ಉಪೇಂದ್ರ ಸ್ಥಾಪಿಸಿರುವ ಪ್ರಜಾಕೀಯ ಪಕ್ಷದ ಬಗ್ಗೆ ಕನ್ನಡಿಗರಲ್ಲಿ ಸಾಕಷ್ಟು ಸಂಶಯ ಮತ್ತು ಗೊಂದಲಗಳಿವೆ. ಆದರೆ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಮಾತ್ರ ಉಪೇಂದ್ರ ನೇತೃತ್ವದ ಪ್ರಜಾಕೀಯ ಪಕ್ಷದ ಉದ್ದೇಶಗಳನ್ನು ಮೆಚ್ಚಿಕೊಂಡು ಟ್ವೀಟ್ ಮಾಡಿದ್ದಾರೆ.
-
Wow this is truly a great step towards a revolutionary new way of looking at a political party .. #Upendra deserves loads of appreciation 👍💪💐 https://t.co/0SDSVn4Rmc pic.twitter.com/YS69x1FXrS
— Ram Gopal Varma (@RGVzoomin) November 20, 2020 " class="align-text-top noRightClick twitterSection" data="
">Wow this is truly a great step towards a revolutionary new way of looking at a political party .. #Upendra deserves loads of appreciation 👍💪💐 https://t.co/0SDSVn4Rmc pic.twitter.com/YS69x1FXrS
— Ram Gopal Varma (@RGVzoomin) November 20, 2020Wow this is truly a great step towards a revolutionary new way of looking at a political party .. #Upendra deserves loads of appreciation 👍💪💐 https://t.co/0SDSVn4Rmc pic.twitter.com/YS69x1FXrS
— Ram Gopal Varma (@RGVzoomin) November 20, 2020
ಉಪೇಂದ್ರ, ತಮ್ಮ ಪ್ರಜಾಕೀಯ ಪಕ್ಷದ ಹೊಸ ವೆಬ್ಸೈಟ್ ಪ್ರಾರಂಭಿಸಿದ್ದಾರೆ. ಓಆರ್ಜಿ ಹೆಸರಿನ ಈ ವೆಬ್ಸೈಟ್ನಲ್ಲಿ ಪಕ್ಷದ ಉದ್ದೇಶಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಈ ವೆಬ್ಸೈಟ್ ನೋಡಿ, ಪಕ್ಷದ ಬಗ್ಗೆ ರಾಮ್ಗೋಪಾಲ್ ವರ್ಮಾ ಮೆಚ್ಚುಗೆ ಸೂಚಿದ್ದಾರೆ. ಈ ಪಕ್ಷವನ್ನು ಹಣ ರಹಿತ ಪಕ್ಷ ಎಂದು ಹೇಳಿಕೊಂಡಿರುವ ಉಪೇಂದ್ರ, ಈ ಪಕ್ಷದಲ್ಲಿ ಕಾರ್ಯಕರ್ತರು, ಬ್ಯಾನರ್ಗಳು, ಸ್ಥಳೀಯ ಕಚೇರಿಗಳು, ಮೆರವಣಿಗೆ ಹಾಗೂ ಸುಳ್ಳು ಆಶ್ವಾಸನೆಗಳು ಯಾವುದೂ ಇರುವುದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ವೆಬ್ಸೈಟ್ ನೋಡಿ ಯಾರು ಬೇಕಾದರೂ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ನಿರ್ದೇಶಕ ರಾಮ್ಗೋಪಾಲ್ ವರ್ಮಾ, "ಪ್ರಜಾಕೀಯ ಪಕ್ಷವು ಕ್ರಾಂತಿಯ ಹೊಸ ಮಾರ್ಗದತ್ತ ಮುನ್ನುಗುತ್ತಿದೆ, ಉಪೇಂದ್ರ ಅವರೇ ನಿಮ್ಮ ಪ್ರಯತ್ನ ನಿಜಕ್ಕೂ ಶ್ಲಾಘನೀಯ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.