ETV Bharat / sitara

'ಏನೋ ಬಡವ ರಾಸ್ಕಲ್​' ನಿಂಗೆ ಕನ್ನಡ ಬರಲ್ವಾ ಅಂತಿದ್ದಾರೆ ರಿಷಬ್​ ಶೆಟ್ಟಿ... ಏನಿದರ ಗುಟ್ಟು?

ನಿರ್ದೇಶಕ ರಿಷಬ್​​ ಶೆಟ್ಟಿ ಇದೀಗ ಹೊಸ ಪ್ರಯತ್ನ ಮಾಡಿದ್ದು ಹಾಡೊಂದಕ್ಕೆ ದನಿ ನೀಡಿದ್ದಾರೆ. ಕನ್ನಡದಲ್ಲಿ ರೆಡಿಯಾಗುತ್ತಿರುವ 9 ಸುಳ್ಳುಗಳು ಸಿನಿಮಾದಲ್ಲಿ ಕನ್ನಡ ಭಾಷೆಯ ಮೇಲೆ ಹಾಡೊಂದನ್ನು ರಚಿಸಲಾಗಿದ್ದು, ಈ ಹಾಡಿಗೆ ದನಿಯಾಗಿದ್ದಾರೆ.

author img

By

Published : Nov 2, 2019, 12:31 PM IST

ರಿಷಬ್​ ಶೆಟ್ಟಿ

ಸ್ಯಾಂಡಲ್​ವುಡ್​ನಲ್ಲಿ ವಿಶೇಷ ಸಿನಿಮಾಗಳನ್ನು ಮಾಡುತ್ತ ಹೆಸರು ಮಾಡುತ್ತಿರುವ ನಟ, ನಿರ್ದೇಶಕ ರಿಷಬ್​​ ಶೆಟ್ಟಿ ಇದೀಗ ಹೊಸ ಪ್ರಯತ್ನ ಮಾಡಿದ್ದಾರೆ. ಮೊಟ್ಟ ಮೊದಲ ಬಾರಿಗೆ ಹಾಡೊಂದಕ್ಕೆ ದನಿ ನೀಡಿದ್ದಾರೆ.

ಹೌದು ಕನ್ನಡದಲ್ಲಿ ರೆಡಿಯಾಗುತ್ತಿರುವ 9 ಸುಳ್ಳುಗಳು ಸಿನಿಮಾದಲ್ಲಿ ಕನ್ನಡ ಭಾಷೆಯ ಮೇಲೆ ಹಾಡೊಂದನ್ನು ರಚಿಸಲಾಗಿದೆ. ಕರ್ನಾಟಕಕ್ಕೆ ಬಂದು ಇಲ್ಲಿನ ನೀರು, ಗಾಳಿ, ಕೆಲಸವನ್ನೂ ಪಡೆದು ಇಲ್ಲಿನ ಭಾಷೆಯನ್ನು ಮಾತನಾಡಿದೆ ಇರುವ ಜನರಿಗೆ ಈ ಹಾಡು ಚಾಟಿ ಬೀಸಿದೆ. ಈ ಹಾಡನ್ನು ಕನ್ನಡ ರಾಜ್ಯೋತ್ಸವದ ವಿಶೇಷವಾಗಿ ಬಿಡುಗಡೆ ಮಾಡಲಾಗಿದೆ.

ವಿಶೇಷ ಅಂದ್ರೆ ಈ ಹಾಡಿನ ಮೊದಲಲ್ಲಿ ಏನೋ ಬಡವ ರಾಸ್ಕಲ್​ ನಿಂಗೆ ಕನ್ನಡ ಬರಲ್ವಾ... ಅಂತ ಹಾಡಿದೆ. ಈ ಹಾಡಿಗೆ ವಿಕ್ರಮ್​​​​ ವಸಿಷ್ಠ ಸಾಹಿತ್ಯ ಬರೆದಿದ್ದು ಸಾಹಿತ್ಯದಲ್ಲಿ ರಾಜ್​​ ಕುಮಾರ್​​ ನಟಿಸಿರುವ ಬಬ್ರುವಾಹನ ಸಿನಿಮಾದ ಬರಸಿಡಿಲ ಬಡಿತವನ್ನು ಬರಿ ಮುಸ್ಟಿಯಲ್ಲಿ ಹಿಡಿಯಬಲ್ಲೆ ಎಂಬ ಡೈಲಾಗ್​ ಅನ್ನು ಬಳಸಿಕೊಳ್ಳಲಾಗಿದೆ.

ಈ ಬಗ್ಗೆ ಟ್ವೀಟ್​​ ಮಾಡಿರುವ ರಿಷಬ್​​​​ ಶೆಟ್ಟಿ, "ಏನೋ ಬಡವ ರಾಸ್ಕಲ್ ನಿಂಗೆ ಹಾಡಕ್ ಬರಲ್ವ" ಅಂತ ಬೈಬೇಡಿ. ಇದು ನನ್ನ ಮೊದಲ ಪ್ರಯತ್ನ. ತಪ್ಪಿದ್ರೆ ಹೊಟ್ಟೆಗಾಕ್ಕೊಳಿ. ಇಷ್ಟ ಆದ್ರೆ ಕಿವಿಗಾಕ್ಕೊಳಿ. "9 ಸುಳ್ಳು ಕಥೆಗಳು" ಚಿತ್ರ ತಂಡಕ್ಕೆ ಒಳ್ಳೆಯದಾಗಲಿ ಎಂದು ಬರೆದುಕೊಂಡಿದ್ದಾರೆ.

  • " class="align-text-top noRightClick twitterSection" data="">

Intro:Body:

live

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.