ETV Bharat / sitara

ಕಾಲಿವುಡ್​ ನಟನೊಂದಿಗೆ ರಿಲೇಶನ್​ಶಿಪ್; ಸಿಹಿ ಸುದ್ದಿ ಕೊಡಲಿದ್ದಾರಾ ಬೆಂಗಳೂರಿನ ಬೆಡಗಿ ನಿಧಿ ಅಗರ್ವಾಲ್? - Nidhhi Agerwal Wants To Marry With Kollywood Star Simbu

ಕಾಲಿವುಡ್​ ನಟನೊಂದಿಗೆ ರಿಲೇಶನ್​ಶಿಪ್ ಹೊಂದಿರುವ ಬೆಂಗಳೂರಿನ ಬೆಡಗಿ ನಿಧಿ ಅಗರ್ವಾಲ್ ತಮ್ಮ ಅಭಿಮಾನಿಗಳಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಿದ್ದಾರೆ. ವೃತ್ತಿ ಜೀನವದ ಜೊತೆ ಹೊಸ ಪ್ರಪಂಚಕ್ಕೆ ಕಾಲಿಡಲು ಅವರು ಸಜ್ಜಾಗಿದ್ದಾರೆ.

Nidhhi Agerwal Wants To Marry With Kollywood Star Simbu
ನಿಧಿ ಅಗರ್ವಾಲ್
author img

By

Published : Jan 10, 2022, 4:49 PM IST

ಚೆನ್ನೈ: ಟಾಲಿವುಡ್​ ನಟಿ ನಿಧಿ ಅಗರ್ವಾಲ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಜೀವನದ ಹೊಸ ಅಡಿ ಇಡಲು ತುದಿಗಾಲ ಮೇಲೆ ನಿಂತಿರುವ ನಿಧಿ ಅಗರ್ವಾಲ್, ಕಾಲಿವುಡ್​ ಸೂಪರ್​ ಸ್ಟಾರ್​ ಸಿಂಬು ಅವರ ಜೊತೆ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ.

Nidhhi Agerwal Wants To Marry With Kollywood Star Simbu
ನಿಧಿ ಅಗರ್ವಾಲ್

'ಸವ್ಯಸಾಚಿ' ಚಿತ್ರದ ಮೂಲಕ ಎಂಟ್ರಿಕೊಟ್ಟ ನಿಧಿ ಇದೀಗ ಸೌಥ್​ ಸಿನಿಮಾ ಕ್ಷೇತ್ರಕ್ಕೆ ಬೇಡಿಕೆಯ ನಟಿ. ಮುಗ್ಧ ಅಭಿನಯದಿಂದಲೇ ಗಮನ ಸೆಳೆದಿರುವ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವೃತ್ತಿ ಜೀನವದಲ್ಲಿ ಜೊತೆಯಾದ ತಮಿಳು ನಟ ಸಿಂಬು ಅವರನ್ನು ಶೀಘ್ರದಲ್ಲೇ ಮದುವೆ ಆಗಲಿದ್ದಾರಂತೆ.

ಟಾಲಿವುಡ್​ನ 'ಇಸ್ಮಾರ್ಟ್ ಶಂಕರ್' ಚಿತ್ರದ ಯಶಸ್ಸಿನ ನಂತರ ಕಾಲಿವುಡ್​ನಲ್ಲಿಯೂ ಕಾಲೂರಿರುವ ನಿಧಿ ಅಲ್ಲಿಯೂ ಸಹ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚೆಗೆ ತೆರೆಕಂಡ ಶಿಂಬು ನಟನೆಯ ತಮಿಳು ‘ಈಶ್ವರನ್’ ಚಿತ್ರದಲ್ಲಿ ನಿಧಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಫ್ಯಾಮಿಲಿ, ಆ್ಯಕ್ಷನ್ ಮತ್ತು ಎಂಟರ್‌ಟೈನರ್​​ ಆಗಿದ್ದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಹಣ ಗಳಿಸುವಲ್ಲಿ ಯಶಸ್ಸು ಕಂಡಿತ್ತು. ಚಿತ್ರದಲ್ಲಿ ಸಿಂಬು ಮತ್ತು ನಿಧಿ ಜೋಡಿ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ನೀಡಿದ್ದರು.

ನಿಧಿ ಅಗರ್ವಾಲ್ ಮತ್ತು ಸಿಂಬು

ಆ ದಿನ ಆರಂಭವಾದ ಇವರಿಬ್ಬರ ನಡುವಿನ ಸ್ನೇಹ ಇಂದು ಪ್ರೀತಿಗೆ ತಿರುಗಿದೆ ಎಂದು ಹೇಳಲಾಗುತ್ತಿದೆ. ಆಗಾಗ್ಗೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಈ ಜೋಡಿ ಸದ್ಯದಲ್ಲೇ ಸಿಹಿ ಸುದ್ದಿ ನೀಡಲಿದ್ದಾರೆ ಎಂಬ ಸುದ್ದಿ ಕಾಲಿವುಡ್​​​ನಲ್ಲಿ ಹರಿದಾಡುತ್ತಿದೆ.

ಸದ್ಯ ಇವರಿಬ್ಬರು ಸಹಬಾಳ್ವೆ (Live in relationship​) ನಡೆಸುತ್ತಿದ್ದಾರೆಂದೂ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ನಿಧಿ ಮತ್ತು ಶಿಂಬು ತಮ್ಮ ಸಂಬಂಧದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಆದರೆ, ಹರಿದಾಡುತ್ತಿರುವ ಈ ವದಂತಿಗೆ ಶೀಘ್ರದಲ್ಲೇ ಫುಲ್​​ಸ್ಟಾಪ್ ಹಾಕಲು ಬಯಸಿದ್ದಾರೆ ಎಂಬ ಮಾತು ಇದೆ.

ನಟ ಶಿಂಬು ಈ ಹಿಂದೆ ಹಲವಾರು ಸ್ಟಾರ್ ಹೀರೋಯಿನ್‌ಗಳೊಂದಿಗೆ ಡೇಟಿಂಗ್​ ಹೊಂದಿದ್ದರು. ಕೆಲವರ ಜೊತೆ ಹೊಂದಿದ್ದ ಸಂಬಂಧಕ್ಕೂ ಬ್ರೇಕಪ್​ ಮಾಡಿಕೊಂಡಿದ್ದಾರೆ. ನಟಿ ನಿಧಿ ಅಗರ್ವಾಲ್ ಕೂಡ ಒಬ್ಬ ಸ್ಟಾರ್​ ಕ್ರಿಕೆಟಿಗನನ್ನು ಪ್ರೀತಿಸುತ್ತಿದ್ದರು. ಅವರನ್ನೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು.

ಇದನ್ನೂ ಓದಿ: ನೋಡಿ: ಗೋವಾದಲ್ಲಿ ವಿಜಯ್‌ ದೇವರಕೊಂಡ ಜೊತೆ ರಶ್ಮಿಕಾ ನ್ಯೂ ಇಯರ್ ಪಾರ್ಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.