ETV Bharat / sitara

'ಡಿಯರ್ ಸತ್ಯ'ನಿಗೆ ಸಾಥ್ ನೀಡಿದ ಪವರ್ ಸ್ಟಾರ್ ಹಾಗೂ ಚಿನ್ನಾರಿ ಮುತ್ತ - Shiva ganeshan direction new film

ಶಿವಗಣೇಶನ್ ನಿರ್ದೇಶನದಲ್ಲಿ ಆರ್ಯನ್ ಸಂತೋಷ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಡಿಯರ್ ಸತ್ಯ' ಆಡಿಯೋ ಬಿಡುಗಡೆಯಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಹಾಗೂ ನಟ ವಿಜಯ್ ರಾಘವೇಂದ್ರ ಇಬ್ಬರೂ ಆಡಿಯೋ ಬಿಡುಗಡೆಗೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

Dear Satya audio released
'ಡಿಯರ್ ಸತ್ಯ'
author img

By

Published : Dec 14, 2020, 2:19 PM IST

'ಡಿಯರ್ ಸತ್ಯ' ಸ್ಯಾಂಡಲ್ ವುಡ್​​​​​​​​​​​​ನಲ್ಲಿ ಟೈಟಲ್ ಹಾಗೂ ಟೀಸರ್​​​​​​​​​​​​​​​​​​​​​ನಿಂದ ಸದ್ದು ಮಾಡುತ್ತಿರುವ ಸಿನಿಮಾ.ಬಿಗ್ ಬಾಸ್ ಖ್ಯಾತಿಯ ಸಂತೋಷ್ ಆರ್ಯನ್ ಮೊದಲ ಬಾರಿಗೆ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿರುವ, ಈ ಚಿತ್ರಕ್ಕೆ ಶಿವಗಣೇಶನ್​ ನಿರ್ದೇಶನ ಮಾಡುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿ ರಿಲೀಸ್​​​​​​​​​​​ಗೆ ಸಿದ್ಧವಾಗಿರುವ 'ಡಿಯರ್ ಸತ್ಯ' ಧ್ವನಿಸುರಳಿಯನ್ನು ಇತ್ತೀಚೆಗೆ, ನಟ ಪುನೀತ್ ರಾಜ್‍ಕುಮಾರ್ ಹಾಗೂ ವಿಜಯರಾಘವೇಂದ್ರ ಬಿಡುಗಡೆ ಮಾಡಿದರು.

Dear Satya audio released
'ಡಿಯರ್ ಸತ್ಯ' ನಿರ್ದೇಶಕ ಶಿವಗಣೇಶನ್

ನಿರ್ಮಾಪಕ ಯತೀಶ್​ ನನ್ನ ತಮ್ಮನಿದ್ದಂತೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಹಾಗೇ ಒಂದೊಳ್ಳೆ ಸ್ನೇಹಿತರ ಸಂಘವನ್ನು ಕಟ್ಟಿಕೊಂಡು ಈ ಸಿನಿಮಾ ಸಿದ್ಧವಾಗಿದೆ. ಗೆಳೆಯ ಸಂತೋಷ್​ಗೆ ಇದು ಕನಸಿನ ಕೂಸು. ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಆ ಶ್ರಮಕ್ಕೆ ಸೂಕ್ತ ಮನ್ನಣೆ ಮತ್ತು ಯಶಸ್ಸು ಸಿಗಲಿ ಎಂದು ಪುನೀತ್ ರಾಜ್​ಕುಮಾರ್ ಹಾರೈಸಿದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿ ಎಂದು ವಿಜಯ್ ರಾಘವೇಂದ್ರ ಕೂಡಾ ಹಾರೈಸಿದರು. ಚಿತ್ರದ ಬಗ್ಗೆ ಮಾತನಾಡಿದ ನಾಯಕ ಸಂತೋಷ್ ಆರ್ಯನ್, ಹಲಸೂರಿನ ಚಿತ್ರಮಂದರಿದಲ್ಲಿ 'ಓಂ' ಸಿನಿಮಾ ಸಲುವಾಗಿ ಬ್ಲಾಕ್ ಟಿಕೆಟ್​ ಪಡೆದು ಚಿತ್ರ ನೋಡಿದ್ದೆ. ಶಿವರಾಜ್​​ಕುಮಾರ್ ಅವರ ಕೈಯಿಂದ ಈ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಇದಕ್ಕೂ ಮುನ್ನ 'ನೂರು ಜನ್ಮಕು' ಸಿನಿಮಾದಲ್ಲಿ ನಟಿಸಿದ್ದೆ. ಆ ಚಿತ್ರಕ್ಕೆ ಅಪ್ಪು ಆಗಮಿಸಿ ಹರಸಿದ್ದರು. ಇದೀಗ ಮತ್ತೆ ಅವರೇ ಬಂದು ಸಿನಿಮಾ ಆಡಿಯೋ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾ ನಮ್ಮ ಇಡೀ ತಂಡದ ಮೂರು ವರ್ಷದ ಕನಸು ಎಂದರು.

Dear Satya audio released
ಚಿತ್ರಕ್ಕೆ ಶುಭ ಹಾರೈಸಿದ ಪುನೀತ್ ರಾಜ್​ಕುಮಾರ್

ಚಿತ್ರದಲ್ಲಿ ನಾಯಕಿಯಾಗಿ ಅರ್ಚನಾ ಕೊಟ್ಟಿಗೆ ನಟಿಸಿದ್ದು ಅವರಿಗೆ ಇದು ಮೊದಲ ಕಮರ್ಷಿಯಲ್ ಸಿನಿಮಾ. ಮೊದಲ ಸಿನಿಮಾದಲ್ಲೇ ಒಳ್ಳೆ ಪಾತ್ರದೊಂದಿಗೆ ಒಳ್ಳೆ ತಂಡ ದೊರೆತ ಖುಷಿಯಲ್ಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್​ ಹಾಜರಿದ್ದು ಹಾಡುಗಳ ಬಗ್ಗೆ ಮಾಹಿತಿ ನೀಡಿದರು. 2021ಕ್ಕೆ ಒಳ್ಳೆಯ ದಿನಗಳು ಕಾಯುತ್ತಿವೆ. ಈ ಚಿತ್ರದಲ್ಲಿ ಐದು ಹಾಡುಗಳಿವೆ ಎಂದು ಹೇಳಿದರು. ಚಿತ್ರದಲ್ಲಿ ಅರುಣಾ ಬಾಲರಾಜ್, ಅಶ್ವಿನ್ ರಾವ್​ ಪಲ್ಲಕ್ಕಿ, ಅರವಿಂದ್ ರಾವ್, ಅಪ್ಪಣ್ಣ, ಗುರುರಾಜ್, ಆದರ್ಶ್​ ಚಂದ್ರಶೇಖರ್ ಇತರರು ಪಾತ್ರವರ್ಗದಲ್ಲಿದ್ದಾರೆ. ಚಿತ್ರವನ್ನು ರಾಕ್​​​​​​​​​​​​​ಲೈನ್ ವೆಂಕಟೇಶ್ ಪುತ್ರ ಯತೀಂದ್ರ ವೆಂಕಟೇಶ್ ಹಾಗೂ ಗಣೇಶ್ ಪಾಪಣ್ಣ ಜೊತೆ ಸೇರಿ ನಿರ್ಮಿಸಿದ್ದು ಶಿವ ಗಣೇಶನ್ ನಿರ್ದೇಶನ ಮಾಡಿದ್ದಾರೆ. ಫೆಬ್ರವರಿ ಅಥವಾ ಮಾರ್ಚ್​ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.