ETV Bharat / sitara

ಸಿನಿಮಾ ಬಿಡುಗಡೆ: ಹ್ಯಾಟ್ರಿಕ್ ಹೀರೋ ಜತೆ ಮಾತುಕತೆ ನಡೆಸಿದ ಸಲಗ ಚಿತ್ರತಂಡ - ಸಲಗ ಕನ್ನಡ ಚಿತ್ರತಂಡ

ನಟ ದುನಿಯಾ ವಿಜಯ್​​ ನಟಿಸಿ, ನಿರ್ದೇಶಿಸುತ್ತಿರುವ ಚಿತ್ರ ಸಲಗ. ಈ ಸಿನಿಮಾ ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಯ ಮೇಲೆ ಬರಲು ರೆಡಿಯಾಗಿದೆ. ಇದೀಗ ಚಿತ್ರತಂಡ ಈ ಕುರಿತಂತೆ ಮಾತನಾಡಲು ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

Salaga film team meets Actor Shivrajkumar
ಹ್ಯಾಟ್ರಿಕ್ ಹೀರೋ ಜೊತೆ ಮಾತುಕತೆ ನಡೆಸಿದ ಸಲಗ ಚಿತ್ರತಂಡ
author img

By

Published : Jul 24, 2021, 6:14 PM IST

ಸ್ಯಾಂಡಲ್​​​ವುಡ್​​​ನಲ್ಲಿ ಹಲವು ವಿಶೇಷತೆಗಳಿಂದ ಸಖತ್ ಸದ್ದು ಮಾಡುತ್ತಿರುವ ಸಿನಿಮಾ ಸಲಗ. ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶನದ ಜೊತೆಗೆ ಅಭಿನಯ ಮಾಡುತ್ತಿರುವ ಸಿನಿಮಾ ಇದಾಗಿದೆ. ಇದೀಗ ಚಿತ್ರತಂಡ ಹ್ಯಾಟ್ರಿಕ್​ ಹೀರೋ ಶಿವರಾಜ್​​ ಕುಮಾರ್​​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ.

Salaga film team meets Actor Shivrajkumar
ಹ್ಯಾಟ್ರಿಕ್ ಹೀರೋ ಜೊತೆ ಮಾತುಕತೆ ನಡೆಸಿದ ಸಲಗ ಚಿತ್ರತಂಡ

ಚಿತ್ರದ ಟ್ರೈಲರ್ ಹಾಗೂ ಹಾಡುಗಳಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಸಲಗ ಸಿನಿಮಾ ವರಮಹಾಲಕ್ಷ್ಮೀ ಹಬ್ಬಕ್ಕೆ (ಆ.20) ಚಿತ್ರಮಂದಿರಗಳಿಗೆ ಬರುವುದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ಬಗ್ಗೆ ಮಾತನಾಡುವುದಕ್ಕೆ ನಟ ದುನಿಯಾ ವಿಜಯ್, ನಟ ಧನಂಜಯ್, ನಿರ್ಮಾಪಕ ಕೆ.ಪಿ ಶ್ರೀಕಾಂತ್, ಚಿತ್ರದ ಕಾರ್ಯಕಾರಿ ನಿರ್ಮಾಪಕ ನಾಗಣ್ಣ ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಚಿತ್ರಮಂದಿರದ ಮಾಲೀಕರು ರೆಡಿಯಾಗುತ್ತಿದ್ದಾರೆ. ಕೊರೊನಾ ಎರಡನೇ ಅಲೆ ಮುಗಿದ ಬಳಿಕ ಬಿಡುಗಡೆ ಆಗುತ್ತಿರುವ ಮೊದಲ ಸ್ಟಾರ್ ಸಿನಿಮಾ ಸಲಗ. ವಿಜಯ್ ನಿರ್ದೇಶಿಸಿ ನಟಿಸಿರೋ ಈ ಚಿತ್ರದಲ್ಲಿ ಡಾಲಿ ಧನಂಜಯ, ಸಂಜನಾ ಆನಂದ್, ಕಾಕ್ರೋಜ್ ಸುಧೀರ್ ಸೇರಿದಂತೆ ಸಾಕಷ್ಟು ಕಲಾವಿದರ ದಂಡೇ ಇದೆ. ಚರಣ್ ರಾಜ್ ಸಲಗ ಚಿತ್ರಕ್ಕೆ ಕ್ಯಾಚಿ ಟ್ಯೂನ್ಸ್​​​ಗಳನ್ನು ಹಾಕಿದ್ದಾರೆ. ಮಾಸ್ತಿ ಸಂಭಾಷಣೆ ಈ ಚಿತ್ರಕ್ಕಿದ್ದು, ಟಗರು ಸಿನಿಮಾ ನಿರ್ಮಾಣ ಮಾಡಿದ್ದ ಕೆ.ಪಿ ಶ್ರೀಕಾಂತ್ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

ಓದಿ: Watch video: ವಿಮಾನ ನಿಲ್ದಾಣದಲ್ಲಿ ಕಾಣಿಸಿಕೋಂಡ ರಣವೀರ್ ಸಿಂಗ್ - ರಶ್ಮಿಕಾ ಮಂದಣ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.