ಈಗಾಗಲೇ ಡಾ. ರಾಜ್ ಕುಮಾರ್ ಕುಟುಂಬದಿಂದ, ಮೊಮ್ಮಕ್ಕಳಾದ ವಿನಯ್ ರಾಜ್ ಕುಮಾರ್, ಯುವ ರಾಜ್ ಕುಮಾರ್, ಧೀರೇನ್ ರಾಮ್ ಕುಮಾರ್, ಧನ್ಯಾ ರಾಮ್ ಕುಮಾರ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಇದೀಗ ಡಾ.ರಾಜ್ ಕುಮಾರ್ ಸಹೋದರಿ ನಾಗಮ್ಮ ಅವರ ತಂಗಿಯ ಮಗ, ಲಕ್ಕಿ, ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ರೆಡಿಯಾಗಿದ್ದಾರೆ.
ಈಗಾಗಲೇ ಶಿವರಾಜ್ ಕುಮಾರ್, ಹಾಗೂ ಪುನೀತ್ ರಾಜ್‍ಕುಮಾರ್ ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ ಲಕ್ಕಿ ಎಂಬ ಹುಡುಗ. ಈ ಹಿಂದೆ ಶಿವರಾಜ್ ಕುಮಾರ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳೊದಕ್ಕೆ ರೆಡಿಯಾಗಿದ್ರು. ಈಗ ಹೀರೋ ಆಗಿ ಎಂಟ್ರಿ ಕೊಡೋದಿಕ್ಕೆ ಲಕ್ಕಿ ಸಿದ್ಧತೆ ನಡೆಸಿದ್ದಾರೆ. ಲಕ್ಕಿಯನ್ನ ಹೀರೋ ಮಾಡೋದಕ್ಕೆ ಹೊರಟ್ಟಿರೋದು ನಟ, ನಿರ್ದೇಶಕ ದುನಿಯಾ ವಿಜಯ್.
ಹೌದು, ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಸಲಗ ಚಿತ್ರ, ಇನ್ನೂ ರಿಲೀಸ್ ಆಗಿಲ್ಲ. ಆವಾಗ್ಲೇ ದುನಿಯಾ ವಿಜಯ್, ರಾಜ್ ಕುಮಾರ್ ಕುಟುಂಬದ ಕುಡಿಯೊಂದನ್ನ ಹೀರೋ ಮಾಡೋದಕ್ಕೆ ಹೊರಟ್ಟಿದ್ದಾರೆ. ಕೆಲವು ದಿನ ದಿನಗಳ ಹಿಂದೆ ಅಭಿಮಾನಿಗಳ ಆಶೀರ್ವಾದದಿಂದಾಗಿ ಸಲಗ ಸಿನಿಮಾವನ್ನು ನಿರ್ದೇಶನ ಮಾಡಲು ನಿರ್ಧಾರ ಮಾಡಿದೆ. ಆಗ ನನ್ನ ಹೆಗಲಿಗೆ ಬೆನ್ನು ತಟ್ಟಿದ್ದು, ನಿರ್ಮಾಪಕ ಕೆಪಿ ಶ್ರೀಕಾಂತ್. ಇವರ ಸಹಾಯದಿಂದ ಈ ನಡುವೆ ಹೊಸ ಆಲೋಚನೆಗಳೊಂದಿಗೆ ಹೊಸ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಿದ್ದೇನೆ. ನಾಯಕನಾಗಿದ್ದವನು, ನಿರ್ದೇಶಕನಾದೆ ಈಗ ಹೊಸಬರೊಂದಿಗೆ ಹೊಸ ಪ್ರಯೋಗಕ್ಕೆ ಇಳಿಯುತ್ತಿದ್ದೇನೆ. ನನ್ನ ಹೊಸ ಕಥೆಗೆ ಲಕ್ಕಿ ಎಂಬ ಯುವ ನಟನನ್ನ ಆಯ್ಕೆ ಮಾಡಿಕೊಂಡಿದ್ದೇನೆ. ಸದ್ಯದಲ್ಲಿ ನಾಯಕಿ ಮತ್ತು ನಿರ್ಮಾಪಕರು ಯಾರು ಎಂಬುವುದನ್ನು ತಿಳಿಸುತ್ತೇನೆ. ಹಿರಿಯರಾದ ನನ್ನ ಸಹೋದರ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಮನಃಪೂರ್ವಕವಾಗಿ ನನಗೆ ಹಾರೈಸಿದ್ದಾರೆ. ಈ ಹೊಸ ಪ್ರಯತ್ನಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕು ಅಂತ ದುನಿಯಾ ವಿಜಯ್ ಕೇಳಿಕೊಂಡಿದ್ದಾರೆ.