ETV Bharat / sitara

ಜಿಮ್​​ನಲ್ಲಿ ಸಮಂತಾ ಸಖತ್ ವರ್ಕೌಟ್​​:100 ಕಿ.ಲೋ ಲಿಫ್ಟ್​ ಮಾಡಿದ ಸ್ಯಾಮ್​​!

ಎಷ್ಟೇ ಬ್ಯುಸಿಯಿದ್ದರೂ ಜಿಮ್​​​ನಲ್ಲಿ ವರ್ಕೌಟ್ ಮಾಡಲು ಮರೆಯದ ಸಮಂತಾ ಅಕ್ಕಿನೇನಿ 100 ಕಿಲೋ ಲಿಫ್ಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೊ ನೋಡಿದ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

author img

By

Published : May 23, 2019, 6:19 PM IST

ಸಮಂತಾ

ಸಿನಿಮಾ ಸ್ಟಾರ್​​​ಗಳು ತಮ್ಮ ಅಂದವನ್ನು ಕಾಪಾಡಿಕೊಳ್ಳಲು ಎಷ್ಟು ಪ್ರಾಮುಖ್ಯತೆ ನೀಡುತ್ತಾರೋ, ಆರೋಗ್ಯದ ಕಡೆ ಕೂಡಾ ಅಷ್ಟೇ ಗಮನ ಹರಿಸುತ್ತಾರೆ. ಆರೋಗ್ಯಕರ ಆಹಾರ ಪದ್ಧತಿ ಜೊತೆಗೆ ಬ್ಯುಸಿ ಶೆಡ್ಯೂಲ್​​​​​​ ನಡುವೆಯೂ ಜಿಮ್​​​ನಲ್ಲಿ ವರ್ಕೌಟ್ ಮಾಡುತ್ತಾರೆ.

sam workout
100 ಕಿಲೋ ಲಿಫ್ಟ್​ ಮಾಡಿದ ಸ್ಯಾಮ್

ಟಾಲಿವುಡ್ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಪ್ರತಿದಿನ ಜಿಮ್​​​​​​​​​​​​ನಲ್ಲಿ ವ್ಯಾಯಾಮ ಮಾಡುವುದನ್ನು ಮರೆಯುವುದಿಲ್ಲ. ತಾವು ಜಿಮ್​​ನಲ್ಲಿ ವರ್ಕೌಟ್ ಮಾಡುತ್ತಿರುವ ಎಷ್ಟೋ ವಿಡಿಯೊಗಳನ್ನು ಅವರು ಆಗಾಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ತಿದ್ದಾರೆ. ಆದರೆ ಇತ್ತೀಚೆಗೆ ಅವರು ಶೇರ್ ಮಾಡಿರುವ ವಿಡಿಯೊವೊಂದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.ಯಾಕೆ ಅಂದ್ರೆ, 100 ಕೆ.ಜಿ ತೂಕವನ್ನು ಅವರು ಲಿಫ್ಟ್ ಮಾಡಿದ್ದಾರೆ.

ಸಮಂತಾ ಅವರ ಈ ವಿಡಿಯೋ ನೋಡಿ ಅಭಿಮಾನಿಗಳು, ಸ್ನೇಹಿತರು ಆಶ್ಚರ್ಯಪಟ್ಟಿದ್ದಾರೆ. ಸ್ಯಾಮ್ ಸ್ನೇಹಿತೆ ಮಲ್ಲಿಕ ಮೈಲವರಪು ಕೂಡಾ ಟ್ವೀಟ್ ಮಾಡಿ, 'ದೇವರೇ 100 ಕಿ.ಲೋ ಲಿಫ್ಟ್ ಮಾಡಿದ್ದೀಯ ಸ್ಯಾಮ್​​​? ಇದು ಹೇಗೆ ಸಾಧ್ಯ? ನಿಜಕ್ಕೂ ನಿನ್ನಲ್ಲಿ ನಂಬಲು ಸಾಧ್ಯವಾಗದಂಥ ಬಲವಿದೆ' ಎಂದು ಟ್ವೀಟ್ ಮಾಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಸಮಂತಾ ತೆಲುಗಿನ 'ಓ ಬೇಬಿ' ಹಾಗೂ 'ಮನ್ಮಥುಡು' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

samanta
ಜಿಮ್​​​ನಲ್ಲಿ ವರ್ಕೌಟ್ ಮಾಡುತ್ತಿರುವ ಸ್ಯಾಮ್​​

Intro:Body:

samanta workout

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.