ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ರನ್ನು ಪ್ಯಾನ್ ಇಂಡಿಯಾದ ನಮ್ಮ ಸಂಸ್ಥೆಯ ರಾಯಭಾರಿಯಾಗಿ ಘೋಷಿಸಲು ನಮಗೆ ಹೆಮ್ಮೆ ಎನಿಸುತ್ತದೆ ಎಂದು ರಾಮರಾಜ್ ಕಾಟನ್ ಕಂಪನಿ ಪ್ರಕಟಣೆ ಮೂಲಕ ತಿಳಿಸಿದೆ.
ಯಶ್ ಅವರು ನಟನೆ ಮತ್ತು ಲೋಕೋಪಕಾರಿ ಕೆಲಸಗಳ ಮೂಲಕ ತಮ್ಮ ಸುತ್ತಲಿನ ಜನರನ್ನು ನಿರಂತರವಾಗಿ ಪ್ರೇರೇಪಿಸುತ್ತಿದ್ದಾರೆ. ಹೀಗಾಗಿ ಅವರನ್ನು ನಮ್ಮ ಕಂಪನಿಯ ಬ್ರ್ಯಾಂಡ್ ರಾಯಭಾರಿ ಆಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ರಾಮರಾಜ್ ಕಾಟನ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಓದಿ: ಸಿದ್ದರಾಮಯ್ಯ ನೇತೃತ್ವದಲ್ಲಿ ಅಹೋರಾತ್ರಿ ಧರಣಿ: ಸದನದ ಸಭಾಂಗಣದಲ್ಲೇ ಮಲಗಿದ ಕೈ ಶಾಸಕರು
ರಾಮರಾಜ್ ಒಂದು ಸ್ವದೇಶಿ ಬ್ರ್ಯಾಂಡ್ ಆಗಿದ್ದು, ಇದು ಸಂಸ್ಕೃತಿ, ಸಂಪ್ರದಾಯ, ನಾವೀನ್ಯತೆಗಳಿಂದ ಕೂಡಿದ ಉತ್ಪನ್ನಗಳಿಂದ ತನ್ನದೇ ಆದ ಸಾಮ್ರಾಜ್ಯವನ್ನು ನಿರ್ಮಿಸಿದೆ. ಶ್ರೀ ಕೆ.ಆರ್ ನಾಗರಾಜನ್ ಅವರ ಬಹುದೊಡ್ಡ ಕನಸು ಮತ್ತು ಆಕಾಂಕ್ಷೆಗಳ ಮೂಲಕ ಇಂದು ರಾಮರಾಜ್ ಒಂದು ಹೊಸ ಲೋಕವನ್ನೇ ಸೃಷ್ಟಿಸಿದೆ.
ರಾಮರಾಜ್ ಕಂಪನಿ ತಮ್ಮ ಉತ್ಪನ್ನ ಮೂಲಕ ನೇಕಾರರ ಜೀವನವನ್ನೇ ಬದಲಾಯಿಸಿದೆ. ಇಂದು 50 ಸಾವಿರಕ್ಕಿಂತಲೂ ಹೆಚ್ಚು ನೇಕಾರರ ಕುಟುಂಬಗಳು ಈ ಬ್ರ್ಯಾಂಡ್ನೊಂದಿಗೆ ಕೈಜೋಡಿಸಿವೆ. ಈ ಮೂಲಕ ದಕ್ಷಿಣ ಭಾರತದಾದ್ಯಂತ 10 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಉದ್ಯೋವಕಾಶವನ್ನು ಸೃಷ್ಟಿಸಿದಂತಾಗಿದೆ.
ಓದಿ: ಸಚಿವ ಈಶ್ವರಪ್ಪ ರಾಜೀನಾಮೆಗೆ ಪಟ್ಟು: ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಕೈ ಶಾಸಕರು
ರಾಕಿಂಗ್ ಸ್ಟಾರ್ ಯಶ್ ಅವರನ್ನು ಬ್ರ್ಯಾಂಡ್ ರಾಯಭಾರಿ ಆಗಿ ಹೊಂದುವುದು ರಾಮರಾಜ್‌ಗೆ ಹೆಮ್ಮೆಯ ಸಂಗತಿ. ಅವರು ಕಠಿಣ ಶ್ರಮದಿಂದಲೇ ತಮ್ಮ ಕನಸುಗಳನ್ನು ನನಸಾಗಿಸಿಕೊಂಡಿದ್ದು, ಸಮಾಜಕ್ಕೆ ದೊಡ್ಡ ಮಟ್ಟದಲ್ಲಿ ಕೊಡುಗೆಯನ್ನೂ ನೀಡುತ್ತಿದ್ದಾರೆ. ಯಶ್ ಅವರೊಂದಿಗೆ ಭಾರತದ ಫ್ಯಾಷನ್ ಜಗತ್ತಿನಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸಲಿದ್ದೇವೆ ಎಂದು ಪ್ರಕಟಣೆಯಲ್ಲಿ ಹೇಳಿದೆ.