ಹೈದರಾಬಾದ್: ಇತ್ತೀಚೆಗಷ್ಟೆ ಚಿತ್ರೀಕರಣದ ವೇಳೆ ಗಾಯಗೊಂಡಿದ್ದ ಬಹುಭಾಷಾ ನಟ ಪ್ರಕಾಶ್ ರೈ ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮನೆಗೆ ಬರುತ್ತಿದ್ದಂತೆ ಲಗುಬಗೆಯಿಂದ ಜಿಮ್ಗೆ ತೆರಳಿ ಎಂದಿನಂತೆ ಕಸರತ್ತು ನಡೆಸಿದ್ದಾರೆ.
ಚಿತ್ರೀಕರಣದ ವೇಳೆ ಭುಜಕ್ಕೆ ಪೆಟ್ಟಾಗಿದ್ದರಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದೇನೆ. ಈಗ ಆರೋಗ್ಯವಾಗಿದ್ದೇನೆ ಎಂದು ಟ್ವೀಟ್ ಮಾಡಿ ರೈ ತಮ್ಮ ಯೋಗಕ್ಷೇಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು.
-
Early morning meeting with the BOSS in the gym. Thanked him for taking the initiative to find solutions for the film fraternity .. an ever inspiring ANNAYA.. we are blessed to have him 🤗🤗 pic.twitter.com/nJ3YTFzfLT
— Prakash Raj (@prakashraaj) August 17, 2021 " class="align-text-top noRightClick twitterSection" data="
">Early morning meeting with the BOSS in the gym. Thanked him for taking the initiative to find solutions for the film fraternity .. an ever inspiring ANNAYA.. we are blessed to have him 🤗🤗 pic.twitter.com/nJ3YTFzfLT
— Prakash Raj (@prakashraaj) August 17, 2021Early morning meeting with the BOSS in the gym. Thanked him for taking the initiative to find solutions for the film fraternity .. an ever inspiring ANNAYA.. we are blessed to have him 🤗🤗 pic.twitter.com/nJ3YTFzfLT
— Prakash Raj (@prakashraaj) August 17, 2021
ಹಾಗೇ ಇಂದು ಬೆಳಗ್ಗೆ ಜಿಮ್ಗೆ ತೆರಳಿದಾಗ ಮೆಗಾಸ್ಟಾರ್ ಚಿರಂಜೀವಿ ಅವರನ್ನು ಕಂಡು ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮುಂಜಾನೆ ಬಾಸ್ ಜಿಮ್ನಲ್ಲಿ ಭೇಟಿ ಮಾಡಿದೆ. ಚಿತ್ರರಂಗದಲ್ಲಿ ಸಮಸ್ಯೆಗಳನ್ನು ಸರಿಪಡಿಸುವ ಜವಾಬ್ದಾರಿ ಹೊತ್ತಿದ್ದ ಅವರಿಗೆ ಧನ್ಯವಾದ. ನೀವು ಸದಾ ಉತ್ಸಾಹ ತುಂಬುವ ಅಣ್ಣಯ್ಯ. ಅವರನ್ನು ಪಡೆಯಲು ನಾವು ಅದೃಷ್ಟ ಮಾಡಿದ್ದೇವೆ ಎಂದು ಪ್ರಕಾಶ್ ರೈ ಆಕರ್ಷಕ ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಸಿನಿಮಾ ಚಿತ್ರೀಕರಣದ ವೇಳೆ ಪ್ರಕಾಶ್ ರೈಗೆ ಗಾಯ.. ಶಸ್ತ್ರಚಿಕಿತ್ಸೆಗೊಳಗಾಗಲಿರುವ ನಟ