ETV Bharat / sitara

ವಿಶ್ವದಾದ್ಯಂತ ಮೂರೇ ದಿನಕ್ಕೆ 500 ಕೋಟಿ ಗಳಿಸಿದ ಆರ್​ಆರ್​ಆರ್

author img

By

Published : Mar 29, 2022, 11:00 AM IST

ಟಾಲಿವುಡ್​ನ ಆರ್​ಆರ್​ಆರ್ ಸಿನಿಮಾ ಕೇವಲ ಮೂರೇ ದಿನಕ್ಕೆ 500 ಕೋಟಿ ರೂಪಾಯಿ ಗಳಿಸಿ, ಬಾಕ್ಸ್​ ಆಫೀಸ್ ಕಲೆಕ್ಷನ್​ನಲ್ಲಿ ಮುನ್ನುಗ್ಗುತ್ತಿದೆ.

'RRR' reaches Rs 500 crore worldwide milestone
ವಿಶ್ವದಾದ್ಯಂತ ಮೂರೇ ದಿನಕ್ಕೆ 500 ಕೋಟಿ ಗಳಿಸಿದ ಆರ್​ಆರ್​ಆರ್

ನವದೆಹಲಿ: ಎಸ್​ಎಸ್​ ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಸಿನಿಮಾ ಬಿಡುಗಡೆಯಾದ ಮೂರೇ ದಿನಗಳಲ್ಲಿ 500 ಕೋಟಿ ರೂಪಾಯಿ ಗಳಿಸಿ, ದಾಖಲೆ ಸೃಷ್ಟಿಸಿದೆ. ಈ ಸಿನಿಮಾದಲ್ಲಿ ಜ್ಯೂನಿಯರ್ ಎನ್​ಟಿಆರ್, ರಾಮ್​ ಚರಣ್​, ಅಲಿಯಾ ಭಟ್ ಮತ್ತು ಅಜಯ್ ದೇವಗನ್ ತಾರಾಗಣದಲ್ಲಿರುವ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ.

ಈ ಕುರಿತು ಸಿನಿಮಾ ವಿಶ್ಲೇಷಕ ತರಣ್ ಆದರ್ಶ್​ ಟ್ವೀಟ್ ಮಾಡಿದ್ದು, ಆರ್​ಆರ್​ಆರ್​ ಒಂದು ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಬಿಡುಗಡೆಯಾದ ಮೊದಲ ವಾರವೇ 500 ಕೋಟಿ ರೂಪಾಯಿ ಗಳಿಸಿದೆ. ಎಸ್​ಎಸ್ ರಾಜಮೌಳಿ ಭಾರತೀಯ ಸಿನಿಮಾದ ವೈಭವ ಮರಳಿ ತಂದಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಮೊದಲ ದಿನದಂದೇ ವಿಶ್ವದಾದ್ಯಂತ 217 ಕೋಟಿ ಗಳಿಸಿದ 'ಬಾಹುಬಲಿ 2' ಸಿನಿಮಾವನ್ನು ಹಿಂದಿಕ್ಕಿದ ಆರ್​ಆರ್​ಆರ್ ಸಿನಿಮಾ ವಿಶ್ವದಾದ್ಯಂತ 223 ಕೋಟಿ ರೂಪಾಯಿ ಗಳಿಸಿದೆ.

  • #RRR is setting new BENCHMARKS... ₹ 500 cr [and counting]... WORLDWIDE GBOC *opening weekend* biz... EXTRAORDINARY Monday on the cards... #SSRajamouli brings back glory of INDIAN CINEMA. Note: Non-holiday release. Pandemic era. pic.twitter.com/ztuu4r9eam

    — taran adarsh (@taran_adarsh) March 28, 2022 " class="align-text-top noRightClick twitterSection" data=" ">

ತರಣ್ ಆದರ್ಶ್ ಅವರು ಮತ್ತೊಂದು ಟ್ವೀಟ್ ಮಾಡಿದ್ದು, ಕೊರೊನಾ ಸಾಂಕ್ರಾಮಿಕದ ವೇಳೆ ಮೊದಲ ವಾರದ ಭಾನುವಾರದಂದು ಹಿಂದಿ ಭಾಷೆಯಲ್ಲಿ ಅತ್ಯಧಿಕ ಹಣ ಗಳಿಸಿದ ಸಿನಿಮಾಗಳನ್ನು ಪಟ್ಟಿ ಮಾಡಿದ್ದಾರೆ. ಈ ಐದು ಸಿನಿಮಾಗಳಲ್ಲಿ ಆರ್​ಆರ್​ಆರ್ ಮೊದಲನೇ ಸ್ಥಾನದಲ್ಲಿದೆ. ಹಿಂದಿಭಾಷೆಯ ಆರ್​ಆರ್​ಆರ್ 31.50 ಕೋಟಿ ಗಳಿಸಿದೆ. ಎರಡನೇ ಸ್ಥಾನದಲ್ಲಿ ಸೂರ್ಯವಂಶಿ (26.94 ಕೋಟಿ), ಮೂರನೇ ಸ್ಥಾನದಲ್ಲಿ 83 (17.41 ಕೋಟಿ), ನಾಲ್ಕನೇ ಸ್ಥಾನದಲ್ಲಿ ಗಂಗೂಬಾಯಿ ಕಾಥಿಯಾವಾಡಿ (15.30) ಕೋಟಿ, ಐದನೇ ಸ್ಥಾನದಲ್ಲಿ ಕಾಶ್ಮೀರ್ ಫೈಲ್ಸ್ (15.10 ಕೋಟಿ) ಇವೆ.

ಇದನ್ನೂ ಓದಿ: ಕೈ ಕೈ ಹಿಡಿದು ನಡೆದ ಕತ್ರಿನಾ-ವಿಕ್ಕಿ.. ವಿಡಿಯೋ​ ವೈರಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.