್ತಿ ಹೊಂದಿದ್ದರು. ಬಳಿಕ ರಂಗಭೂಮಿಯಲ್ಲಿ ಆಸಕ್ತರಾದ ರಾಜಾರಾಮ್ ಮಲ್ಲೇಶ್ವರದ ಸ್ನೇಹಿತರೊಡನೆ ‘ರಸಿಕ ರಂಜನಿ ಕಲಾವಿದರು’ ಸ್ಥಾಪಿಸಿದರು. ಪರ್ವತವಾಣಿ, ಕೈಲಾಸಂ, ದಾಶರಥಿದೀಕ್ಷಿತ್‌, ಕೆ. ಗುಂಡಣ್ಣ ಮುಂತಾದವರ ನಾಟಕಗಳಲ್ಲಿ ಅಭಿನಯಿಸಿದರು. ಹಣ ಹದ್ದು, ಮಗು ಮದ್ವೆ, ಪಂಚಭೂತ, ಹೋಂರೂಲು, ‘ಅವರೇ ಇವರು- ಇವರೇ ಅವರು’ ಮೊದಲಾದವು ಇವರ ಕೆಲವು ಪ್ರಸಿದ್ಧ ನಾಟಕಗಳು.

ರಾಜಾರಾಮ್ ಸರಸ್ವತಿ ಕಲಾ ನಿಕೇತನ, ಪ್ರಧಾನ ಮಿತ್ರ ಮಂಡಲಿ, ಸುಪ್ರಭಾತ ಕಲಾವಿದರು, ಕಮಲ ಕಲಾ ಮಂದಿರ ಮುಂತಾದ ಸಂಸ್ಥೆಗಳೊಡನೆ ನಿರಂತರ ಒಡನಾಟ ಹೊಂದಿದ್ದರು. ಇನ್ನು 1972ರಿಂದ ನಟರಂಗ ಮತ್ತು 1983ರಿಂದ 'ವೇದಿಕೆ'ಯ ರಂಗ ಚಟುವಟಿಕೆಗಳಲ್ಲಿ ತೊಡಗಿ ಸಿ.ಆರ್. ಸಿಂಹ ಅವರ ನಿರ್ದೇಶನದಲ್ಲಿ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದರು. ಅಲ್ಲದೆ ಬಿ.ವಿ. ಕಾರಂತ, ಎಂ.ಎಸ್‌. ಸತ್ಯು, ಶ್ರೀನಿವಾಸ್‌ ಜಿ. ಕಪ್ಪಣ್ಣ, ಜಯತೀರ್ಥ ಜೋಶಿ, ಸಿ.ಹೆಚ್‌. ಲೋಕನಾಥ್‌, ಆರ್. ನಾಗೇಶ್‌, ಪ್ರಕಾಶ್‌ ಬೆಳವಾಡಿ ಮುಂತಾದವರ ನಿರ್ದೇಶನದಲ್ಲಿ ಮಂಡೋದರಿ, ವಿಗಡವಿಕ್ರಮರಾಯ, ಎಚ್ಚಮನಾಯಕ, ಟಿಪ್ಪುಸುಲ್ತಾನ್‌, ಕಿತ್ತೂರು ಚೆನ್ನಮ್ಮ, ರಕ್ತಾಕ್ಷಿ, ಸದಾರಮೆ, ಕಾಕನ ಕೋಟೆ, ತುಘಲಕ್, ಮೃಚ್ಛಕಟಿಕ, ಸಂಕ್ರಾಂತಿ, ಅಗ್ನಿ ಮತ್ತು ಮಳೆ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ ಖ್ಯಾತಿ ರಾಜಾರಾಮ್ ಅವರದ್ದು.

ಹೈದರಾಬಾದ್‌, ಚೆನ್ನೈ, ಕೋಲ್ಕತ್ತಾ, ಕಾಶ್ಮೀರ, ಮುಂಬಯಿ, ಚಂಢೀಗಡ್ ಮುಂತಾದೆಡೆ ನಾಟಕ ಪ್ರದರ್ಶನ ಮಾಡಿದ್ದಾರೆ.ಇನ್ನು ಕೋಕಿಲ ಎಂಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ರಾಜಾರಾಮ್‌, ಮುಯ್ಯಿಗೆ ಮುಯ್ಯಿ, ಸಂಗ್ರಾಮ, ಬಹಳ ಚೆನ್ನಾಗಿದೆ, ಗಾಳಿಪಟ, ನಮ್ಮೂರ ಹುಡುಗ, ಜಯಲಲಿತಾ ಹೀಗೆ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ರಾಜಾರಾಮ್‌ ಅಭಿನಯಿಸಿದ್ದಾರೆ.

ಕೊರೊನಾ ಸೋಂಕಿಗೆ ಪ್ರಾಣ ಬಿಟ್ಟಿರುವ ರಾಜಾರಾಮ್ ಬೆಂಗಳೂರಿನ ಚಿತಾಗಾರದಲ್ಲಿ, ಕುಟುಂಬ ವರ್ಗ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದೆ.(ಕಷ್ಟದ ಸಮಯದಲ್ಲಿ ನೆರವಾದವರಿಗೆ ಭಾವುಕ ಪತ್ರದ ಮೂಲಕ ಧನ್ಯವಾದ ತಿಳಿಸಿದ ಮಾಲಾಶ್ರೀ)

Last Updated : May 10, 2021, 8:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.