ಬೆಂಗಳೂರು: ಸಿನಿಮಾ ರಂಗದಲ್ಲಿ ಅಯ್ಯಪ್ಪ ಸ್ವಾಮಿ, ಮಣಿಕಂಠನ ಮಹಿಮೆಯನ್ನ ಸಾರುವಂತಹ, ಅಯ್ಯಪ್ಪನ ಹಾಡುಗಳು, ಭಜನೆಗಳನ್ನ ಕೋಟ್ಯಾಂತರ ಭಕ್ತರು ಆರಾಧಿಸುತ್ತಾರೆ. ಇದೀಗ ಆ ಸಾಲಿಗೆ ಕನ್ನಡ ಚಿತ್ರರಂಗದ ಲೇಟೆಸ್ಟ್ ಸಿನಿಮಾ ಪುಕ್ಸಟ್ಟೆ ಲೈಫು ಚಿತ್ರದ ಭಜನೆ ಹಾಡು ಸೇರ್ಪಡೆಯಾಗಿದೆ.
- " class="align-text-top noRightClick twitterSection" data="">
ಸಂಚಾರಿ ವಿಜಯ್, ಅಚ್ಯುತ್ ಕುಮಾರ್, ರಂಗಾಯಣ ರಘು, ಮಾತಂಗಿ ಪ್ರಸನ್ನ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರೋ ಸಿನಿಮಾ ಪುಕ್ಸಟ್ಟೆ ಲೈಫು..ಈ ಚಿತ್ರವನ್ನ ಅರವಿಂದ್ ಕುಪ್ಳೀಕರ್ ನಿರ್ದೇಶಿಸಿದ್ದಾರೆ. ಅದ್ತೈತ ಗುರುಮೂರ್ತಿ ಛಾಯಾಗ್ರಹಣ, ವಾಸು ದೀಕ್ಷಿತ್ ಸಂಗೀತ ಸಂಯೋಜಿಸಿದ್ದಾರೆ. ಅಯ್ಯಪ್ಪನ ಭಜನೆಯನ್ನ ಈಗಿನ ಮ್ಯೂಸಿಕ್ ಟ್ರೆಂಡಿಗೆ ತಕ್ಕಂತೆ ವಾಸು ದೀಕ್ಷಿತ್ ಕಂಪೋಸ್ ಮಾಡಿದ್ದಾರೆ.ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಮತ್ತು ವಾಸು ದೀಕ್ಷಿತ್ ಹಾಡಿರೋ ಈ ಹಾಡು ಕೇಳೋದಕ್ಕೆ ಸಖತ್ ಮಜವಾಗಿದೆ. ವಿಶಿಷ್ಟ ಕಥಾಹಂದರವಿರೋ ಈ ಚಿತ್ರದಲ್ಲಿ ಎಲ್ಲಾ ಹಾಡುಗಳು ಕಥೆಯ ಜೊತೆಜೊತೆ ಸಾಗುವಂತಿದೆ..ಸರ್ವಸ್ವ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ನಾಗರಾಜ್ ಸೋಮಯಾಜಿ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ..