ETV Bharat / sitara

ಯಶ್ ಮೂಗು ಕಚ್ಚಿದ ಜೂನಿಯರ್ 'ರಾಮಾಚಾರಿ': Video - radhika pandith and Yash news

ರಾಧಿಕಾ ಪಂಡಿತ್ ಆಗಾಗ್ಗೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಮಕ್ಕಳ ಮುದ್ದಾದ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಅಪ್ಪನ ಜತೆ ಹಾಡು ಹಾಡುತ್ತಿರುವ ಮಕ್ಕಳ ವಿಡಿಯೋವನ್ನು ಶೇರ್ ಮಾಡಿದ್ದರು. ಇದೀಗ ಮತ್ತೊಂದು ಹೊಸ ವಿಡಿಯೋವನ್ನು ಹಂಚಿಕೊಂಡಿದ್ದು, ಮುದ್ದಾದ ಅಪ್ಪ - ಮಗನ ಜಗಳವನ್ನು ಅಭಿಮಾನಿಗಳು ಎಂಜಾಯ್​ ಮಾಡುತ್ತಿದ್ದಾರೆ.

ಯಶ್
Yatharv
author img

By

Published : Aug 7, 2021, 1:10 PM IST

Updated : Aug 7, 2021, 1:29 PM IST

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರಾಕಿಂಗ್ ಜೋಡಿ ಅಂತಾ ಕರೆಯಿಸಿಕೊಂಡಿರುವ ಯಶ್ ಮತ್ತು ರಾಧಿಕಾ ಪಂಡಿತ್ ಇತ್ತೀಚೆಗೆ ಮಕ್ಕಳೊಂದಿಗೆ ಆಟವಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಈ ಸುಂದರ ಕ್ಷಣಗಳ ಫೋಟೋ ಮತ್ತು ವಿಡಿಯೋಗಳನ್ನು ನಟಿ ರಾಧಿಕಾ ಪಂಡಿತ್ ಸೋಶಿಯಲ್​ ಮೀಡಿಯಾದಲ್ಲಿ ಆಗಾಗ್ಗೆ ಶೇರ್ ಮಾಡುವ ಮೂಲಕ​ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿರುತ್ತಾರೆ.

ಮಕ್ಕಳೊಂದಿಗೆ ಯಶ್, ರಾಧಿಕಾ ಪಂಡಿತ್
ಮಕ್ಕಳೊಂದಿಗೆ ಯಶ್, ರಾಧಿಕಾ ಪಂಡಿತ್

ಇದೀಗ ರಾಧಿಕಾ ಪಂಡಿತ್​ ಹೊಸದೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಯಶ್​ ಜೊತೆ ಅವರ ಪುತ್ರ ಯಥರ್ವ್​ ಮುದ್ದಾಗಿ ಫೈಟ್​ ಮಾಡುತ್ತಿರುವ ಕ್ಷಣಗಳು ವಿಡಿಯೋದಲ್ಲಿ ಸೆರೆ ಆಗಿವೆ. ಕೆಲ ದಿನಗಳ ಹಿಂದೆ ಯಥರ್ವ್ ಕೋಪ ಮಾಡಿಕೊಂಡಿರುವ ಫೋಟೋವನ್ನು ರಾಧಿಕಾ ಹಂಚಿಕೊಂಡಿದ್ರು. ಇದೀಗ ಯಥರ್ವ್ ಅಪ್ಪನ ಮೇಲೆ ಯಾಕೆ ಕೋಪ ಮಾಡಿಕೊಂಡಿದ್ದ ಎನ್ನುವುದನ್ನು ತಿಳಿಸಿದ್ದಾರೆ.

ಯಶ್ ಮೂಗು ಕಚ್ಚಿದ ಯಥರ್ವ್

ಯಥರ್ವ್ ಕೂಡ ಅಪ್ಪ ಯಶ್ ಹಾಗೆಯೇ ಛಲವಾದಿ ಎನ್ನುವುದಕ್ಕೆ ಅಪ್ಪನ ಮೂಗು ಕಚ್ಚಿರುವುದೇ ಸಾಕ್ಷಿ. ಯಶ್ ಬೇಡ, ಬೇಡ ಎಂದರೂ ಸಹ ಯಥರ್ವ್ ಅಪ್ಪನ ಮೂಗಿಗೆ ಮುತ್ತಿಟ್ಟು ನಂತರ ಕಚ್ಚಿದ್ದಾನೆ. ಈ ವೇಳೆ ಗಟ್ಟಿ ಧ್ವನಿಯಲ್ಲಿ ಯಶ್ ಗದರಿಸಿದ್ದಾರೆ. ಇದಕ್ಕೆ ಯಥರ್ವ್ ಅಪ್ಪನ ಮೇಲೆ ಕೋಪ ಮಾಡಿಕೊಂಡಿದ್ದಾನೆ. ಈ ತಂದೆ-ಮಗನ ಮುದ್ದಾದ ಫೈಟ್​ ವಿಡಿಯೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್​ ಸಿಗುತ್ತಿದೆ.

ಯಥರ್ವ್

Last Updated : Aug 7, 2021, 1:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.