ಮೆಗಾಸ್ಟಾರ್ ಪುತ್ರ ರಾಮ್ಚರಣ್ ಸದ್ಯ ಎಸ್.ಎಸ್. ರಾಜಮೌಳಿ ನಿರ್ದೇಶನದ 'ಆರ್ಆರ್ಆರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ಅವರು ತಮ್ಮದೇ ಕೊನಿಡೇಲ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ತಂದೆಯ 152ನೇ ಸಿನಿಮಾ ನಿರ್ಮಾಣಕ್ಕೆ ಕೂಡಾ ಸಿದ್ಧತೆ ನಡೆಸುತ್ತಿದ್ದಾರೆ.
- View this post on Instagram
Somethings never change !! Dedicating my first post to u. Love u Amma. ❤#mamasboy #forever.
">
ಇನ್ನು ಚೆರ್ರಿ ಇತ್ತೀಚೆಗಷ್ಟೇ ಇನ್ಸ್ಟಾಗ್ರಾಂ ಖಾತೆ ತೆರೆದಿದ್ದಾರೆ. ತಮ್ಮ ಮೆಚ್ಚಿನ ಸ್ಟಾರ್ಗಳು ಹೊಸದಾಗಿ ಸೋಷಿಯಲ್ ಮೀಡಿಯಾ ಖಾತೆ ತೆರೆದರೆ ಅವರ ಮೊದಲ ಪೋಸ್ಟ್ ಏನಿರಬಹುದು ಎಂಬ ಕುತೂಹಲ ಅಭಿಮಾನಿಗಳಿಗೆ ಇದ್ದೇ ಇರುತ್ತದೆ. ಅದರಂತೆ ರಾಮ್ಚರಣ್, ತಾಯಿ ಸುರೇಖಾ ಜೊತೆ ಬಾಲ್ಯದಲ್ಲಿ ಇರುವ ಫೋಟೋ ಹಾಗೂ ಇತ್ತೀಚೆಗೆ ಅಮ್ಮನೊಂದಿಗೆ ಇರುವ ಫೋಟೋ ಎರಡನ್ನೂ ಮರ್ಜ್ ಮಾಡಿ ಆ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಆ ಫೋಟೋದೊಂದಿಗೆ 'ಕೆಲವೊಂದು ವಿಷಯಗಳು ಎಂದಿಗೂ ಬದಲಾಗುವುದಿಲ್ಲ. ಇದು ನನ್ನ ಮೊದಲ ಪೋಸ್ಟ್...ಲವ್ ಯೂ ಅಮ್ಮ' ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ನೋಡಿದ ಬಹಳಷ್ಟು ಅಭಿಮಾನಿಗಳು 'ನಮ್ಮ ಚೆರ್ರಿ ಎಂದಿಗೂ ಅಮ್ಮನ ಮಗನೇ' ಎಂದು ಕಮೆಂಟ್ ಮಾಡಿದ್ದಾರೆ.
ಈ ಪೋಸ್ಟ್ ಹಾಕಿದ ಕೇವಲ 5 ಗಂಟೆಗಳಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ರಾಮ್ಚರಣ್ ಇದುವರೆಗೂ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೇವಲ ಒಂದು ಪೋಸ್ಟ್ ಹಾಕಿದ್ದಾರೆ. 4.71 ಲಕ್ಷ ಅಭಿಮಾನಿಗಳು ಅವರನ್ನು ಫಾಲೋ ಮಾಡುತ್ತಿದ್ದಾರೆ.