ನಿಖಿಲ್ ಕುಮಾರಸ್ವಾಮಿ ಹಾಗು ಕಾಶ್ಮೀರ್ ಪರ್ದೇಸಿ ಅಭಿನಯದ ರೈಡರ್ ಸಿನಿಮಾ ಇದೇ, 24ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಇತ್ತೀಚೆಗೆ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಮಾಡಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ನಿಖಿಲ್, ಮೊದಲಿಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಅವ್ರನ್ನ ಸ್ಮರಿಸುವ ಮೂಲಕ ದೊಡ್ಮನೆ ಬಗ್ಗೆ ಹಲವು ಇಂಟ್ರಸ್ಟಿಂಗ್ ವಿಚಾರಗಳನ್ನ ಹಂಚಿಕೊಂಡರು.
ಅಗಲಿಕೆ ಒಂದು ವಾರದ ಮುಂಚೆ ಅಪ್ಪು ಅಣ್ಣನ ಭೇಟಿ ಮಾಡಿದ್ದೆ. ಅವರು ಬಹಳ ಸರಳ ವ್ಯಕ್ತಿತ್ವದ ನಟ. ನಾನು 'ಜಗ್ವಾರ್' ಸಿನಿಮಾ ಸಂದರ್ಭದಲ್ಲಿ, ಪುನೀತ್ ರಾಜ್‍ಕುಮಾರ್ ಒಂದು ಹೂವಿನ ಬೊಕ್ಕೆ ಕೊಟ್ಟು, ಫೋನ್ ಮಾಡಿ ನಿಮ್ಮ, ತಂದೆ ತಾಯಿ ಹಾಗು ತಾತ ಅಜ್ಜಿಯ ತರ ದೊಡ್ಡ ಮಟ್ಟದಲ್ಲಿ ಬೆಳೆಯಿರಿ ಅಂತಾ ಹೇಳಿದ್ರು. ಹಾಗೇ ನಾನು ಭೇಟಿ ಮಾಡಿದ ಸಮಯದಲ್ಲಿ, ಆ್ಯಕ್ಟಿಂಗ್ ಬಗ್ಗೆ ಪುನೀತ್ ಅಣ್ಣನ ಹತ್ತಿರ ಕೇಳಿ ತಿಳಿದುಕೊಂಡಿದ್ದೆ, ಯಾಕೆಂದರೆ ನನ್ನ ಮುಂದಿನ ಸಿನಿಮಾ ಜರ್ನಿ ಬಗ್ಗೆ ಅಪ್ಪು ಅಣ್ಣನ ಹತ್ತಿರ ಮಾತನಾಡಿದೆ ಅಂತಾ ನಿಖಿಲ್ ಅಪ್ಪುವನ್ನ ಸ್ಮರಿಸಿದರು.
ರಾಘವೇಂದ್ರ ರಾಜ್ ಕುಮಾರ್ ಮನೆಗೆ ಭೇಟಿ ಕೊಟ್ಟಾಗಿ, ಸಿನಿಮಾ ರಾಜಕೀಯ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು. ಆ ಸಂದರ್ಭದಲ್ಲಿ ನಾನು ಕಾರು ಹತ್ತಲು ಹೋದಾಗ, ಸ್ವತಃ ರಾಘಣ್ಣ ಬಂದು ನನಗೆ ಕಾರಿನ ಹತ್ತಿರ ಬಿಟ್ಟು ಹೋದರು. ನಾನು ಬೇಡ ಅಂದೆ. ಅದಕ್ಕೆ ಇದನ್ನ ನಮ್ಮ ತಂದೆಯಿಂದ ಕಲಿತ ಪಾಠ ಅಂದರು.
ಶಿವರಾಜ್ ಕುಮಾರ್ ಅಭಿನಯದ ಗಲಾಟೆ ಅಳಿಯಂದ್ರು ಸಿನಿಮಾ ಟೈಮಲ್ಲಿ ನಾನು ಶಿವಣ್ಣನ ಜೊತೆ ಕಾಲ ಕಳೆದಿದ್ದೇನೆ. ಮುಖ್ಯವಾಗಿ ನನಗೆ ಶಿವಣ್ಣ ಅಭಿನಯದ ಓಂ ಸಿನಿಮಾ ಅಂದ್ರೆ ಪಂಚಪ್ರಾಣ. ಆ ರೀತಿಯ ಒಂದು ಪಾತ್ರವನ್ನ ಮಾಡಬೇಕು ಅನ್ನೋದು ಬಹು ದೊಡ್ಡ ಆಸೆ. ಈ ಆಸೆಯನ್ನ ನಮ್ಮ ನಿರ್ದೇಶಕರು ಒಳ್ಳೆ ಕಥೆ ಮಾಡಿ ಬಂದರೆ ನಾನು ಖಂಡಿತ ಅಭಿನಯಿಸುತ್ತಿನಿ ಅಂತಾ ಕನ್ನಡ ನಿರ್ದೇಶಕರಿಗೆ ಆಫರ್ ಕೊಟ್ಟರು.