ETV Bharat / sitara

ಡಾಲಿ ಧನಂಜಯ್ ಹೆಡ್ ಬುಷ್​ ಚಿತ್ರಕ್ಕೆ ನಾಯಕಿಯಾಗಿ ಪಾಯಲ್ ರಜಪೂತ್ ಆಯ್ಕೆ - ಪಾಯಲ್ ರಜಪೂತ್ ಆಯ್ಕೆ

ಆರ್ ಎಕ್ಸ್ 100 ಚಿತ್ರದ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ್ದ ಪಾಯಲ್ ರಜಪೂತ್, ಇದೀಗ 'ಹೆಡ್ ಬುಷ್' ಚಿತ್ರದ ಮೂಲಕ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ.

payal-rajaput-selected-as-heroin-for-dolly-dhanjays-head-bush-movie

author img

By

Published : Aug 9, 2021, 3:08 PM IST

ಕನ್ನಡ ಚಿತ್ರರಂಗಕ್ಕೆ ಪರಭಾಷೆಯ ನಟಿಮಣಿಯರು ಬರುವ ಟ್ರೆಂಡ್, ಡಾ ರಾಜ್ ಕುಮಾರ್ ಕಾಲದಿಂದಲೂ ಇದೆ. ಇದೀಗ ಧನಂಜಯ್ ನಟನೆಯ ಮತ್ತು ನಿರ್ಮಾಣದ 'ಹೆಡ್ ಬುಷ್' ಚಿತ್ರಕ್ಕೆ ನಾಯಕಿಯಾಗಿ ಟಾಲಿವುಡ್ ನಟಿ ಸೆಲೆಕ್ಟ್ ಆಗಿದ್ದಾರೆ. ಅವ್ರೇ ಪಾಯಲ್ ರಜಪೂತ್.

ಆರ್ ಎಕ್ಸ್ 100 ಚಿತ್ರದ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ್ದ ಪಾಯಲ್ ರಜಪೂತ್, ಇದೀಗ ಹೆಡ್ ಬುಷ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಪಾಯಲ್ ರಜಪೂತ್ ಮೂಲತಃ ದೆಹಲಿಯವರು.

BNG
ಪಾಯಲ್ ರಜಪೂತ್

ಹಿಂದಿ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಪಾಯಲ್, ತೆಲುಗು, ಪಂಜಾಬಿ, ಹಿಂದಿ ಹಾಗೂ ತಮಿಳು ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ನಟ ಧನಂಜಯ್ ಈ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಬೆಂಗಳೂರಿನ ಭೂಗತ ಲೋಕದಲ್ಲಿ ಡಾನ್ ಆಗಿದ್ದ ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ್ ಅಭಿನಯಿಸಲಿದ್ದಾರೆ.

BNG
ಹೆಡ್ ಬುಷ್​ ಚಿತ್ರದ ಪೋಸ್ಟರ್

ಅಗ್ನಿ ಶ್ರೀಧರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುತ್ತಿದ್ದಾರೆ. ಶೂನ್ಯ ಎಂಬ ಯುವ ನಿರ್ದೇಶಕ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರವನ್ನು ಡಾಲಿ ಪಿಕ್ಚರ್ಸ್ ಮತ್ತು ಸೋಮಣ್ಣ ಟಾಕೀಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಆಗಸ್ಟ್ 9ರಿಂದ ಹೆಡ್ ಬುಷ್ ಚಿತ್ರದ ಚಿತ್ರೀಕರಣ ಶುರುವಾಗಲಿದ್ದು, ಬೆಂಗಳೂರಿನಲ್ಲಿಯೇ ಈ ಚಿತ್ರದ ಮೊದಲ ಹಂತದ ಶೂಟಿಂಗ್ ನಡೆಯಲಿದೆ.

BNG
ಪಾಯಲ್ ರಜಪೂತ್

ಇದೇ ತಿಂಗಳ 23ಕ್ಕೆ ಹೆಡ್ ಬುಷ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿ ಒಟ್ಟು 6 ಭಾಷೆಯಲ್ಲಿ ಹೆಡ್ ಬುಷ್ ಸಿನಿಮಾ ನಿರ್ಮಾಣ ಆಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.