ಪ್ರಜ್ವಲ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದರೂ ಈಗ ಮತ್ತೆ ಶೇಖರ್ ಒಂದು ಆಹ್ವಾನ ನೀಡಿದ್ದಾರೆ. ಈ ಜೋಡಿ ‘ಅರ್ಜುನ’ ಸಿನಿಮಾದಲ್ಲಿ ಒಂದಾಗಿತ್ತು. ಈ ಚಿತ್ರ ಅಷ್ಟೇನು ಯಶಸ್ಸು ಕಾಣಲಿಲ್ಲ. ಶೇಖರ್ ಆಮೇಲೆ ರಾಗಿಣಿ ದ್ವಿವೇದಿ ಅಭಿನಯದ ‘ದಿ ಟೆರರಿಸ್ಟ್’ ಸಿನಿಮಾದಲ್ಲಿ ಭಾಗಶಃ ಯಶಸ್ವಿ ಕಂಡರು. ಇದೀಗ ಪ್ರಜ್ವಲ್ ಜತೆ ‘ಗ್ಯಾಂಗ್ಸ್ಟರ್’ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರ ಜುಲೈ 4 ಪ್ರಜ್ವಲ್ ಜನುಮದಿನದಂದು ಸೆಟ್ಟೇರುತ್ತಿದೆ.
ಈ ಚಿತ್ರದಲ್ಲಿ ಭೂಗತ ಲೋಕದ ಕಥಾ ವಸ್ತು ಇರಲಿದೆ. ಚಂದನ ಸಿನಿ ಕ್ರಿಯೇಷನ್ ಅಡಿ ಚಂದನ್ ಗೌಡ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ ಅಲ್ಲದೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಚಿತ್ರತಂಡದ ಪ್ಲ್ಯಾನ್.
ಚಾಕೋಲೆಟ್ ಬಾಯ್ ಪ್ರಜ್ವಲ್ ದೇವರಾಜ್ ಈ ಹಿಂದೆ ಹೆಚ್ಚು ಆ್ಯಕ್ಷನ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಈ ಹೊಸ ಚಿತ್ರದಲ್ಲಿ ಮೂರು ಶೆಡ್ನಲ್ಲಿ ಪ್ರಜ್ವಲ್ ಕಾಣಿಸಿಕೊಳ್ಳಲಿದ್ದಾರೆ.
ಇನ್ನು 2018ರಲ್ಲಿ 'ಲೈಫ್ ಜೊತೆ ಒಂದು ಸೆಲ್ಫಿ' ಸಿನಿಮಾ ನಂತರ ಪ್ರಜ್ವಲ್ ಅವರ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ಸದ್ಯಕ್ಕೆ ಅರ್ಜುನ್ ಗೌಡ, ಜೇಂಟಲ್ ಮ್ಯಾನ್, ಇನ್ಸ್ಪೆಕ್ಟರ್ ವಿಕ್ರಮ್ ಚಿತ್ರದಲ್ಲಿ ಅವರು ಬ್ಯುಸಿಯಾಗಿದ್ದಾರೆ. ಪ್ರಜ್ವಲ್ ದೇವರಾಜ್ ಹಾಗೂ ರಮ್ಯಾ (ದಿವ್ಯ ಸ್ಪಂದನ) ಅಭಿನಯದ ‘ದಿಲ್ ಕಾ ರಾಜ’ ಸಿನಿಮಾ ಬಹಳ ವರ್ಷಗಳಾದರೂ ನನೆಗುದಿಗೆ ಬಿದ್ದಿದೆ.