ETV Bharat / sitara

ಸ್ನೇಹಿತನ ಮದುವೆಗೆ ದೊಡ್ಡ ಗಿಫ್ಟ್​​​ ಕೊಡಲು ರೆಡಿಯಾದ ಸಂಗೀತ ನಿರ್ದೇಶಕ ಡಾ. ಕಿರಣ್​

ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಮದುವೆಯಾಗುತ್ತಿರುವ ತಮ್ಮ ಗೆಳೆಯನಿಗಾಗಿ ಸಂಗೀತ ನಿರ್ದೇಶಕ ಡಾ. ಕಿರಣ್ ಆಲ್ಬಂ ಹಾಡನ್ನು ಗಿಫ್ಟ್ ಆಗಿ ನೀಡಲು ಹೊರಟಿದ್ದಾರೆ. ಈ ಹಾಡನ್ನು ಬಿಡುಗಡೆ ಮಾಡಲು ತಮ್ಮದೇ 'ಆಲಾಪ' ಎಂಬ ಆಡಿಯೋ ಸಂಸ್ಥೆಯನ್ನು ಕಿರಣ್ ಆರಂಭಿಸಿದ್ದಾರೆ.

Music director Dr Kiran
ಡಾ. ಕಿರಣ್​
author img

By

Published : Jul 27, 2020, 5:30 PM IST

ಕೊರೊನಾ ವಾರಿಯರ್ ಆಗಿ ಗಮನ ಸೆಳೆದಿದ್ದ ಸಂಗೀತ ನಿರ್ದೇಶಕ ಡಾ. ‌ಕಿರಣ್ ತೋಟಂಬೈಲು, ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ವೈದ್ಯ ಸೇವೆ ಜೊತೆಗೆ ಸಂಗೀತ ನಿರ್ದೇಶಕ‌ರಾಗಿ ಬ್ಯುಸಿ ಇರುವ ಡಾ.ಕಿರಣ್ ಈಗ ಆಡಿಯೋ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ.

ಅನುರಾಧಾ ಭಟ್

'ಆಲಾಪ' ಎಂಬ ಆಡಿಯೋ ಸಂಸ್ಥೆ ಆರಂಭಿಸಿರುವ ಕಿರಣ್, ಆಗಸ್ಟ್ 10ರಂದು 'ಆಲಾಪ' ಆಡಿಯೊದಲ್ಲಿ ಮೊದಲ ಹಾಡನ್ನು ರಿಲೀಸ್ ಮಾಡಲು ಭರ್ಜರಿ ತಯಾರಿ ಮಾಡಿದ್ದಾರೆ. ಇನ್ನು ಈ ಆಡಿಯೋ ಸಂಸ್ಥೆಯನ್ನು ಆರಂಭಿಸಲು ಕಾರಣ ಕೇಳಿದರೆ ಎಲ್ಲರಿಗೂ ಆಶ್ಚರ್ಯ ಆಗೋದು ಖಂಡಿತ. ಕಿರಣ್ ಈ ಆಡಿಯೋ ಸಂಸ್ಥೆಯನ್ನು ಹುಟ್ಟುಹಾಕಲು ಅವರ ಗೆಳೆಯನ ಲವ್ ಸ್ಟೋರಿ ಕಾರಣವಂತೆ.

