ನಂದಕಿಶೋರ್ ನಿರ್ದೇಶನದಲ್ಲಿ ಧ್ರುವ ಸರ್ಜಾ ಅಭಿನಯಿಸಿರುವ ಬಹುನಿರೀಕ್ಷಿತ ಸಿನಿಮಾ 'ಪೊಗರು' ಕೊನೆಗೂ ಬಿಡುಗಡೆಯಾಗುತ್ತಿದೆ. ಸುಮಾರು 2 ವರ್ಷಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇದು ಸಂತೋಷದ ವಿಚಾರವಾಗಿದೆ. ನಿಗದಿಪಡಿಸಿದ ದಿನಾಂಕಕ್ಕೂ ಮುನ್ನವೇ ಪೊಗರು ಬಿಡುಗಡೆಯಾಗುತ್ತಿರುವುದು ವಿಶೇಷ.
- " class="align-text-top noRightClick twitterSection" data="
">
'ಪೊಗರು' ಸಿನಿಮಾ ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿತ್ತು. ಕೊನೆಗೆ ಏಪ್ರಿಲ್ 15 ರಂದು ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ಇದೀಗ ಏಪ್ರಿಲ್ಗೂ ಮುನ್ನವೇ ಸಿನಿಮಾ ತೆರೆ ಕಾಣಲು ಸಜ್ಜಾಗಿದ್ದು ಸ್ವತ: ಧ್ರುವ ಸರ್ಜಾ ಈ ವಿಚಾರವನ್ನು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಫೆಬ್ರವರಿ 19 ರಂದು 'ಪೊಗರು' ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಜ್ಜಾಗಿದ್ದು ಧ್ರುವ ಸರ್ಜಾ ಅಭಿಮಾನಿಗಳಿಗೆ ಈ ವಿಚಾರ ಸಖತ್ ಖುಷಿ ನೀಡಿದೆ.
ಈಗಾಗಲೇ ಚಿತ್ರದ ಕರಾಬು ಹಾಡು ಸಖತ್ ಫೇಮಸ್ ಆಗಿದೆ. ಚಿತ್ರದಲ್ಲಿ ಧ್ರುವ ಜೊತೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಧ್ರುವ ಸರ್ಜಾ ಗಡ್ಡ, ಉದ್ದ ಕೂದಲು ಬಿಟ್ಟು ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ತೂಕ ಇಳಿಸಿ ಸ್ಕೂಲ್ ಹುಡುಗನ ಲುಕ್ನಲ್ಲೂ ಮಿಂಚಿದ್ದಾರೆ. ಅಭಿಮಾನಿಗಳಂತೂ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಬಿ.ಕೆ. ಗಂಗಾಧರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕೊರೊನಾ ಲಾಕ್ಡೌನ್ ತೆರವಾದ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ಸ್ಟಾರ್ ಸಿನಿಮಾ ಇದಾಗಿದೆ.