ETV Bharat / sitara

ಪವನ್ ಕಲ್ಯಾಣ್​ ಅಭಿಮಾನಿಗಳಿಗೆ ಗುಡ್​ನ್ಯೂಸ್​...! - ಟಾಲಿವುಡ್​ ನ್ಯೂಸ್​

ಬಾಲಿವುಡ್​​​ನಲ್ಲಿ ವಿಜಯ ಸಾಧಿಸಿದ್ದ 'ಪಿಂಕ್​​' ಸಿನಿಮಾ 2016 ಸೆಪ್ಟೆಂಬರ್ 16 ರಂದು ಬಿಡುಗಡೆಯಾಗಿತ್ತು. ಈದೀಗ ಈ ಸಿನಿಮಾವನ್ನು ತೆಲುಗಿನಲ್ಲಿ ಕೂಡಾ ರೀಮೇಕ್ ಮಾಡಲಾಗುತ್ತಿದ್ದು ಅದರಲ್ಲಿ ಪವನ್ ಕಲ್ಯಾಣ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಪವನ್ ಕಲ್ಯಾಣ್​
author img

By

Published : Nov 2, 2019, 5:16 PM IST

'ಅಜ್ಞಾತವಾಸಿ' ಚಿತ್ರದ ನಂತರ ಪವನ್ ಕಲ್ಯಾಣ್, ಸಿನಿಮಾಗಳಿಂದ ದೂರ ಇದ್ದು, ತಮ್ಮ ಜನಸೇನಾ ಪಕ್ಷದ ಕಾರ್ಯಗಳಲ್ಲಿ ಬ್ಯುಸಿ ಇದ್ದರು. ಇನ್ನು ಪವನ್ ಕಲ್ಯಾಣ್ ಸಿನಿಮಾದಲ್ಲಿ ನಟಿಸುವುದೇ ಇಲ್ಲ ಎಂದು ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಆದರೆ ಇದೀಗ ಪವನ್ ಕಲ್ಯಾಣ್ ಆ್ಯಕ್ಟಿಂಗ್​​​ಗೆ ವಾಪಸ್ಸಾಗಿದ್ದಾರೆ.

  • BIGGG NEWS... After remaking #Pink in #Tamil, Boney Kapoor joins hands with Dil Raju to remake #Pink in #Telugu... The #Telugu remake will star Pawan Kalyan... Directed by Sriram Venu... Pawan Kalyan was last seen in #Agnyaathavaasi [2018].

    — taran adarsh (@taran_adarsh) November 2, 2019 " class="align-text-top noRightClick twitterSection" data=" ">

ಅಮಿತಾಬ್ ಬಚ್ಚನ್, ತಾಪ್ಸಿ ಪನ್ನು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ 'ಪಿಂಕ್​' ಚಿತ್ರವನ್ನು ತೆಲುಗಿಗೆ ರೀಮೇಕ್ ಮಾಡಲಾಗುವುದು ಎಂದು ಬಹಳ ದಿನಗಳಿಂದ ಹೇಳಲಾಗುತ್ತಿತ್ತು. ಆದರೆ ಈ ಬಗ್ಗೆ ಇದೀಗ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಟಾಲಿವುಡ್ ನಿರ್ಮಾಪಕ ದಿಲ್​ ರಾಜು ಜೊತೆ ಸೇರಿ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ವೇಣು ಶ್ರೀರಾಮ್ ಈ ತೆಲುಗು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಬಾಲಿವುಡ್​​​ನಲ್ಲಿ ವಿಜಯ ಸಾಧಿಸಿದ್ದ 'ಪಿಂಕ್​​' ಸಿನಿಮಾ, 2016 ಸೆಪ್ಟೆಂಬರ್ 16 ರಂದು ಬಿಡುಗಡೆಯಾಗಿತ್ತು. ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಕೂಡಾ ವ್ಯಕ್ತವಾಗಿತ್ತು. ನಂತರ ಈ ಸಿನಿಮಾವನ್ನು ತಮಿಳಿಗೆ ಕೂಡಾ ರೀಮೇಕ್ ಮಾಡಿದ್ದು, ಅದರಲ್ಲಿ ಶ್ರದ್ಧಾ ಶ್ರೀನಾಥ್ ಹಾಗೂ ಅಜಿತ್​​ ನಟಿಸಿದ್ದರು. ಇದೀಗ ಈ ಸಿನಿಮಾ ತೆಲುಗಿನಲ್ಲಿ ಕೂಡಾ ತಯಾರಾಗುತ್ತಿದೆ. ಒಟ್ಟಿನಲ್ಲಿ ಪವನ್​ ಕಲ್ಯಾಣ್ ಮತ್ತೆ ನಟಿಸುತ್ತಿರುವುದು ಅವರ ಅಭಿಮಾನಿಗಳಿಗೆ ಬಹಳ ಸಂತೋಷವಾಗಿದೆ.

Pawan Kalyan came back to acting,ಮತ್ತೆ ಸಿನಿಮಾದಲ್ಲಿ ನಟಿಸುತ್ತಿರುವ ಪವನ್ ಕಲ್ಯಾಣ್

Intro:Body:

pawan kalyan movie

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.