ದಿವಂಗತ ನಟ, ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ದಂಪತಿಗೆ ಪುತ್ರ ಜನಿಸಿ ಸುಮಾರು 11 ತಿಂಗಳು ಕಳೆದಿದೆ. ಇದೀಗ ನಟಿ ಮೇಘನಾ ರಾಜ್ ತನ್ನ ಮುದ್ದು ಮಗನಿಗೆ ನಾಮಕರಣ ಮಾಡಲು ಮುಂದಾಗಿದ್ದಾರೆ. ಇಲ್ಲಿಯವರೆಗೆ ಸಾಕಷ್ಟು ಸಸ್ಪೆನ್ಸ್ ಆಗಿದ್ದ ಜೂನಿಯರ್ ಚಿರುವಿನ ನಿಜವಾದ ಹೆಸರು ನಾಳೆ (ಸೆಪ್ಟೆಂಬರ್,3) ಬಹಿರಂಗವಾಗಲಿದೆ.
ಈ ಬಗ್ಗೆ ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ, ನಾಮಕರಣಕ್ಕೆ ಸಂಬಂಧಿಸಿದ ಸ್ಪೆಷಲ್ ವಿಡಿಯೋ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಈವರೆಗೆ ಮಗನಿಗೆ ಕರೆಯಲಾಗುತ್ತಿದ್ದ ಕೆಲವು ಹೆಸರುಗಳನ್ನು ಉಲ್ಲೇಖಿಸಿ, ಅಧಿಕೃತ ಹೆಸರನ್ನು ನಾಳೆ ತಿಳಿಸುವುದಾಗಿ ಬರೆದುಕೊಂಡಿದ್ದಾರೆ.
'ನಮ್ಮ ರಾಜಕುಮಾರನಿಗೆ ಈಗ ಹೆಸರು ಇಡಲಾಗಿದೆ. ಅವನ ಕುರಿತು ಎಲ್ಲರಿಂದ ನನಗೆ ಎದುರಾಗುತ್ತಿದ್ದ ಮೊದಲ ಪ್ರಶ್ನೆಯೇ ನಿಮ್ಮ ಮಗನ ಹೆಸರು ಏನು? ಎಂಬುದು. ಈಗ ರಾಜ ತನ್ನ ಮಗನಿಗೆ ಒಂದು ಹೆಸರು ಆಯ್ಕೆ ಮಾಡಿದ್ದಾನೆ. ಅದೇನು ಎಂಬುದನ್ನು ಸೆಪ್ಟೆಂಬರ್ 3ರಂದು ತಿಳಿಸುತ್ತೇನೆ' ಎಂದು ಮೇಘನಾ ರಾಜ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇಷ್ಟು ದಿನ ಜೂನಿಯರ್ ಚಿರುವಿಗೆ ಹಲವು ಹೆಸರುಗಳಿಂದ ಕರೆಯಲಾಗುತ್ತಿತ್ತು. ಮೇಘನಾ ತಂದೆ ಸುಂದರ್ ರಾಜ್ ಅವರು 'ಚಿಂಟು' ಎಂದು ಕರೆಯುತ್ತಿದ್ದರು. ಮೇಘನಾ 'ಸಿಂಬಾ', ಸ್ನೇಹಿತರು ಹಾಗು ಸಂಬಂಧಿಕರು 'ಸಿಂಗ', ಲಿಟ್ಲ್ ಚಿರು ಅಂತಾ ಹಲವಾರು ಹೆಸರುಗಳ ಮೂಲಕ ಆಪ್ತರು ಮಗುವನ್ನು ಮುದ್ದಾಗಿ ಕರೆಯುತ್ತಿದ್ದರು. ಈಗ ಚಿರಂಜೀವಿ ಸರ್ಜಾ ಹಾಗೂ ಮೇಘನಾ ಮಗನ ನಿಜವಾದ ಹೆಸರೇನು ಎಂಬುದನ್ನು ತಿಳಿದುಕೊಳ್ಳಲು ಫ್ಯಾನ್ಸ್ ಕಾಯುತ್ತಿದ್ದಾರೆ.
ಕಳೆದ ವರ್ಷ ಜೂನ್ 7ರಂದು ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು. ಆಗ ನಟಿ ಮೇಘಾನಾರಾಜ್ ಐದು ತಿಂಗಳ ಗರ್ಭಿಣಿಯಾಗಿದ್ದರು.
ಇದನ್ನೂ ಓದಿ: ದಿವಂಗತ ನಟ ಸಂಚಾರಿ ವಿಜಯ್ ನಟನೆಯ 'ಪುಗ್ಸಟ್ಟೆ ಲೈಫು ಪುರಸೊತ್ತೇ ಇಲ್ಲ' ರಿಲೀಸ್‌ಗೆ ರೆಡಿ