ಸ್ನೇಹಿತನ ಮದುವೆಗೆ ಆಲ್ಬಂ ರೆಡಿ ಮಾಡುತ್ತಿರುವ ಡಾ. ಕಿರಣ್

ಡಾ.ಕಿರಣ್ ನಗರದ ಬಿಜಿಎಸ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದೇ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿರುವ ಕಿರಣ್ ಸ್ನೇಹಿತ ಡಾ. ಹರ್ಷ ಅವರ ಲವ್​​​ಸ್ಟೊರಿ 'ಆಲಾಪ' ಹುಟ್ಟಿಗೆ ಕಾರಣ. ಡಾ. ಹರ್ಷ ಪಿಯುಸಿ ಓದುವಾಗಲೇ ಪ್ರೀತಿ‌ಯಲ್ಲಿ ಬಿದ್ದಿದ್ದಾರೆ. ಆದರೆ ಇವರ ಪ್ರೀತಿಗೆ ಜಾತಿ ಅಡ್ಡ ಬಂದಿದ್ದರಿಂದ ಜೀವನದಲ್ಲಿ ಏನಾದರೂ ಸಾಧನೆ ಮಾಡಿ ಬಂದು ನಿಮ್ಮ ಮನೆಯಲ್ಲಿ ಹೆಣ್ಣು ಕೇಳುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಅವರ ಪ್ರೇಯಸಿ ಕೂಡಾ ಒಪ್ಪಿದ್ದಾರೆ. ನಂತರ ಇಬ್ಬರೂ ತಮ್ಮ ವಿದ್ಯಾಭ್ಯಾಸ ಹಾಗೂ ಕರಿಯರ್​​​​ನತ್ತ ಗಮನ ನೀಡಿದ್ಧಾರೆ.

ಕೆಲವು ವರ್ಷಗಳ ನಂತರ ಹರ್ಷ ವೈದ್ಯರಾದರೆ, ಅವರ ಪ್ರೇಯಸಿ ಇಂಜಿನಿಯರ್ ಪದವಿ ಪಡೆದು ಪ್ರಸಿದ್ಧ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಈ ಜೋಡಿ ಪ್ರೀತಿಗೆ ಮನೆಯವರು ಒಪ್ಪಿಗೆ ನೀಡಿ ನಿಶ್ಚಿತಾರ್ಥ ಕೂಡಾ ನೆರವೇರಿಸಿದ್ದಾರೆ. ಇದೇ ಆಗಸ್ಟ್ 10 ರಂದು ಇಬ್ಬರ ಮದುವೆ ನೆರವೇರುತ್ತಿದೆ.

Music director Dr Kiran
ಸ್ನೇಹಿತನ ನಿಶ್ಚಿತಾರ್ಥದಲ್ಲಿ ಡಾ. ಕಿರಣ್ ತೋಟಂಬೈಲು

ಸ್ನೇಹಿತನ ಲವ್ ಸ್ಟೋರಿ ಬಗ್ಗೆ ಇತ್ತೀಚೆಗಷ್ಟೇ ತಿಳಿದ ಡಾ.ಕಿರಣ್ ಸಖತ್ ಥ್ರಿಲ್ ಆಗಿದ್ದಾರೆ. ಈ ಜೋಡಿಗಳಿಗೆ ಏನಾದರೂ ಸ್ಪೆಷಲ್ ಗಿಫ್ಟ್ ಕೊಡಬೇಕು ಎಂದು ನಿರ್ಧರಿಸಿ ಒಂದು ಹಾಡು ಬರೆದು ಕಂಪೋಸ್ ಮಾಡಿದ್ದಾರೆ. ಈ ಹಾಡನ್ನು ರಾಜೇಶ್ ಕೃಷ್ಣ ಹಾಗೂ ಅನುರಾಧಾ ಭಟ್ ಹಾಡಿದ್ದಾರೆ. ಈ ಹಾಡನ್ನು ಬಿಡುಗಡೆ ಮಾಡುವ ಸಲುವಾಗಿಯೇ 'ಆಲಾಪ' ಆಡಿಯೋ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ ಕಿರಣ್. ಆಗಸ್ಟ್ 10 ರಂದು ನಮ್ಮ ಸಂಸ್ಥೆ ಮೂಲಕ ಸ್ಯಾಂಡಲ್​ವುಡ್​ ಸ್ಟಾರ್​ವೊಬ್ಬರು ಆಲ್ಬಂ ಬಿಡುಗಡೆ ಮಾಡಲಿದ್ದಾರೆ ಎಂದು ಕಿರಣ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.