ETV Bharat / sitara

'ಮಾ' ಸದಸ್ಯತ್ವಕ್ಕೆ ನೀಡಿರುವ ರಾಜೀನಾಮೆ ವಾಪಸ್‌ ಪಡೆಯಲು 1 ಷರತ್ತು ಹಾಕಿದ ನಟ ಪ್ರಕಾಶ್‌ ರಾಜ್‌ - ಪ್ರಕಾಶ್‌ ರಾಜ್‌ ಸುದ್ದಿಗೋಷ್ಠಿ

ಅಂಚೆ ಮತದಾನದಲ್ಲಿ ಅನ್ಯಾಯವಾಗಿದೆ. ಬೇರೆ ಕಡೆಯಿಂದ ಜನರನ್ನು ಕರೆತರಲಾಗಿದೆ. ರಾತ್ರೋರಾತ್ರಿ ಫಲಿತಾಂಶವನ್ನೇ ಬುಡಮೇಲು ಮಾಡಲಾಗಿದೆ ಎಂದು ದೂರಿದ್ದಾರೆ. ನಮ್ಮ ಸಮಿತಿಯ ಎಲ್ಲ ಸದಸ್ಯರು ಹೊರಬಂದು 'ಮಾ' ಸದಸ್ಯರ ಪರವಾಗಿ ನಿಲ್ಲುವುದಾಗಿ ಸ್ಪಷ್ಟಪಡಿಸಿದ್ದಾರೆ..

prakash raj panel press meet after maa elections
'ಮಾ' ಸದಸ್ಯತ್ವಕ್ಕೆ ನೀಡಿರುವ ರಾಜೀನಾಮೆ ವಾಪಸ್‌ ಪಡೆಯಲು 1 ಷರತ್ತು ಹಾಕಿದ ನಟ ಪ್ರಕಾಶ್‌ ರಾಜ್‌
author img

By

Published : Oct 12, 2021, 6:12 PM IST

ಹೈದರಾಬಾದ್‌ : 'ಸಿನಿಮಾ ಬಿಡ್ಡಲಂ' ಪ್ಯಾನೆಲ್‌ನಲ್ಲಿ ವಿಜೇತರಾದವರೆಲ್ಲರೂ ರಾಜೀನಾಮೆ ನೀಡುತ್ತಿರುವುದಾಗಿ ಬಹುಭಾಷಾ ನಟ ಪ್ರಕಾಶ್ ರಾಜ್ ಘೋಷಿಸಿದ್ದಾರೆ. ಚುನಾವಣೆಯಲ್ಲಿ ಗೆದ್ದಿರುವ ನಟ ಮಂಚು ವಿಷ್ಣು ನೀಡಿದ ಆಶ್ವಾಸನೆಗಳಿಗೆ ಹಿನ್ನಡೆಯಾಗುವುದನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರಕಾಶ್‌ ರಾಜ್‌, 'ಮಾ' ಚುನಾವಣೆಯಲ್ಲಿ ಅಡ್ಡ ಮತದಾನ ನಡೆದಿದೆ ಎಂದು ಆರೋಪಿಸಿದ್ದಾರೆ. ಎರಡು ದಿನದಿಂದ ನಡೆಯುತ್ತಿರುವ ಘಟನೆಗಳ ಕುರಿತು ತಮ್ಮ ಸಮಿತಿ ಸದಸ್ಯರೊಂದಿಗೆ ಚರ್ಚಿಸಿದ್ದೇನೆ.

ಅಂಚೆ ಮತದಾನದಲ್ಲಿ ಅನ್ಯಾಯವಾಗಿದೆ. ಬೇರೆ ಕಡೆಯಿಂದ ಜನರನ್ನು ಕರೆತರಲಾಗಿದೆ. ರಾತ್ರೋರಾತ್ರಿ ಫಲಿತಾಂಶವನ್ನೇ ಬುಡಮೇಲು ಮಾಡಲಾಗಿದೆ ಎಂದು ದೂರಿದ್ದಾರೆ. ನಮ್ಮ ಸಮಿತಿಯ ಎಲ್ಲ ಸದಸ್ಯರು ಹೊರಬಂದು 'ಮಾ' ಸದಸ್ಯರ ಪರವಾಗಿ ನಿಲ್ಲುವುದಾಗಿ ಸ್ಪಷ್ಟಪಡಿಸಿದ್ದಾರೆ.

ನಾನು 'ಮಾ' ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಆದರೆ, ಮಂಚು ವಿಷ್ಣು ರಾಜೀನಾಮೆ ಸ್ವೀಕರಿಸುವುದಿಲ್ಲ ಎಂದಿದ್ದಾರೆ. ನಾನು ರಾಜೀನಾಮೆ ವಾಪಸ್‌ ಪಡೆಯುತ್ತೇನೆ. ಆದರೆ, ಒಂದು ಷರತ್ತು.

'ಮಾ' ಸಂಘಟ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ 'ಮಾ' ನಿಮಯ, ನಿಬಂಧನೆಗಳನ್ನು ಬದಲಾಯಿಸಿ ತೆಲುಗಿನವರು ಅಲ್ಲದ ವ್ಯಕ್ತಿ 'ಮಾ' ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ನೀವು ಬದಲಾವಣೆ ಮಾಡದಿದ್ದರೆ 'ಮಾ' ಸದಸ್ಯತ್ವಕ್ಕೆ ನೀಡಿರುವ ರಾಜೀನಾಮೆಯನ್ನು ವಾಪಸ್‌ ಪಡೆಯುತ್ತೇನೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.