ETV Bharat / sitara

ಹೆಣ್ಮಕ್ಕಳಿಗೆ ತೊಂದರೆ ಕೊಟ್ರೆ ಹುಷಾರ್.. ‘ಸಂಹಾರಿಣಿ’ಯಾಗಿ ಬರಲಿದ್ದಾರೆ 'ಮಳೆ ಹುಡುಗಿ' - ನಿರ್ದೇಶಕ ಜವಾಹರ್

ಸ್ಯಾಂಡಲ್​ವುಡ್​​​ನಲ್ಲಿ ಮಳೆ ಹುಡುಗಿಯಾಗಿ ಪ್ರೇಕ್ಷಕರ ಹೃದಯ ಕದ್ದ ನಟಿ ಪೂಜಾಗಾಂಧಿ. ದಂಡುಪಾಳ್ಯ 3 ಸಿನಿಮಾ ನಂತರ ಸ್ಯಾಂಡಲ್​​ವುಡ್‌ನಿಂದ ಕಾಣೆಯಾಗಿದ್ದರು. ಇದೀಗ ಪೂಜಾ ಗಾಂಧಿ ಆ್ಯಕ್ಷನ್​ ಆ್ಯಂಡ್​ ಸೆಂಟಿಮೆಂಟಲ್​​ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

Actress Pooja Gandhi
‘ಸಂಹಾರಿಣಿ’ಯಾಗಿ ಮತ್ತೆ ತೆರೆಮೇಲೆ ಬರಲಿದ್ದಾರೆ ಮಳೆ ಹುಡುಗಿ
author img

By

Published : Feb 21, 2021, 7:23 AM IST

ಮುಂಗಾರು ಮಳೆ ಚಿತ್ರದ ಮೂಲಕ ಚಂದನವನದಲ್ಲಿ ಸದ್ದು ಮಾಡಿದ್ದ ನಟಿ ಪೂಜಾ ಗಾಂಧಿ, ನಂತರದಲ್ಲಿ ಹಲವು ಚಿತ್ರಗಳಲ್ಲಿ ಮಿಂಚಿದ್ದರು. ಆದರೆ, ದಂಡುಪಾಳ್ಯ 3 ಸಿನಿಮಾ ಬಳಿಕ ಮರೆಯಾಗಿದ್ದ ಪೂಜಾ ಗಾಂಧಿ ಇದೀಗ ‘ಸಂಹಾರಿಣಿ’ ಚಿತ್ರದ ಮೂಲಕ ಮತ್ತೆ ತೆರೆಮೇಲೆ ಬರಲು ರೆಡಿಯಾಗಿದ್ದಾರೆ.

‘ಸಂಹಾರಿಣಿ’ಯಾಗಿ ಮತ್ತೆ ತೆರೆಮೇಲೆ ಬರಲಿದ್ದಾರೆ ಮಳೆ ಹುಡುಗಿ

ಈ ಸಿನಿಮಾದಲ್ಲಿ ಪೂಜಾ ಗಾಂಧಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಟ ಕಿಶೋರ್, ರಾಹುಲ್ ದೇವ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ‌. ಜವಾಹರ್ ನಿರ್ದೇಶನದ ಈ ಚಿತ್ರವನ್ನ 2ಎಮ್​ ಸಿನಿಮಾಸ್ ಸಂಸ್ಥೆಯ ಮುಖಾಂತರ ಶಬರೀಶ್ ಕೆ.ವಿ.ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಶೀಘ್ರದಲ್ಲೇ ಸಂಹಾರಿಣಿ ಟ್ರೇಲರ್‌ ಬಿಡುಗಡೆಯಾಗಲಿದೆ.

ತಮ್ಮ ಪಾತ್ರದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಪೂಜಾ, ಸಂಹಾರಿಣಿ ಒಂದು ಸ್ಟ್ರಾಂಗ್ ಆಗಿರೋ ಹೆಣ್ಮಗಳ ಪಾತ್ರ. ಹೆಣ್ಣು ಮಕ್ಕಳ ಭಾವನೆಯನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ. ಸಂಹಾರಿಣಿ ಆ್ಯಕ್ಷನ್​ ಜೊತೆ ಭಾವನಾತ್ಮಕವಾದ ಸಿನಿಮಾ ಎಂದರು.

ಓದಿ: ಅವಕಾಶ ಸಿಕ್ಕರೆ ಖಂಡಿತಾ ಕನ್ನಡ ಚಿತ್ರಗಳಲ್ಲಿ ನಟಿಸುವೆ: ಈಟಿವಿ ಭಾರತ ಜತೆ 'ರಾಧೆಶ್ಯಾಮ್' ನಟಿ ಪೂಜಾ ಹೆಗ್ಡೆ ಮಾತು!

ನಿರ್ದೇಶಕ ಜವಾಹರ್, ಪ್ರೊಡಕ್ಷನ್ ಡಿಸೈನರ್ ಗಂಗು, ಹಿಂದಿ ಖಳನಟ ಹ್ಯಾರಿ ಜೋಷ್ ಹಾಗು ಸ್ಟಂಟ್ ಮಾಸ್ಟರ್ ಮಾಸ್ ಮಾದ ಸಂಹಾರಿಣಿ ಸಿನಿಮಾದ ಅನುಭವಗಳನ್ನು ಹಂಚಿಕೊಂಡರು.

ಇತ್ತೀಚೆಗಷ್ಟೇ ಚಿತ್ರತಂಡವು ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಿತ್ತು. ಇದರಲ್ಲಿ ಮಚ್ಚು, ಗನ್‌ ಹಾಗೂ ಚಾಕೂ ಹಿಡಿದ ರಗಡ್‌ ಲುಕ್‌ನಲ್ಲಿ ಪೂಜಾ ಗಾಂಧಿ ಕಾಣಿಸಿಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.