ETV Bharat / sitara

ನಟ ಅಲ್ಲು ಅರ್ಜುನ್​​ಗೆ ಸಮಂತಾ ಥ್ಯಾಂಕ್ಸ್​ ಹೇಳಿದ್ಯಾಕೆ ಗೊತ್ತಾ?

author img

By

Published : Jan 12, 2022, 7:08 AM IST

'ಊ ಅಂಟಾವಾ' ಹಾಡು ಮಾಡಲು ತಮಗೆ ಮೊದ ಮೊದಲಿಗೆ ಇಷ್ಟ ಇರಲಿಲ್ಲ ಎಂದು ಸಮಂತಾ ಹೇಳಿಕೊಂಡಿದ್ದಾರೆ. ಆದರೆ, ನಟ ಅಲ್ಲು ಅರ್ಜುನ್‌ನ ಪ್ರೇರಣೆಯಿಂದಾಗಿ ಐಟಂ ಸಾಂಗ್​ನಲ್ಲಿ ಡ್ಯಾನ್ಸ್​ ಮಾಡಲು ಒಪ್ಪಿಕೊಂಡೇ ಎಂದಿದ್ದಾರೆ ನಟಿ ಸಮಂತಾ

ನಟ ಅಲ್ಲು ಅರ್ಜುನ್​​ಗೆ ಸಮಂತಾ ಥ್ಯಾಂಕ್ಸ್​ ಹೇಳಿದ್ಯಾಕೆ ಗೊತ್ತಾ?
Samantha thanks Allu Arjun for success of her item number in 'Pushpa'

ಹೈದರಾಬಾದ್​: 'ಪುಷ್ಪಾ' ಚಿತ್ರದಲ್ಲಿನ ತಮ್ಮ ನೃತ್ಯದ ಮೂಲಕ ನಟಿ ಸಮಂತಾ ಭಾರಿ ಪ್ರಶಂಸೆಗೆ ಒಳಗಾಗುತ್ತಿದ್ದಾರೆ. ಈ ಚಿತ್ರದಲ್ಲಿನ ಇವರ ಐಟಂ ಸಾಂಗ್‌ನ ಸ್ಕ್ರೀನ್ ಪ್ರೆಸೆನ್ಸ್‌ಗಾಗಿ ಈ ಹೊಗಳಿಕೆ ವ್ಯಕ್ತವಾಗುತ್ತಿದೆ.

'ಊ ಅಂಟಾವಾ' ಹಾಡು ಮಾಡಲು ತಮಗೆ ಮೊದ ಮೊದಲಿಗೆ ಇಷ್ಟ ಇರಲಿಲ್ಲ. ಆದರೆ, ನಟ ಅಲ್ಲು ಅರ್ಜುನ್‌ನ ಪ್ರೇರಣೆಯಿಂದಾಗಿ ಐಟಂ ಸಾಂಗ್​ನಲ್ಲಿ ಡ್ಯಾನ್ಸ್​ ಮಾಡಲು ಒಪ್ಪಿಕೊಂಡೇ ಎಂದು ಸಮಂತಾ ಹೇಳಿಕೊಂಡಿದ್ದಾರೆ.

ತೆಲುಗಿನಲ್ಲಿ ಹವಾ ಕ್ರಿಯೇಟ್​ ಮಾಡಿರುವ ಪುಷ್ಪಾ ಚಿತ್ರದಲ್ಲಿ ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸುಕುಮಾರ್ ಈ ಚಿತ್ರವನ್ನ ನಿರ್ದೇಶಿಸಿದ್ದಾರೆ. ಇನ್ನು ಐಟಂ ಸಾಂಗ್​ನಲ್ಲಿ ಸಖತ್​ ಸ್ಟೆಪ್ಸ್​ ಹಾಕಿರುವ ಸಮಂತಾ ಈ ಚಿತ್ರದಲ್ಲಿ ತಮ್ಮ ಡ್ಯಾನ್ಸ್​​​ನಿಂದಲೇ ಮಿಂಚುತ್ತಿದ್ದಾರೆ. ಈ ಹಾಡಿನ ಸಕ್ಸಸ್​​​ನಿಂದ ಖುಷಿ ಆಗಿರುವ ಸಮಂತಾ ನಟ ಅಲ್ಲು ಅರ್ಜುನ್​ ಅವರಿಗೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಮಂತಾ, ಈ ಸಾಂಗ್​ ಮಾಡಲು ನನಗೆ ಹಲವು ಬಗೆಯ ಅಡೆತಡೆಗಳಿದ್ದವು. ನೃತ್ಯ ಹೇಗೆ ಬರುತ್ತದೆ ಎಂಬ ಭಯವೂ ಇತ್ತು. ಹಾಗಾಗಿ ಡ್ಯಾನ್ಸ್​​ನಲ್ಲಿ ಪಾಲ್ಗೊಳ್ಳಲು ಸಿದ್ದವಾಗಿರಲಿಲ್ಲ. ಆದರೆ ಅಲ್ಲು ಅರ್ಜುನ್​ ಈ ಎಲ್ಲ ಭಯವನ್ನು ನಿವಾರಿಸಿದರು. ಹಾಡಿನ ಮಹತ್ವವನ್ನು ಕುಳಿತು ನನಗೆ ಮನವರಿಕೆ ಮಾಡಿಕೊಟ್ಟರು. ಹೀಗಾಗಿ ಐಟಂ ಸಾಂಗ್ ಮಾಡಲು ಒಪ್ಪಿಕೊಳ್ಳಬೇಕಾಯಿತು. ಅಲ್ಲು ಇಲ್ಲದಿದ್ದರೆ ಊ ಅಂಟಾವ ಸಾಂಗ್ಸ್​ನಲ್ಲಿ ಕುಣಿಯುತ್ತಿರಲಿಲ್ಲ ಎಂದಿದ್ದಾರೆ.

ಈ ಹಿಂದೆ ತ್ರಿವಿಕ್ರಮ್ ಶ್ರೀನಿವಾಸ್ ಅವರ ಸೂಪರ್ ಹಿಟ್ ಚಿತ್ರ 'S/O ಸತ್ಯಮೂರ್ತಿ' ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ಸಮಂತಾ ಪರದೆ ಹಂಚಿಕೊಂಡಿದ್ದರು. ಸಮಂತಾ ಪ್ರಸ್ತುತ ಎರಡು ಬಹುಭಾಷಾ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಕೀರ್ತಿ ಸುರೇಶ್​​ಗೆ ಕೋವಿಡ್: ಸೋಂಕು ನಿರ್ಲಕ್ಷಿಸಬೇಡಿ ಎಂದ ದ.ಭಾರತದ ಖ್ಯಾತ ನಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.