ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ 28 ವರ್ಷಗಳ ಬಳಿಕ ರಾಷ್ಟ್ರ ಪ್ರಶಸ್ತಿ ಪಡೆದ ಎರಡನೇ ನಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ನಟ ಸಂಚಾರಿ ವಿಜಯ್ ನಮ್ಮನ್ನೆಲ್ಲ ಅಗಲಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಸಿನಿಮಾ ಪ್ರೇಕ್ಷಕರನ್ನ ರಂಜಿಸಿದ ಸಂಚಾರಿ ವಿಜಯ್ ಇನ್ನು ನೆನಪು ಮಾತ್ರ. ಜೂನ್ 12ರಂದು, ರಾತ್ರಿ ಬೈಕ್ ಅಪಘಾತಕ್ಕೀಡಾಗಿ ವಿಜಯ್ ನಿನ್ನೆಯಷ್ಟೇ ಕೊನೆಯುಸಿರೆಳೆದಿದ್ದರು.
ಸಂಚಾರಿ ವಿಜಯ್ ಗೆಳೆಯ, ನಟ ನಿನಾಸಂ ಸತೀಶ್, ಸಂಚಾರಿ ವಿಜಯ್ ಬದುಕಿದ್ದಾಗ ಕೊರೊನಾ ಸಂಕಷ್ಟ ಕಾಲದಲ್ಲಿ ಬಡವರ ಹಸಿವು ನೀಗಿಸಲು ಶ್ರಮಿಸಿದ್ದರು. ಆಹಾರ ಕಿಟ್ ವಿತರಣೆ ಜತೆಗೆ ತನ್ನ ಕೈಲಾದ ಸಹಾಯ ಮಾಡುತ್ತಿದ್ದರು. ಇಂತಹ ಮಾನವೀಯ ಗುಣಗಳನ್ನು ಸತೀಶ್ ನೀನಾಸಂ ನೆನಪಿಸಿಕೊಂಡಿದ್ದಾರೆ.
ವಿಡಿಯೋದಲ್ಲಿ ಏನಿದೆ?: ಚೀಲಕ್ಕೆ ಅಕ್ಕಿ ತುಂಬುತ್ತಿದ್ದ ವಿಜಯ್‌ಗೆ ತಮಾಷೆ ಮಾಡಿದ ಸತೀಶ್, ರೇಷನ್ ತುಂಬುತ್ತಿರುವುದನ್ನು ನೋಡಿದ್ರೆ ನಿಮಗೆ ಇದರಲ್ಲೂ ನ್ಯಾಷನಲ್ ಅವಾರ್ಡ್ ಬಂದರೂ ಬರಬಹುದು ಎಂದಿದ್ದಾರೆ. ಇದಕ್ಕೆ ವಿಜಯ್, 'ಹೌದೌದು, ಅದು ನ್ಯಾಷನಲ್ ಅವಾರ್ಡ್ ಅಲ್ಲ, ರೇಷನಲ್ ಅವಾರ್ಡ್' ಎಂದು ತಮಾಷೆ ಮಾಡುತ್ತಾ ನಕ್ಕಿದ್ದಾರೆ.
ಈ ವಿಡಿಯೋ ನೋಡುಗರಿಗೆ ಮೆಚ್ಚುಗೆ ಆಗಿದೆ. ಇನ್ನು, ಸಂಚಾರಿ ವಿಜಯ್ ಬದುಕಿದ್ದಾಗಲೂ ಸಾಮಾಜಿಕ ಕಳಕಳಿ ಹೊಂದಿದ್ದರು. ಸತ್ತ ಮೇಲೂ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿರೋದು ಗಮನಾರ್ಹ.
ಓದಿ:ಇಂದು ಸಚಿವರು, ನಾಳೆ ಶಾಸಕರು, ನಾಡಿದ್ದು ಕೋರ್ ಕಮಿಟಿ ಸಭೆ; ಟ್ರಬಲ್ ಶೂಟ್ಗೆ ಅರುಣ್ ಸಿಂಗ್ ಆಗಮನ