ಹಯವದನ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಫ್ಯಾಂಟಸಿ ಧಾರಾವಾಹಿ ನಾಗಿಣಿ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹಿಂದಿಯ 'ನಾಗಿಣ್' ರೀಮೇಕ್ ಆಗಿರುವ ಕನ್ನಡದ 'ನಾಗಿಣಿ' ಸಾಕಷ್ಟು ವೀಕ್ಷಕರನ್ನು ತನ್ನೆಡೆಗೆ ಸೆಳೆದಿಟ್ಟುಕೊಂಡಿದೆ.
![nagini 1000th episode today](https://etvbharatimages.akamaized.net/etvbharat/prod-images/5181533_thumb1.jpg)
ಈ ಧಾರಾವಾಹಿಯು ಸಾವಿರ ದಿನಕ್ಕೆ ಕಾಲಿಟ್ಟ ಖುಷಿಯಲ್ಲಿ ಅರ್ಜುನ್ ಪಾತ್ರಧಾರಿ ದೀಕ್ಷಿತ್ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರಿಗೆ ಹಾಗೂ ಧಾರಾವಾಹಿಯ ಇಡೀ ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಪ್ರೀತಿ, ಹಾರೈಕೆಯಿಂದ ಸಾವಿರ ಎಪಿಸೋಡ್ ಪೂರೈಸಲು ಸಾಧ್ಯವಾಯಿತು. ನಿಮ್ಮ ಪ್ರೀತಿಗೆ ತಲೆ ಬಾಗುತ್ತೇನೆ ಎಂದಿದ್ದಾರೆ.
![nagini 1000th episode today](https://etvbharatimages.akamaized.net/etvbharat/prod-images/5181533_thumb2.jpg)
ನಾಗ ಲೋಕದ ನಾಗಿಣಿ ತನ್ನ ದ್ವೇಷ ತೀರಿಸಿಕೊಳ್ಳುವುಕ್ಕಾಗಿ ನಾಗಮಣಿಯನ್ನು ಕದ್ದು ತಂದಿರುವ ಕುಟುಂಬದವರ ವಿರುದ್ಧ ಮನುಷ್ಯ ರೂಪದಲ್ಲಿ ಬರುವ ಕಥೆಯೇ ನಾಗಿಣಿ. ಮುಂದೆ ಅವಳು ನಾಗಮಣಿ ಪಡೆಯುವುದು ಹೇಗೆ, ತನ್ನ ಲೋಕಕ್ಕೆ ಮರಳುವುದು ಹೇಗೆ ಎಂಬುದೆಲ್ಲಾ ಕುತೂಹಲ. ಯಾಕೆಂದರೆ ಇನ್ನೇನು ಈ ಧಾರಾವಾಹಿ ಮುಕ್ತಾಯದ ಹಂತದಲ್ಲಿದ್ದು, 'ನಾಗಿಣಿ-2' ಕೂಡಾ ಬರಲಿರುವುದು ಗೊತ್ತಿದೆ.
![nagini 1000th episode today](https://etvbharatimages.akamaized.net/etvbharat/prod-images/5181533_thumb4.jpg)
ವೀಕ್ಷಕರನ್ನು ವಿಭಿನ್ನ ಲೋಕಕ್ಕೆ ಕರೆದೊಯ್ಯುತ್ತಿದ್ದ ನಾಗಿಣಿ ಧಾರಾವಾಹಿಯ 1000ನೇ ಸಂಚಿಕೆ ಪ್ರಸಾರವಾಗಲಿದೆ. ಇಚ್ಛಾಧಾರಿಣಿ ನಾಗಿಣಿಯಾಗಿ ದೀಪಿಕಾ ದಾಸ್ ಗಮನ ಸೆಳೆದರೆ, ನಾಯಕ ಅರ್ಜುನ್ ಆಗಿ ದೀಕ್ಷಿತ್ ಶೆಟ್ಟಿ ನಟಿಸಿದ್ದಾರೆ. ಈಗಾಗಲೇ ಧಾರಾವಾಹಿಯು ಕುತೂಹಲದ ಘಟ್ಟ ತಲುಪಿದ್ದು ಏನಾಗಲಿದೆ, ಧಾರಾವಾಹಿ ಹೇಗೆ ಮುಕ್ತಾಯಗೊಳ್ಳಲಿದೆ ಎಂಬ ಕಾತರ ವೀಕ್ಷಕರಿಗಿದೆ. ಧಾರಾವಾಹಿಯ ನಾಯಕಿ ಅಮೃತ ಪಾತ್ರಧಾರಿ ಇದೀಗ ಬಿಗ್ ಬಾಸ್ ಮನೆಯಲ್ಲಿದ್ದಾರೆ.
- " class="align-text-top noRightClick twitterSection" data="
">