ಇತ್ತೀಚೆಗಷ್ಟೇ ಮೇಘನಾ ರಾಜ್ ಖಾಸಗಿ ಹೊಟೇಲ್ವೊಂದರಲ್ಲಿ ಅದ್ಧೂರಿ ಬೇಬಿ ಶವರ್ ಕಾರ್ಯಕ್ರಮ ಮಾಡಿಕೊಂಡಿದ್ರು. ಇದೀಗ ಸದ್ಯದಲ್ಲೇ ಜೂನಿಯರ್ ಚಿರಂಜೀವಿ ಸರ್ಜಾ ಬರುವ ನಿರೀಕ್ಷೆಯಲ್ಲಿರೋ ನಟಿ ಮೇಘನಾ ರಾಜ್, ತಮ್ಮ ತಾಯ್ತನದ ಬಗ್ಗೆ ಭಾವನಾತ್ಮಕ ವಿಡಿಯೋವನ್ನ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಮೇಘನಾ ರಾಜ್ ಮಗುವಾಗಿದ್ದಾಗ, ನಂತರ ಬಾಲ್ಯ ಹಾಗು ತಮ್ಮ ಮದುವೆ ಸಂಭ್ರಮದ ಕ್ಷಣ ಹೊಂದಿರುವ ಆಲ್ಬಂನ್ನ ನೋಡುತ್ತಾ, ನನ್ನ ಪ್ರೀತಿಯ ಚಿರು, ನನ್ನ ಬದುಕಿನ ಅಮೂಲ್ಯ ಕ್ಷಣಗಳ ನಿನ್ನ ಜೊತೆ ಕಳೆದಿದ್ದೇನೆ. ಆ ಕ್ಷಣಗಳೇ ನನ್ನ ನಿತ್ಯ ಬದುಕಿಗೆ ಸ್ಫೂರ್ತಿ ತುಂಬುತ್ತಿದೆ.
ನೀನು ಇದ್ದಾಗ ಏನು ಕೊರತೆ ಇಲ್ಲದಂತೆ ನೋಡಿಕೊಂಡಿದ್ದೆ, ಆ ನೆನಪುಗಳೇ ನನಗೀಗ ಬದುಕಾಗಿದೆ. ನಿನ್ನ ಆಶೀರ್ವಾದದೊಂದಿಗೆ ಈಗ ನನ್ನ ತಾಯ್ತನದ ಜರ್ನಿ ಸಾಗುತ್ತಿದೆ. ಈ ಸಮಯದಲ್ಲಿ ನಾನು ನಿನಗೊಂದು ಪ್ರಾಮಿಸ್ ಮಾಡ್ತಿನಿ.
ನನ್ನ ಮಗುವನ್ನ ಮಾನವೀಯ ವ್ಯಕ್ತಿಯಾಗಿ ಬೆಳೆಸುತ್ತೇನೆ. ನಿನ್ನ ಹಾಗೆಯೇ ಮತ್ತೆ ಹೊಸ ಕನಸಿನೊಂದಿಗೆ ಹೊಸ ಬದುಕನ್ನ ಕಟ್ಟಿಕೊಳ್ಳುತ್ತೇನೆ ಅಂತಾ ಮೇಘನಾ ರಾಜ್ ಎಮೋಷನಲ್ ಮಾತುಗಳನ್ನಾಡಿರುವ ವಿಡಿಯೋ ಇದಾಗಿದೆ.