ಕನ್ನಡ ಚಿತ್ರರಂಗದಲ್ಲಿ ಒಬ್ಬೊಬ್ಬ ಸ್ಟಾರ್ ನಟನಿಗೂ ಸಾಕಷ್ಟು ಸಂಖ್ಯೆಯಲ್ಲಿ ಫ್ಯಾನ್ ಫಾಲೋಯಿಂಗ್ ಇದೆ. ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಕೂಡಾ ಇತ್ತೀಚಿನ ದಿನಗಳಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಇನ್ನು ಡಾ. ರಾಜ್ಕುಮಾರ್ ಅಭಿಮಾನಿಗಳನ್ನು ದೇವರು ಎಂದು ಕರೆದಿದ್ದರು. ಈ ಮಾತನ್ನು ಪಾಲಿಸುತ್ತಿರುವ ರೋರಿಂಗ್ ಸ್ಟಾರ್, ತಮ್ಮನ್ನು ನೋಡಲು ಬಂದ ಅಭಿಮಾನಿಗಳಿಗೆ ಸನ್ಮಾನ ಮಾಡಿದ್ದಾರೆ. ಹೌದು, ಶ್ರಿಮುರಳಿ ಸದ್ಯಕ್ಕೆ 'ಭರಾಟೆ' ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ.
ಮುರಳಿಯನ್ನು ನೋಡಲು ಅವರ ಅಭಿಮಾನಿಗಳು ಶಾಲು, ಪೇಟದೊಂದಿಗೆ ಬಂದಿದ್ದಾರೆ. ಆದರೆ ನೀವು ತಂದಿರುವ ಉಡುಗೊರೆ ನನಗಲ್ಲ, ನಿಮಗೇ ಸೇರಬೇಕು ಎಂದ ಮುರಳಿ, ಆ ಶಾಲು ಹಾಗೂ ಪೇಟವನ್ನು ತಮ್ಮ ಅಭಿಮಾನಿಗಳಿಗೆ ಹೊದಿಸಿ ಅವರನ್ನು ಸನ್ಮಾನ ಮಾಡಿ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ಮುರಳಿಯ ಈ ಸರಳತೆಯನ್ನು ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಂತೂ ಸುಳ್ಳಲ್ಲ.