ಇತ್ತೀಚೆಗಷ್ಟೇ ಮೆಗಾಸ್ಟಾರ್ ಚಿರಂಜೀವಿ ಟಾಲಿವುಡ್ನಲ್ಲಿ ತಮ್ಮ 40 ವರ್ಷಗಳ ಜರ್ನಿಯನ್ನು ಪೂರ್ಣಗೊಳಿಸಿದ್ದಾರೆ. ಚಿರಂಜೀವಿಗೆ ಕಾಲಿವುಡ್, ಟಾಲಿವುಡ್, ಸ್ಯಾಂಡಲ್ವುಡ್ ಸೇರಿದಂತೆ ಸಾಕಷ್ಟು ಗಣ್ಯರು ಶುಭಾಶಯ ಕೋರಿದ್ದಾರೆ.
-
Syeraa shooting completed !!Thanx to each n every member of Team Syeraa for their hard work n cooperation .A memorable journey indeed!! Movie has shaped out extremely well💪💪. Kick started the DI too 😊 @KonidelaPro @DirSurender pic.twitter.com/wjBZM3gZLE
— Rathnavelu ISC (@RathnaveluDop) June 24, 2019 " class="align-text-top noRightClick twitterSection" data="
">Syeraa shooting completed !!Thanx to each n every member of Team Syeraa for their hard work n cooperation .A memorable journey indeed!! Movie has shaped out extremely well💪💪. Kick started the DI too 😊 @KonidelaPro @DirSurender pic.twitter.com/wjBZM3gZLE
— Rathnavelu ISC (@RathnaveluDop) June 24, 2019Syeraa shooting completed !!Thanx to each n every member of Team Syeraa for their hard work n cooperation .A memorable journey indeed!! Movie has shaped out extremely well💪💪. Kick started the DI too 😊 @KonidelaPro @DirSurender pic.twitter.com/wjBZM3gZLE
— Rathnavelu ISC (@RathnaveluDop) June 24, 2019
ಇನ್ನು ಮೆಗಾಸ್ಟಾರ್ ಅಭಿನಯದ 151ನೇ ಸಿನಿಮಾ 'ಸೈ ರಾ ನರಸಿಂಹರೆಡ್ಡಿ' ಶೂಟಿಂಗ್ ಕೂಡಾ ಪೂರ್ಣಗೊಂಡಿದೆ. ಚಿತ್ರದ ಕ್ಯಾಮರಾಮ್ಯಾನ್ ರತ್ನವೇಲು ತಮ್ಮ ಟ್ವಿಟರ್ನಲ್ಲಿ ಸಿನಿಮಾದ ಶೂಟಿಂಗ್ ಮುಗಿದಿರುವುದಾಗಿ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಚಿತ್ರಕ್ಕಾಗಿ ಶ್ರಮಪಟ್ಟು ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಸಿನಿಮಾ ನಿಜಕ್ಕೂ ಬಹಳ ಚೆನ್ನಾಗಿ ಬಂದಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭಗೊಂಡಿದೆ ಎಂದು ಹೇಳಿಕೊಂಡಿದ್ದಾರೆ.
ಸುರೇಂದ್ರ ರೆಡ್ಡಿ ನಿರ್ದೇಶನದ ಸಿನಿಮಾವನ್ನು ಕೊನಿಡೇಲ ಪ್ರೊಡಕ್ಷನ್ ಬ್ಯಾನರ್ ಅಡಿ ರಾಮ್ಚರಣ್ ತೇಜ ನಿರ್ಮಿಸಿದ್ದಾರೆ. ಅಮಿತಾಬ್ ಬಚ್ಚನ್, ಸುದೀಪ್, ವಿಜಯ್ ಸೇತುಪತಿ, ನಯನತಾರಾ, ತಮನ್ನಾ, ಅನುಷ್ಕಾ, ಜಗಪತಿ ಬಾಬು ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ. ಅಮಿತ್ ತ್ರಿವೇದಿ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ.